Site icon Vistara News

Toll Hike: ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲೂ ಟೋಲ್‌ ದರ ಏರಿಕೆ

devanahalli toll

ದೇವನಹಳ್ಳಿ: ಬೆಂಗಳೂರಿನಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಟೋಲ್ ದರದಲ್ಲೂ ಹೆಚ್ಚಳ ಮಾಡಲಾಗಿದೆ. ನಿನ್ನೆ ತಾನೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಅನ್ನು ಕೂಡ ಏರಿಸಲಾಗಿತ್ತು.

ಏರ್‌ಪೋರ್ಟ್‌ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರೈವೇಟ್ ಲಿ. ಇಂದಿನಿಂದ ಟೋಲ್ ದರ ಏರಿಸಿ ಪ್ರಕಟಣೆ ನೀಡಿದೆ. ಕಾರು, ಜೀಪು, ವ್ಯಾನ್, ಲಘು ‌ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 110 ರೂಪಾಯಿ, 24 ಗಂಟೆಯೊಳಗೆ ಹಿಂತಿರುಗುವ ಶುಲ್ಕ 170 ರೂಪಾಯಿ ಏರಿಸಲಾಗಿದೆ. ಇಷ್ಟು ದಿನ ಏಕಮುಖ ಸಂಚಾರ 105 ಹಾಗೂ ದ್ವಿಮುಖ ಸಂಚಾರ 165 ರೂಪಾಯಿ ಇತ್ತು.

3555 ರೂಪಾಯಿ ಇದ್ದ ಮಾಸಿಕ ಪಾಸ್ ಶುಲ್ಕ 3755 ರೂಪಾಯಿಗೆ ಏರಿಕೆಯಾಗಿದೆ. ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 165ರಿಂದ 170 ರೂಪಾಯಿಗೆ ಏರಿಕೆಯಾಗಿದೆ. ಹಿಂತಿರುಗುವ ಶುಲ್ಕ 245ರಿಂದ 260 ರೂಪಾಯಿಗೆ ಹೆಚ್ಚಿಸಲಾಗಿದೆ. ಮಾಸಿಕ ಪಾಸ್ ದರ 5465 ರೂ.ನಿಂದ 5745 ರೂ.ಗೆ ಏರಿದೆ.

ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರ ದರ 330ರಿಂದ 345 ರೂಪಾಯಿಗೆ, ದ್ವಿಮುಖ ಸಂಚಾರ ದರ 495ರಿಂದ 520 ರೂಪಾಯಿಗೆ, 10990 ರೂಪಾಯಿ ಇದ್ದ ಮಾಸಿಕ ಪಾಸ್ 11550 ರೂಪಾಯಿಗೆ, 3ರಿಂದ 6 ಆಕ್ಸೆಲ್‌ನ ಭಾರೀ ವಾಹನಗಳ ಏಕಮುಖ ಸಂಚಾರ 500ರಿಂದ 525 ರೂಪಾಯಿಗೆ, ದ್ವಿಮುಖ ಸಂಚಾರ 750ರಿಂದ 790 ರೂಪಾಯಿಗೆ, 16,680ರ ಮಾಸಿಕ ಪಾಸ್ ದರ 17,525 ರೂಪಾಯಿಗೆ ಏರಿಸಲಾಗಿದೆ.

7 ಆಕ್ಸೆಲ್ ಹಾಗು ಅದಕ್ಕಿಂತ ಹೆಚ್ಚು ಆಕ್ಸೆಲ್‌ನ ಭಾರೀ ಗಾತ್ರದ ವಾಹನಗಳಿಗೆ ಏಕಮುಖ ಸಂಚಾರ 650ರಿಂದ 685 ರೂಪಾಯಿಗೆ, ದ್ವಿಮುಖ ಸಂಚಾರ 980 ರೂಪಾಯಿಯಿಂದ 1025 ರೂಪಾಯಿಗೆ, 21,730 ರೂಪಾಯಿ ಇದ್ದ ಮಾಸಿಕ ಪಾಸ್ 22,830 ರೂಪಾಯಿಗೆ ಏರಿಸಲಾಗಿದೆ. ಸ್ಥಳೀಯ ಮಾಸಿಕ ಪಾಸ್ 315ರಿಂದ 330 ರೂಪಾಯಿಗೆ ಏರಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಟೋಲ್ ದರ ಜನರಿಗೆ ದುಃಸ್ವಪ್ನವಾಗದಿರಲಿ

Exit mobile version