ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು-ಮೈಸೂರು ಹೆದ್ದಾರಿಯ (bengaluru mysuru expressway) ಟೋಲ್ ದರವನ್ನು ಹೆಚ್ಚಳ (Toll Hike) ಮಾಡಿದೆ. ಈ ಮೂಲಕ ವಾಹನ ಸವಾರರಿಗೆ ಟೋಲ್ ಬರೆ ಎಳೆದಿದೆ. ಏಪ್ರಿಲ್ 1ರಿಂದ ಪರಿಷ್ಕೃತ ದರವು ಜಾರಿಯಾಗಲಿದೆ.
ನಿಡಘಟ್ಟ, ಕಣಮಿಣಿಕ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾವರೆಗಿನ 56 ಕಿ.ಮೀ ಉದ್ದದ ಹೆದ್ದಾರಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕರವು ಮಾಹಿತಿ ನೀಡಿದೆ. ಇದರೊಂದಿಗೆ ಹೆದ್ದಾರಿ ಟೋಲ್ ಎರಡು ಬಾರಿ ಪರಿಷ್ಕರಣೆಯಾಗಿದೆ.
ಪ್ರತಿ ಹಣಕಾಸು ವರ್ಷದಂದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಶುಲ್ಕದಲ್ಲೂ ಪರಿಷ್ಕರಣೆ ಮಾಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್ ಆಗಿ ಯುವಕ ಸಾವು
ಕಳೆದ ವರ್ಷ ಏಪ್ರಿಲ್‌ನಲ್ಲಿ ಟೋಲ್ ದರ ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣಕ್ಕೆ ದರ ಹೆಚ್ಚಳವನ್ನು ಕೈ ಬಿಟ್ಟಿತ್ತು. ಆ ಬಳಿಕ ಜೂನ್‌ನಲ್ಲಿ ಏಕಾಏಕಿ ಶೇ.22ರಷ್ಟು ದರ ಹೆಚ್ಚಳಗೊಂಡಿತ್ತು. ಇದೀಗ 9 ತಿಂಗಳ ನಂತರ ಮತ್ತೆ ಟೋಲ್ ಏರಿಕೆ ಆಗಿದೆ.
ಯಾವ ವಾಹನಕ್ಕೆ ಎಷ್ಟು ಶುಲ್ಕ?
ವಾಹನ | ಒನ್ ಸೈಡ್ | ರಿಟರ್ನ್ ಜರ್ನಿ | ತಿಂಗಳ ಪಾಸ್(ಒನ್‌ಸೈಡ್) |
ಕಾರು, ಜೀಪು, ವ್ಯಾನ್ | ₹ 170 | ₹ 255 | ₹ 5,715 |
ಲಘು ವಾಹನ, ಮಿನಿ ಬಸ್ | 275 | 415 | 9,230 |
2 ಆಕ್ಸೆಲ್ ಟ್ರಕ್/ಬಸ್ | 580 | 570 | 19,345 |
3 ಆಕ್ಸೆಲ್ ವಾಣಿಜ್ಯ ವಾಹನ | 635 | 950 | 21,100 |
ಭಾರಿ ವಾಹನ (4-6 ಆಕ್ಸೆಲ್) | 910 | 1,365 | 30,335 |
ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸೆಲ್) | 1,110 | 1,660 | 36,930 |
ವಾಹನ | ಹಳೆ ದರ | ಹೊಸ ದರ | ಹೆಚ್ಚಳ |
ಕಾರು, ಜೀಪು, ವ್ಯಾನ್ | 135 | 170 | 35 |
ಲಘು ವಾಹನ, ಮಿನಿ ಬಸ್ | 220 | 275 | 55 |
2 ಆಕ್ಸೆಲ್ ಟ್ರಕ್/ಬಸ್ | 460 | 580 | 120 |
3 ಆಕ್ಸೆಲ್ ವಾಣಿಜ್ಯ ವಾಹನ | 500 | 635 | 135 |
ಭಾರಿ ವಾಹನ (4-6 ಆಕ್ಸೆಲ್) | 720 | 910 | 190 |
ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸೆಲ್) | 880 | 1,110 | 880 |
ಇನ್ನೂ ಎಲ್ಲಾ ತರಹದ ವಾಹನಗಳು 24 ಗಂಟೆಯೊಳಗೆ ಹಿಂದಿರುಗಿ ಬಂದಲ್ಲಿ ಪಾವತಿಸಬೇಕಾದ ಟೋಲ್‌ನಲ್ಲಿ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. ಅದೇ ರೀತಿ, ಎಲ್ಲಾ ವಾಹನಗಳು ಟೋಲ್ ಪಾವತಿ ದಿನದಿಂದ ಒಂದು ತಿಂಗಳೊಳಗೆ 50 ಬಾರಿ ಹೈವೆಯಲ್ಲಿ ಸಂಚಾರಿಸಿದ್ದರೆ ಶೇ. 35ರಷ್ಟು ರಿಯಾಯಿತಿ ಸಿಗಲಿದೆ. ಯಾವುದೇ ವಾಹನಗಳು ಅನುಮತಿಗಿಂತ ಹೆಚ್ಚಿನ ಸರಕು ಹೊಂದಿದ್ದರೆ ನಿಗದಿತ ಶುಲ್ಕಕ್ಕಿಂತ ಹತ್ತು ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ