Site icon Vistara News

Theft Case : ಈತ ಸೆಲೆಬ್ರಿಟಿ ಮನೆಗಳ್ಳ; ಖಾಲಿ ಸೈಟ್‌ಗಳೇ ಕದ್ದ ಒಡವೆಗಳ ಸೀಕ್ರೆಟ್‌ ಲಾಕರ್‌!

theft case Thief arrested for targeting celebrity homes

ಬೆಂಗಳೂರು: ಆತ ಕಳ್ಳತನಕ್ಕೆ ಒಬ್ಬಂಟಿಯಾಗಿಯೇ ಇಳಿಯುತ್ತಿದ್ದ. ಒಂಟಿ ಮನೆ ಕಣ್ಣಿಗೆ ಬಿದ್ದರೆ ಸಾಕು ಕ್ಷಣಾರ್ಧದಲ್ಲೇ ಲೂಟಿ ಮಾಡಿ (Theft Case) ಪರಾರಿ ಆಗುತ್ತಿದ್ದ. ಅದರಲ್ಲೂ ಸೆಲೆಬ್ರಿಟಿ ಮನೆಗಳಿಗೆ ಗಾಳ ಹಾಕುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಬಂಧಿತ ಆರೋಪಿ.

ಡಬಲ್ ಸೈಟ್ ಇರುವ ಮನೆಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ಖದೀಮ, ಕದ್ದ ಚಿನ್ನವನ್ನು ಮಣ್ಣಿನಲ್ಲಿ ಹೂತಿಟ್ಟು ಎಸ್ಕೇಪ್‌ ಆಗುತ್ತಿದ್ದ. ಗೋವಿಂದರಾಜನಗರ ಪೊಲೀಸರ ವಿಚಾರಣೆ ವೇಳೆ ಕಾರ್ತಿಕ್‌ನ ಖತರ್ನಾಕ್ ಬುದ್ಧಿ ಗೊತ್ತಾಗಿದೆ. ರೈಲ್ವೆ ಕಾಲೋನಿಯಲ್ಲಿ ಮಣ್ಣಿನಲ್ಲಿ ಹೂತಿಟ್ಟಿದ್ದ ಚಿನ್ನಾಭರಣವನ್ನೆಲ್ಲ ಕಾರ್ತಿಕ್‌ನಿಂದ ಹೊರತೆಗಿಸಿದ್ದಾರೆ.

ಬೆಂಗಳೂರು ಒಂದರಲ್ಲೇ ಕಾರ್ತಿಕ್ ವಿರುದ್ಧ 83ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಕರ್ನಾಟಕ ಮಾತ್ರವಲ್ಲದೆ ಚೆನ್ನೈ, ತಿರುಪತಿ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿಯೂ ಕಳ್ಳತನದ ಕೇಸ್‌ ದಾಖಲಾಗಿದೆ. ಆರೋಪಿ ವಿರುದ್ಧ ನ್ಯಾಯಾಲಯದಿಂದ 17 ಅರೆಸ್ಟ್ ವಾರೆಂಟ್ ಬಾಕಿ ಇದೆ.

ಒಂಟಿ ಮನೆಗಳು ಹಾಗೂ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈತ ಯಾವಾಗಲೂ ಒಂಟಿಯಾಗಿ ಕಳ್ಳತನಕ್ಕೆ ಇಳಿಯುತ್ತಿದ್ದ. ಆದರೆ ಈ ಬಾರಿ ಕಾರ್ತಿಕ್ ಇಬ್ಬರು ಸಹಚರ ಜತೆಗೆ ಸೇರಿ ಕಳ್ಳತನಕ್ಕೆ ಇಳಿದು ಲಾಕ್‌ ಆಗಿದ್ದಾನೆ. ಈ ಹಿಂದೆ ಕೊಲೆ ಕೇಸ್‌ನಲ್ಲಿ ಭಾಗಿಯಾಗಿದ್ದ ದಿಲೀಪ್ ಹಾಗೂ ಅರ್ಜುನ್ ಎಂಬುವರ ಜತೆಗೆ ಸೇರಿಸಿಕೊಂಡು ಕಳ್ಳತನ ಮಾಡಿದ್ದಾನೆ. ಸದ್ಯ ಆರೋಪಿಗಳಿಂದ 70 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಅತ್ತೆ ಮನೆಗೆ ಕನ್ನ ಹಾಕಿದ ಅಳಿಯ! ಉಂಡು ಹೋದ ಕೊಂಡು ಹೋದ

ಬೆಂಗಳೂರು: ಅತ್ತೆ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಒಳಗೆ ನುಗ್ಗಿದ ಖದೀಮ ಅಳಿಯ ಚಿನ್ನಾಭರಣವನ್ನೆಲ್ಲ ಲೂಟಿ ಮಾಡಿ ಪರಾರಿ (Theft Case) ಆಗಿದ್ದ. ಇದೀಗ ಚಲಾಕಿ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಕುಮಾರ್ ಬಂಧಿತ ಆರೋಪಿ.

ರೆಜಿನಾ ಎಂಬುವವರ ಮನೆಯಲ್ಲಿ ಪ್ರದೀಪ್‌ ಕುಮಾರ್‌ ಕಳ್ಳತನ ಮಾಡಿ ಜೈಲು ಕಂಬಿ ಎಣಿಸುವಂತಾಗಿದೆ. ಈ ಪ್ರದೀಪ್‌ ಕುಮಾರ್‌ ರೆಜಿನಾ ಅವರ ಚಿಕ್ಕ ಮಗಳು ಲಾವಣ್ಯಾಳನ್ನು ಒಂದೂವರೆ ವರ್ಷ ಪ್ರೀತಿಸಿ ಬಳಿಕ ಆಕೆಯನ್ನು ಮರುಳು ಮಾಡಿ ಕರೆದುಕೊಂಡು ಹೋಗಿದ್ದ. ದೂರು ದಾಖಲಾಗುತ್ತಿದ್ದಂತೆ ಮಾವನ ಮನೆಯನ್ನು ಸೇರಿದ್ದ.

ಅತ್ತೆ ಮನೆಯಲ್ಲೇ ಕಳ್ಳತನ ಮಾಡಿದ್ದ ಪ್ರದೀಪ್‌ ಕುಮಾರ್‌

ಒಂದೂವರೆ ವರ್ಷದ ಬಳಿಕ ಅತ್ತೆ ಮನೆಗೆ ಕನ್ನ ಹಾಕಿ ಚಿನ್ನಾಭರಣ ಹೊತ್ತೊಯ್ದಿದ್ದಾನೆ. ಅತ್ತೆ ರೆಜಿನಾ ಕನ್ಯಾಕುಮಾರಿಗೆ ಹೋದ ಸಂದರ್ಭದಲ್ಲಿ ಕಳ್ಳತನ ಮಾಡಿದ್ದ. ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಪರಾರಿ ಆಗುತ್ತಿದ್ದಾಗ ಅಕ್ಕ ಪಕ್ಕದ ನಿವಾಸಿಗಳು ನೋಡಿದ್ದರು.

ಇದನ್ನೂ ಓದಿ: Aishwarya Rai: ನಾವು ತುಂಬ ಮಿಸ್‌ ಮಾಡಿಕೊಳ್ಳುತ್ತೇವೆ ಅಪ್ಪ; ಐಶ್ವರ್ಯಾ ರೈ ಭಾವುಕ ಪೋಸ್ಟ್‌!

ಕೂಡಲೇ ಸ್ಥಳೀಯರು ಪ್ರಶ್ನೆ ಮಾಡಿದಾಗ ನಾನು ಇವರ ಸಂಬಂಧಿ ಎಂದು ಹೇಳಿ ಕಾಲ್ಕಿತ್ತಿದ್ದ. ಈ ವೇಳೆ ಸ್ಥಳೀಯರು ಆತನ ಫೋಟೊ ತೆಗೆದು ರೆಜಿನಾ ಅವರಿಗೆ ಕರೆ ಮಾಡಿದ್ದರು. ಆದರೆ ರೆಜಿನಾ ಅವರ ಫೋನ್‌ ಕಾಲ್‌ ಸಂಪರ್ಕ ಸಾಧ್ಯವಾಗಿರಲಿಲ್ಲ. ನಂತರ ಕನ್ಯಾಕುಮಾರಿಯಿಂದ ವಾಪಾಸ್ ಬಂದಾಗ ರೆಜಿನಾ ಅವರಿಗೆ ಶಾಕ್‌ ಆಗಿತ್ತ. ಯಾಕೆಂದರೆ ಬೀಗ ಹಾಕಿದ್ದ ಮನೆ ಬಾಗಿಲು ಒಡೆದಿತ್ತು. ಅನುಮಾನಗೊಂಡು ನೋಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ರೂ. ಕಳ್ಳತನವಾಗಿತ್ತು.

ಕಳ್ಳತನವಾಗಿರುವುದು ಗೊತ್ತಾದ ಕೂಡಲೇ ಅಕ್ಕಪಕ್ಕದ ನಿವಾಸಿಗಳು ತಾವು ನೋಡಿರುವುದಾಗಿ ಹೇಳಿ, ಫೋಟೊ ತೋರಿಸಿದ್ದಾರೆ. ಕಳ್ಳತನ ಮಾಡಿದ್ದ ಸ್ವಂತ ಅಳಿಯನೇ ಎಂದು ತಿಳಿದ ಕೂಡಲೇ ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಅತ್ತೆ ರೆಜಿನಾ ದೂರು ದಾಖಲಿಸಿದ್ದಾರೆ.

ಇನ್ನು ಮಗಳು ಎಲ್ಲಿದ್ದಾಳೆಂದು ಎಂಬುದು ರೆಜಿನಾ ಅವರಿಗೆ ತಿಳಿದಿಲ್ಲವಂತೆ. ಸದ್ಯ ಈ ಸಂಬಂಧ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಅಡವಿಟ್ಟ ಚಿನ್ನವನ್ನೇ ಕದ್ದ ಮ್ಯಾನೇಜರ್‌!

ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನವನ್ನು ಕದ್ದು ನಂತರೆ ಬೇರೆಡೆ ಅಡವಿಟ್ಟ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನಿಧಿ ಗೋಲ್ಡ್ ಫೈನಾನ್ಸ್‌ನ ಮ್ಯಾನೇಜರ್ ಪ್ರಸನ್ನ ಬಂಧಿತ ಆರೋಪಿ.

ನಿಧಿ ಗೋಲ್ಡ್ ಫೈನಾನ್ಸ್‌ನಲ್ಲಿ ಅಡಮಾನವಿಟ್ಟಿದ್ದ ಒಂದೂವರೆ ಕೆ.ಜಿ ಚಿನ್ನ ದುರುಪಯೋಗ ಪಡಿಸಿಕೊಂಡಿದ್ದಾನೆ. ಗ್ರಾಹಕರು ಅಡವಿಟ್ಟ ಚಿನ್ನವನ್ನು ಮಣಪ್ಪುರಮ್ ಹಾಗೂ ಮುತ್ತೂಟ್ ಫೈನಾನ್ಸ್‌ನಲ್ಲಿ ಅಡಮಾನ ಇಟ್ಟಿದ್ದಾನೆ. ಗ್ರಾಹಕರು ಸಾಲ ತೀರಿಸಿ ಚಿನ್ನ ವಾಪಸ್ ಕೇಳಿದಾಗ ಮ್ಯಾನೇಜರ್‌ನ ಕಳ್ಳಾಟ ಬಯಲಾಗಿದೆ. ಬಂಧಿತನಿಂದ ಒಂದೂವರೆ ಕೆ.ಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version