let-the-toll-rate-not-be-a-nightmare-for-peopleವಿಸ್ತಾರ ಸಂಪಾದಕೀಯ: ಟೋಲ್ ದರ ಜನರಿಗೆ ದುಃಸ್ವಪ್ನವಾಗದಿರಲಿ Vistara News
Connect with us

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಟೋಲ್ ದರ ಜನರಿಗೆ ದುಃಸ್ವಪ್ನವಾಗದಿರಲಿ

ವ್ಯವಸ್ಥಿತ ಹೆದ್ದಾರಿ ನಿರ್ಮಿಸಿದ ಮೇಲೆ ನ್ಯಾಯಯುತವಾಗಿ ಟೋಲ್ ದರ ನಿಗದಿಪಡಿಸುವುದು ತಪ್ಪಲ್ಲ. ಆದರೆ ಇದು ಲೂಟಿಯಂತಾಗಬಾರದು.

VISTARANEWS.COM


on

Koo

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿ 17 ದಿನವಷ್ಟೇ ಕಳೆದಿದೆ. ಇನ್ನೂ ಸರಿಯಾಗಿ ಕಾಮಗಾರಿಯೇ ಪೂರ್ತಿಯಾಗಿ ಮುಗಿದಿಲ್ಲ. ಅಷ್ಟರೊಳಗೇ ಟೋಲ್ ದರವನ್ನು ಶೇ.22ರಷ್ಟು ಏರಿಸಲಾಗಿದೆ. ಏ.1ರಿಂದಲೇ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಕನಿಷ್ಠ 30 ರೂ.ಯಿಂದ ಗರಿಷ್ಠ 305 ರೂ.ವರೆಗೂ ಸುಂಕ ಏರಿಕೆಯಾಗಿದೆ. ಶುಲ್ಕ ನಿಯಮ 2008ರ ಪ್ರಕಾರ ಟೋಲ್ ದರ ಏರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿಕೊಂಡಿದೆ. ಬೆಂಗಳೂರಿನ ದೇವನಹಳ್ಳಿ ಏರ್‌ಪೋರ್ಟ್‌ಗೆ ಹೋಗುವ ರಸ್ತೆಯ ಟೋಲನ್ನೂ ಏರಿಸಲಾಗಿದೆ. ಈ ಬಗ್ಗೆ ಅಥಾಂಗ್ ಟೋಲ್ ವೇ ಪ್ರೈ. ಲಿ. ಪ್ರಕಟಣೆ ಹೊರಡಿಸಿದ್ದು, ಕಾರು, ಜೀಪುಗಳ ಏಕಮುಖ ಸಂಚಾರ ದರವನ್ನು 105 ರೂ.ಯಿಂದ 110 ರೂ.ಗೆ ಏರಿಸಿದೆ. 3555 ರೂ. ಇದ್ದ ಮಾಸಿಕ ಪಾಸ್ ಶುಲ್ಕವನ್ನು 3755 ರೂ.ಗೆ ಏರಿಸಲಾಗಿದೆ. ಭಾರಿ ವಾಹನಗಳ ಟೋಲ್ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಹೀಗೇ ಮುಂದುವರಿದರೆ ಜನತೆಯ ಆಕ್ರೋಶಕ್ಕೆ ಟೋಲ್‌ ತುತ್ತಾಗುವ ದಿನ ದೂರವಿಲ್ಲ.

ವ್ಯವಸ್ಥಿತ ಹೆದ್ದಾರಿ ನಿರ್ಮಿಸಿದ ಮೇಲೆ ನ್ಯಾಯಯುತವಾಗಿ ಟೋಲ್ ದರ ನಿಗದಿಪಡಿಸುವುದು ತಪ್ಪಲ್ಲ. ಆದರೆ ಇದು ಲೂಟಿಯಂತಾಗಬಾರದು. ಜನ ಸಾಮಾನ್ಯರಿಗೆ ಹೊರೆಯಾಗಬಾರದು. ಜನ ಟೋಲ್ ದರದ ಬಿಸಿ ಅನುಭವಿಸುತ್ತ, ಅದರ ಬಗ್ಗೆ ಗೊಣಗುತ್ತಲೇ ಇದ್ದಾರೆ. ಆದರೆ ಸರ್ಕಾರ ಇದನ್ನು ಕಿವಿಗೇ ಹಾಕಿಕೊಳ್ಳುತ್ತಿಲ್ಲ. ಟೋಲ್ ಬೂತ್‌ಗಳನ್ನು ಕಡಿಮೆಗೊಳಿಸಲಾಗುವುದು, ಟೋಲ್ ದರದ ಹೊರೆ ಇಳಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಗಿಂದಾಗ ಹೇಳಿಕೆ ನೀಡುತ್ತಲೇ ಇರುತ್ತಾರೆ. ಆದರೆ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ. ಅಸಮರ್ಪಕ ಟೋಲ್ ದರದ ವಿರುದ್ಧ ಜನ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಸುರತ್ಕಲ್‌ನಲ್ಲಿ 60 ಕಿ.ಮೀ ಮಧ್ಯಂತರದಲ್ಲಿ ಯಾವುದೇ ಟೋಲ್‌ ಬೂತ್‌ಗಳು ಇರುವಂತಿಲ್ಲ ಎಂದು ನಿಯಮವನ್ನು ಮೀರಿ ಕಾರ್ಯಾಚರಿಸುತ್ತಿದ್ದ ಎರಡು ಟೋಲ್‌ಗಳ ವಿರುದ್ಧ ಜನ ಪ್ರತಿಭಟಿಸಿದ್ದನ್ನು, ಒಂದನ್ನು ಕಿತ್ತು ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 2015ರಲ್ಲಿ ಹೊಸಕೋಟೆಯ ಬಳಿ ಒಂದು ಟೋಲ್‌ ಬೂತ್‌ ಪ್ರತಿಭಟಿಸಿದ ನಾಗರಿಕರು ಅದಕ್ಕೆ ಬೆಂಕಿ ಹಚ್ಚಿ ನಾಶಪಡಿಸಿದ್ದರು. ಮಹಾರಾಷ್ಟ್ರವೂ ಸೇರಿದಂತೆ ಹಲವೆಡೆ ಈ ಟೋಲ್‌ ಬೂತ್‌ಗಳ ಬಗ್ಗೆ ಜನತೆ ಹೊಂದಿರುವ ಆಕ್ರೋಶವು ಭಾರಿ ಪ್ರತಿಭಟನೆಯಾಗಿ ಪರಿವರ್ತಿತವಾಗಿದೆ. ಇಂಥ ಪ್ರತಿಭಟನೆಗಳಿಗೆ ಸರ್ಕಾರ ಆಸ್ಪದ ಕೊಡಬಾರದು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ ಅಂತರದಲ್ಲಿ 28ಕ್ಕೂ ಅಧಿಕ ಟೋಲ್‌ ಬೂತ್‌ಗಳಿವೆ ಎಂದು ಒಂದು ಲೆಕ್ಕಾಚಾರ ತಿಳಿಸುತ್ತದೆ. ಸ್ಥಳೀಯರಿಗೆ ಆಧಾರ್‌ ಕಾರ್ಡ್‌ ಆಧಾರದಲ್ಲಿ ಪಾಸ್‌ ನೀಡುವುದಾಗಿ ಹೇಳಲಾಗಿದೆ. ಅದು ಎಷ್ಟರ ಮಟ್ಟಿಗೆ ಜಾರಿಗೆ ಬಂದಿದೆಯೋ ತಿಳಿಯದು. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಬೂತ್‌ಗಳನ್ನು ಹಂತಹಂತವಾಗಿ ಪೂರ್ತಿ ಮುಚ್ಚುವುದಾಗಿ ಸಚಿವರು ಹೇಳಿದ್ದರು. ಅದೂ ಜಾರಿಯಾಗುತ್ತಿಲ್ಲ. ಬದಲಾಗಿ ರಾಜ್ಯ ಹೆದ್ದಾರಿಗಳಲ್ಲಿ ಬೂತ್‌ಗಳು ಹೆಚ್ಚುತ್ತಲೇ ಇವೆ. ಹಲವು ಟೋಲ್‌ ಬೂತ್‌ಗಳಲ್ಲಿ ಖಾಸಗಿಯವರು ರೌಡಿಗಳನ್ನೂ ಇಟ್ಟುಕೊಂಡಿದ್ದಾರೆ ಎಂಬ ಆರೋಪಗಳಿವೆ. ಇದರಿಂದಾಗಿಯೂ ಆಗಾಗ ಬೂತ್‌ಗಳಲ್ಲಿ ಕ್ಷೋಭೆ ಉಂಟಾಗುತ್ತಿದೆ. ರಸ್ತೆಗಳ ನಿರ್ವಹಣೆ ಚೆನ್ನಾಗಿ ಆಗಬೇಕು ಎಂಬ ಕಾರಣದಿಂದ ಟೋಲ್‌ ವಸೂಲಿ ಮಾಡಲಾಗುತ್ತದೆ. ಆದರೆ ಪ್ರಜೆಗಳು ಪ್ರತ್ಯೇಕವಾಗಿ ರಸ್ತೆ ಸುಂಕ ತೆರುತ್ತಾರೆ. ವಾಹನ ಮಾಲಿಕರೆಲ್ಲರೂ ಜೀವಾವಧಿ ರಸ್ತೆ ಸುಂಕ ಪಾವತಿಸಬೇಕಾಗುತ್ತದೆ. ಅದೆಲ್ಲಾ ಎಲ್ಲಿ ಹೋಗುತ್ತದೆಯೋ ತಿಳಿಯದು. ಅದಕ್ಕೆ ತಕ್ಕಂತೆ ನಿರ್ವಹಣೆಯನ್ನು ಪ್ರಜೆಗಳು ಅಪೇಕ್ಷಿಸಿದರೆ ಯಾವ ತಪ್ಪೂ ಇಲ್ಲ. ಪ್ರಯಾಣಿಕರು ಪಾವತಿಸುವ ಸುಂಕ ಹಾಗೂ ನಿರ್ವಹಣೆ ವೆಚ್ಚದ ಬಗ್ಗೆ ಪಾರದರ್ಶಕತೆ ಎಲ್ಲೂ ಕಾಣಿಸುವುದಿಲ್ಲ.

ಈ ಎಲ್ಲಾ ಅಸಮರ್ಪಕತೆ ಸರಿಹೋಗದ ಹೊರತು ಟೋಲ್‌ ದರ ಏರಿಸುವ ಕ್ರಮ ಸರಿಯಲ್ಲ. ಟೋಲ್ ಎನ್ನುವುದು ಜನರಿಗೆ ದುಃಸ್ವಪ್ನವಾಗದಂತೆ ಸರ್ಕಾರ ಸಂಚಾರ ಸ್ನೇಹಿ, ಜನಸ್ನೇಹಿ ಸುಂಕ ವ್ಯವಸ್ಥೆಯನ್ನು ರೂಪಿಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Edited by

Horoscope Today
Koo

ಇಂದಿನ ಪಂಚಾಂಗ (11-06-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.

ತಿಥಿ: ಅಷ್ಟಮಿ 12:05 ವಾರ: ಭಾನುವಾರ
ನಕ್ಷತ್ರ: ಪೂರ್ವಾಭಾದ್ರಪದ 14:30 ಯೋಗ: ಪ್ರೀತಿ 10:09
ಕರಣ: ಕೌಲವ 12:05
ಅಮೃತಕಾಲ: ಸಂಜೆ 5 ಗಂಟೆ 51 ನಿಮಿಷದಿಂದ 7ಗಂಟೆ 21 ನಿಮಿಷದವರೆಗೆ.

ಸೂರ್ಯೋದಯ : 05:53 ಸೂರ್ಯಾಸ್ತ : 06:46

ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು. ಯಾವುದಾದರೂ ಮೂಲದಿಂದ ಆರ್ಥಿಕ ಲಾಭ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು. ಕುಟುಂಬದ ಆಪ್ತರಿಂದ ಆಮಂತ್ರಣ. ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಏಕಪಕ್ಷೀಯ ವ್ಯಾಮೋಹದಿಂದ ಒತ್ತಡ ಸಾಧ್ಯತೆ ಕಡಿಮೆ ಮಾಡಿಕೊಳ್ಳಿ.ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ.ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಆರ್ಥಿಕ ಪ್ರಗತಿ ಮಧ್ಯಮ.ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣ.ವ್ಯಾಪರ ವ್ಯವಹಾರದಲ್ಲಿ ಪ್ರಗತಿ.ಅತಿರೇಕದ ಲ್ಲಿ ಯಾವುದೇ ಮಾತುಗಳು ಅಪಾಯ ತರಬಹುದು.ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಶೀಘ್ರ ಕೋಪದಿಂದ ಕಾರ್ಯದಲ್ಲಿ ಹಾನಿ.ಆರ್ಥಿಕ ಪ್ರಗತಿ.ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ.ಹೇಳಿಕೆಯ ಮಾತುಗಳು ಕುಟುಂಬದ ವಾತಾವರಣ ಕೆಡಿಸುವುದು ಎಚ್ಚರಿಕೆ ಇರಲಿ.ಸಹದ್ಯೋಗಿಗಳಿಂದ ಕಿರಿಕಿರಿ.ಆರೋಗ್ಯದ ಕಾಳಜಿ ಇರಲಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ.ಆರ್ಥಿಕ ಪ್ರಗತಿ ಸಾಧಾರಣ.ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ.ಉದ್ಯೋಗಿಗಳಿಗೆ ಕಿರಿಕಿರಿ.ನಂಬಿದ ವ್ಯಕ್ತಿಗಳು ನಿಮ್ಮನ್ನು ಮೋಸಗೊಳಿಸಬಹುದು.ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು.ಆರ್ಥಿಕ ಪ್ರಗತಿ ಸಾಧಾರಣ.ಹಳೆಯ ವಿಚಾರ ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ.ಆರೋಗ್ಯ ಮಧ್ಯಮ.ಉದ್ಯೋಗಿಗಳಿಗೆ ಮಿಶ್ರ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ.ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ. ಪ್ರಯಾಣ ಸಾಧ್ಯತೆ. ಆರೋಗ್ಯ ಪರಿಪೂರ್ಣ.ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ.ಕುಟುಂಬದಲ್ಲಿ ಹೊಸ ಭರವಸೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಭರವಸೆಯ ಹೊಸ ಜೀವನ ಶುರುವಾಗಲಿದೆ.ದೀರ್ಘಕಾಲದ ಹೊಡಿಕೆ ವ್ಯವಹಾರದಲ್ಲಿ,ಆರ್ಥಿಕ ಪ್ರಗತಿ.ನೀವು ಮಾಡಿದ ಕೆಲಸ ಕಾರ್ಯಗಳ ಫಲಿತಾಂಶ ಬೇರೆಯವರು ತೆಗೆದುಕೊಂಡು ಪ್ರಶಂಸೆ ಪಡುವ ಸಾಧ್ಯತೆ, ಎಚ್ಚರಿಕೆ ಇರಲಿ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವವು.ಅವಶ್ಯಕ ವಸ್ತುಗಳ ಖರೀದಿ.ಅಷ್ಟೇ ಆರ್ಥಿಕ ಲಾಭ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ,ಮಾತು ಬೆಳೆಸುವುದು ಬೇಡ.ಸಾಮಜಿಕ ಕಾರ್ಯದಲ್ಲಿ ತೊಡಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಹಳೆಯ ನೋವು ಉಲ್ಬಣಗೊಳ್ಳವ ಸಾಧ್ಯತೆ, ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣ.ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು. ಸಂಬಂಧಿಗಳೊಂದಿಗೆ ಮಾತುಕತೆ.ಉದ್ಯೋಗಿಗಳಿಗೆ ಒತ್ತಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ

ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದಿರುವುದು ಗಮನಾರ್ಹ.

VISTARANEWS.COM


on

Digital Payment
Koo

ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿಯಾಗುವ ದೇಶಗಳಲ್ಲಿ ಭಾರತ ನಂ.1 ಆಗಿ ಹೊರಹೊಮ್ಮಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ್ದು, ಇಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಜಾಗತಿಕವಾಗಿ ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪ್ರಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಗಮನಾರ್ಹ ಸಾಧನೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಅದರ ಪರಿಣಾಮವೇ ಈಗಿನ ಈ ಸಾಧನೆ. ನೋಟ್ ಬ್ಯಾನ್ ಮಾಡಿದ ಬಳಿಕವಂತೂ ದೇಶದಲ್ಲಿ ಪರೋಕ್ಷವಾಗಿ ಡಿಜಿಟಲ್ ಕ್ರಾಂತಿಯೇ ಶುರುವಾಗಿತ್ತು. ದೊಡ್ಡ ಮೊತ್ತದ ಕರೆನ್ಸಿ ನೋಟುಗಳು ಮರೆಗೆ ಸರಿದಾಗ ಸಹಜವಾಗಿಯೇ ದೊಡ್ಡ ಮೊತ್ತದ ವ್ಯಾಪಾರ ವಹಿವಾಟುಗಳು ಡಿಜಿಟಲ್‌ ಮೂಲಕ ಆಗತೊಡಗಿದವು. ಇದರ ಜತೆಗೆ ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ವ್ಯವಸ್ಥೆಯೂ ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿತು. ಕರೆನ್ಸಿ ವಹಿವಾಟಿನ ಮೂಲಕ ಯಾವುದೆಲ್ಲ ತೆರಿಗೆ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿತ್ತೋ ಅದೆಲ್ಲವೂ ಡಿಜಿಟಲ್‌ ಪಾವತಿಯಿಂದಾಗಿ ತೆರಿಗೆ ವ್ಯಾಪ್ತಿಯೊಳಗೆ ಬಂದವು. ಇದು ದೇಶದ ತೆರಿಗೆ ಸಂಗ್ರಹಕ್ಕೂ ಗಣನೀಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ.

ಇದೇನೂ ಸುಲಭದ ನಡಿಗೆಯಾಗಿರಲಿಲ್ಲ. ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದರು. ಎಳನೀರು ಮಾರುವವರು, ಚಪ್ಪಲಿ ಹೊಲಿಯುವವರು, ರಸ್ತೆ ಬದಿ ತರಕಾರಿ ಮಾರುವವರೂ ಈಗ QR ಕೋಡ್ ಬಳಸಿ ಡಿಜಿಟಲ್ ಮೂಲಕವೇ ವ್ಯವಹರಿಸುತ್ತಿದ್ದಾರೆ. ಡಿಜಿಟಲ್‌ ಪಾವತಿಯಿಂದ ಅನುಕೂಲಗಳು ಸಾಕಷ್ಟಿವೆ. ಇದು ಸುಲಭ ಹಾಗೂ ಬಹುದೂರದಲ್ಲಿರುವವರ ಪಾವತಿಯನ್ನೂ ಇದರಿಂದ ಮಾಡಬಹುದು. ಇದರಲ್ಲಿ ಭದ್ರತೆ ಹೆಚ್ಚು. ಸರ್ಕಾರಿ ಯೋಜನೆಗಳು ಫಲಾನುಭವಿಗಳನ್ನು ನೇರವಾಗಿ ತಲುಪುತ್ತಿರುವುದು ಈ ಪಾವತಿ ಮೂಲಕವೇ ಆಗಿವೆ. ತೆರಿಗೆ ವಂಚನೆ ತಡೆಗಟ್ಟಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಎಲ್ಲ ಹಣದ ವಹಿವಾಟುಗಳೂ ಡಿಜಿಟಲ್‌ ಆಗಿಬಿಡುವ ಸಂಭವ ಇರುವುದರಿಂದ, ನಾವು ಆ ಹಾದಿಯಲ್ಲಿ ಶೀಘ್ರ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು.

ಇದನ್ನೂ ಓದಿ : ವಿಸ್ತಾರ TOP 10 NEWS: ಸ್ತ್ರೀಯರಿಗೆ ಭಾನುವಾರದಿಂದ ಫ್ರೀ ʼಶಕ್ತಿʼ, ಡಿಜಿಟಲ್‌ ಪಾವತಿಯಲ್ಲಿ ಭಾರತದ ಕೀರ್ತಿ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

ಆದರೆ ಇದರಲ್ಲಿರುವ ಕೆಲವು ಅನನುಕೂಲಗಳು ಮತ್ತು ವಂಚನೆಯ ಸಾಧ್ಯತೆಗಳೂ ಇದ್ದು, ಇವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಆನ್‌ಲೈನ್‌ ವ್ಯವಹಾರದಲ್ಲಿ ಪರಿಣತರಲ್ಲದವರನ್ನು ಇದರಲ್ಲಿ ಮೋಸಗೊಳಿಸಬಹುದಾಗಿದೆ. ಹಾಗೆಯೇ ಡಿಜಿಟಲ್ ಪಾವತಿಯ ಮೇಲೆ ಸೇವಾ ಶುಲ್ಕ ವಿಧಿಸುತ್ತಿರುವುದು ಕೂಡ ಸರಿಯಲ್ಲ. ಒಂದು ಕಡೆ ನಗದಿನ ಬದಲು ಡಿಜಿಟಲ್ ವಹಿವಾಟು ಉತ್ತೇಜಿಸುವ ಸರ್ಕಾರ, ಇನ್ನೊಂದು ಕಡೆ ಶುಲ್ಕದ ಬರೆ ಹಾಕುವುದು ಸರಿಯಲ್ಲ. ಡಿಜಿಟಲ್ ಪಾವತಿಯನ್ನು ಸರ್ಕಾರ ಶುಲ್ಕ ಮುಕ್ತಗೊಳಿಸಬೇಕು. ಡಿಜಿಟಲ್‌ ಪಾವತಿ ಒದಗಿಸುವ ಮಧ್ಯವರ್ತಿಗಳನ್ನು ಬೇಕಿದ್ದರೆ ನಿಯಂತ್ರಿಸುವ ಕಾಯಿದೆಗಳನ್ನು ರೂಪಿಸಲಿ, ಆದರೆ ಸಣ್ಣ ಪ್ರಮಾಣದ ಡಿಜಿಟಲ್‌ ಪಾವತಿಗೂ ಶುಲ್ಕ ತೆರುವಂತಾದರೆ ಅದು ಸಾಮಾನ್ಯನಿಗೆ ದುಬಾರಿಯಾಗುತ್ತದೆ.

Continue Reading

ಕ್ರಿಕೆಟ್

WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್​, ಕೌತುಕದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​

ಭಾರತ ತಂಡದ ಬಳಿ ಏಳು ವಿಕೆಟ್​ಗಳು ಉಳಿದಿದ್ದು, ಕೊನೇ ದಿನದ 90 ಓವರ್​​ಗಳಲ್ಲಿ ವಿಕೆಟ್​ ಉಳಿಸಿಕೊಂಡು ಗೆಲುವು ಸಾಧಿಸಬೇಕಾಗಿದೆ.

VISTARANEWS.COM


on

Viat kohli WTC Final 2023
Koo

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ನ ಫೈನಲ್​ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟ್​ ಮಾಡುತ್ತಿರುವ ಭಾರತ ತಂಡ 3 ವಿಕೆಟ್​ ಕಳೆದಕೊಂಡು 164 ರನ್​ ಬಾರಿಸಿದೆ. ಸ್ಪೆಷಲಿಸ್ಟ್​ ಬ್ಯಾಟರ್​​ಗಳಾದ ವಿರಾಟ್​ ಕೊಹ್ಲಿ (44) ಹಾಗೂ ಅಜಿಂಕ್ಯ ರಹಾನೆ (20 ರನ್​) ಕ್ರೀಸ್​ನಲ್ಲಿ ಉಳಿದುಕೊಂಡಿದ್ದಾರೆ. ಭಾರತ ತಂಡದ ಗೆಲುವಿಗೆ 280 ರನ್​ ಬೇಕಾಗಿದ್ದು ಕೊನೇ ದಿನ 90 ಓವರ್​​ಗಳು ಬಾಕಿ ಉಳಿದಿವೆ. ಅತ್ತ ಆಸ್ಟ್ರೇಲಿಯಾ ತಂಡವು ಭಾರತದ ಇನ್ನುಳಿದ ಏಳು ವಿಕೆಟ್​​ಗಳನ್ನು ಉರುಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ.

ಇಲ್ಲಿನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್​ ನಷ್ಟಕ್ಕೆ 270 ರನ್​ ಬಾರಿಸಿ ಡಿಕ್ಲೇರ್​ ಮಾಡಿಕೊಂಡಿತು. 444 ರನ್​​ಗಳ ಗುರಿಯೊಂದಿಗೆ ಬ್ಯಾಟ್​ ಮಾಡಿದ ಭಾರತ ತಂಡ ಮೊದಲ ವಿಕೆಟ್​ಗೆ 41 ರನ್ ಬಾರಿಸಿತು. ರೋಹಿತ್​ ಶರ್ಮಾ (43) ಹಾಗೂ ಶುಭಮನ್​ ಗಿಲ್​ (18) ಭರವಸೆ ಮೂಡಿಸಿದರು. ಆದರೆ, ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ಬಳಿಕ ಶುಭ್​ಮನ್​ ಗಿಲ್​ ನಿರಾಸೆಯಿಂದ ಪೆವಿಲಿಯನ್​ಗೆ ಮರಳಬೇಕಾಯಿತು. ಬೋಲ್ಯಾಂಡ್ ಅವರ ಎಸೆತಕ್ಕೆ ಗ್ರೀನ್​ಗೆ ಕ್ಯಾಚ್ ನೀಡಿದ ಅವರು ಬೇಸರದಿಂದ ಹೊರಕ್ಕೆ ನಡೆದರು.

ನಂತರ ರೋಹಿತ್ ಮತ್ತು ಚೇತೇಶ್ವರ್​ ಪೂಜಾರ (27) 77 ಎಸೆತಗಳಲ್ಲಿ 51 ರನ್ ಗಳಿಸಿದರು. ನಂತರ ಇಬ್ಬರೂ ಬ್ಯಾಟ್ಸಮನ್​ಗಳು ಕೆಲವೇ ನಿಮಿಷಗಳಲ್ಲಿ ಔಟಾಗಿದ್ದಿಂದ ಭಾರತದ ಪ್ರಗತಿಗೆ ಅಡ್ಡಿಯಾಯಿತು. ರೋಹಿತ್​ ಸ್ವೀಪ್​ ಮಾಡಲು ಹೋಗಿ ನೇಥನ್​ ಲಯಾನ್​ ಎಸೆತಕ್ಕೆ ಎಲ್​ಬಿಡಬ್ಲ್ಯು ಆಡದರೆ, ಕಮಿನ್ಸ್ ಎಸೆತಕ್ಕೆ ಅನಗತ್ಯ ರನ್​ ಬಾರಿಸಲು ಮುಂದಾದ ಪೂಜಾರ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್​ಗೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಗಿರುವ ಉಂಟಾದ ಹಾನಿಯನ್ನು ಸರಿಪಡಿಸಿದ್ದಾರೆ. ಜೊತೆಯಾಟವು 50 ರನ್​ಗಳ ಗಡಿ ದಾಟಿದೆ. ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಮಾಡಿದ ದಾಖಲೆಯನ್ನು ಮುರಿಯಬೇಕಾಗಿದೆ.

ಇದನ್ನೂ ಓದಿ: WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಅಲೆಕ್ಸ್ ಕ್ಯೇರಿ ಅರ್ಧ ಶತಕ

ಮೂರನೇ ದಿನದಾಟದ ಅಂತ್ಯಕ್ಕೆ 123 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನದ ಮೊದಲ ಸೆಶನ್​ನಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ಮರ್ನಸ್​ ಲಾಬುಶೇನ್​ ಆರಂಭದಲ್ಲಿಯೇ ವಿಕೆಟ್​ ಒಪ್ಪಿಸಿದರು. ಆದರೆ ಏಳನೆ ವಿಕೆಟ್​ಗೆ ಅಲೆಕ್ಸ್​ ಕ್ಯೇರಿ (ಅಜೇಯ 66) ಹಾಗೂ ಮಿಚೆಲ್ ಸ್ಟಾರ್ಕ್​ (41) 93 ರನ್ ಜತೆಯಾಟ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಗುರಿಯನ್ನು ಒಡ್ಡಲು ನೆರವಾದರು. ಅದಕ್ಕಿಂತ ಮೊದಲು ಸ್ಮಿತ್ (34) ಹಾಗೂ ಟ್ರಾವಿಡ್​ ಹೆಡ್​ (18) ಆಸ್ಟ್ರೇಲಿಯಾ ತಂಡಕ್ಕೆ ಸಣ್ಣ ಕೊಡುಗೆ ಕೊಟ್ಟರು.

Continue Reading

ದೇಶ

Narendra Modi: 14 ಪ್ರಧಾನಿಗಳು ಮಾಡಿದ್ದ ಸಾಲ 55 ಲಕ್ಷ ಕೋಟಿ ರೂ., ಮೋದಿ ಒಬ್ಬರೇ ಮಾಡಿದ ಸಾಲವೆಷ್ಟು?

Narendra Modi: ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ, ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ, ಕಳೆದ ಒಂಬತ್ತು ವರ್ಷದಲ್ಲಿ ಮಾಡಿದ ಸಾಲವು ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದನ್ನೂ ವಿವರಿಸಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಮುಖಾಂಶ ಹೀಗಿದೆ…

VISTARANEWS.COM


on

Edited by

Debt Under Narendra Modi Government
Koo

ನವದೆಹಲಿ: ಸ್ವಾತಂತ್ರ್ಯದ ಬಳಿಕ ದೇಶವನ್ನು ಮುನ್ನಡೆಸಿದ ಪ್ರಧಾನಿಗಳು ಮಾಡಿದ ಸಾಲ ಹಾಗೂ ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಅಂಕಿ-ಅಂಶವನ್ನು ಇಟ್ಟುಕೊಂಡು ಮೋದಿ ಅವರಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ನರೇಂದ್ರ ಮೋದಿ (Narendra Modi) ಅವರು ಆಡಳಿತ ನಡೆಸುತ್ತಿರುವ 9 ವರ್ಷದ ಅವಧಿಯಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ ಮೋದಿ ಅವಧಿಯಲ್ಲಾದ ಸಾಲದ ಕುರಿತು ಮಾಹಿತಿ ನೀಡಿದರು. “2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ, ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿ ಇದೆ. ಒಂಬತ್ತು ವರ್ಷದಲ್ಲಿಯೇ 100 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲಾಗಿದೆ” ಎಂದು ಅಂಕಿ-ಅಂಶಗಳ ಸಮೇತ ಕುಟುಕಿದರು.

“ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರವನ್ನು ತೆಗಳುತ್ತಿದ್ದರು. ಭ್ರಷ್ಟ, ಅಸಮರ್ಥ ಎಂದೆಲ್ಲ ಟೀಕಿಸುತ್ತಿದ್ದರು. ಆದರೆ, ಒಂಬತ್ತು ವರ್ಷದಲ್ಲಿ ದೇಶದ ಸಾಲದ ಪ್ರಮಾಣ ಏರಿಕೆಯಾಗಿದ್ದು ನೋಡಿದರೆ, ಟೀಕೆಗಳು ಮೋದಿ ಅವರಿಗೇ ಹೆಚ್ಚು ಸಮಂಜಸ ಎನಿಸುತ್ತವೆ. ದೇಶದ ಆರ್ಥಿಕತೆ ಹಾಳು ಮಾಡಿದ್ದು, ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಹಣದುಬ್ಬರ ಹೆಚ್ಚಳ ಸೇರಿ ಹಲವು ದಿಸೆಯಲ್ಲಿ ದೇಶವನ್ನು ಮೋದಿ ಸರ್ಕಾರ ಹಾಳುಮಾಡಿದೆ. ಎಲ್ಲ ನಕಾರಾತ್ಮಕ ಏರಿಕೆಗಳು ಎಚ್ಚರಿಕೆಯ ಗಂಟೆಗಳಾಗಿವೆ” ಎಂದು ಹೇಳಿದರು.

ಇದನ್ನೂ ಓದಿ: Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್‌ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ

“ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ 67 ವರ್ಷದಲ್ಲಿ 14 ಪ್ರಧಾನಿಗಳು 55 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರು. ಆದರೆ, ಮೋದಿ ಅವರೊಬ್ಬರೇ 100 ಕೋಟಿ ರೂಪಾಯಿ ಸಾಲ ಮಾಡಿರುವುದು ಅಪಾಯಕಾರಿ ಸಂಗತಿಯಾಗಿದೆ. ಸದ್ಯದ ಆರ್ಥಿಕ ಬೆಳವಣಿಗೆಯ ಕುರಿತ ಮಾಹಿತಿಯು ಹೆಡ್‌ಲೈನ್‌ ಮ್ಯಾನೇಜ್‌ಮೆಂಟ್‌ ರೀತಿಯೇ ಆಗಿದೆ. ಇದರಿಂದ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದಿಲ್ಲ” ಎಂದು ತಿಳಿಸಿದರು.

Continue Reading
Advertisement
Love propose at Oval Stadium
ಕ್ರಿಕೆಟ್18 mins ago

WTC Final 2023 : ಸ್ಟೇಡಿಯಂನಲ್ಲೇ ಪ್ರಪೋಸ್​, ಅಲ್ಲೇ ಕಿಸ್​, ಅಲ್ಲೇ ರೊಮ್ಯಾನ್ಸ್​​, ಓವಲ್​ನಲ್ಲೊಂದು ಪ್ರೇಮ ಪ್ರಸಂಗ!

Chief Minister Siddaramaiah
ಕರ್ನಾಟಕ24 mins ago

ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ; ’ಶಕ್ತಿ’ ಟಿಕೆಟ್​​ ಹಂಚಲಿರುವ ಸಿಎಂ ಸಿದ್ದರಾಮಯ್ಯ

curd myths
ಆರೋಗ್ಯ53 mins ago

Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Horoscope Today
ಪ್ರಮುಖ ಸುದ್ದಿ2 hours ago

Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!

Hindu janajagruti samiti pressmeet
ಕರ್ನಾಟಕ7 hours ago

ಜೂ.16 ರಿಂದ 22ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವʼ

Man Dies Of Heart Attack In Noida
ಕ್ರೀಡೆ7 hours ago

Heart Attack: ಬ್ಯಾಡ್ಮಿಂಟನ್‌ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ವ್ಯಕ್ತಿ ಸಾವು

Digital Payment
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ

aamir khan to act in rajamouli movie
ಸಿನಿಮಾ8 hours ago

Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌!

Minister Pralhad Joshi
ಕರ್ನಾಟಕ8 hours ago

ಹುಬ್ಬಳ್ಳಿ ಏರ್‌ಪೋರ್ಟ್‌ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್‌ ಜೋಶಿ ಧನ್ಯವಾದ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ1 day ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Autodrivers oppose free bus service
ಕರ್ನಾಟಕ14 hours ago

Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್‌ ವಾರ್ನಿಂಗ್‌

accident in kerala
ವೈರಲ್ ನ್ಯೂಸ್19 hours ago

Viral Video: ಬಸ್ಸು ಮತ್ತು ಲಾರಿ ಮಧ್ಯೆ ಸ್ಕೂಟರ್‌ ಅಪ್ಪಚ್ಚಿ, ಸವಾರರ ಕಣ್ ಮುಂದೆ ಯಮ ರಪ್ ಅಂತ ಪಾಸ್ ಆದ!

Cancellation of tenders for 108 ambulances and Dinesh Gundu rao
ಆರೋಗ್ಯ2 days ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ2 days ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ2 days ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ2 days ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ2 days ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ3 days ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ3 days ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ3 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

ಟ್ರೆಂಡಿಂಗ್‌

error: Content is protected !!