Site icon Vistara News

ಅಮೆರಿಕ-ಭಾರತ ವಾಣಿಜ್ಯ ವ್ಯವಹಾರ ಹಿಂದೆಂದಿಗಿಂತಲೂ ಬಲವಾಗಿದೆ: ಕ್ರಿಸ್ಟೊಫರ್‌ ಡಬ್ಲ್ಯು ಹಾಡ್ಜಸ್‌

Christopher W Hodges

ಬೆಂಗಳೂರು: ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವ್ಯವಹಾರ ಹಿಂದೆಂದಿಗಿಂತಲೂ ಬಲವಾಗಿದೆ. ಎರಡು ದೇಶಗಳ ಮಧ್ಯೆ ಹೆಚ್ಚುತ್ತಿರುವ ವಾಣಿಜ್ಯ ವ್ಯವಹಾರ ಮತ್ತು ಹೂಡಿಕೆಗೆ ಯು.ಎಸ್‌. ಕಮರ್ಷಿಯಲ್‌ ಸರ್ವೀಸ್‌ ವೇಗವರ್ಧಕವಾಗಿ ಕೆಲಸ ಮಾಡುತ್ತಿದ್ದು, ವಾಣಿಜ್ಯ ಸಂಬಂಧ ಸ್ಥಾಪನೆ ಹಾಗೂ ಸಹಯೋಗ ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಚೆನ್ನೈನ ಅಮೆರಿಕ ದೂತಾವಾಸದ ಕಾನ್ಸುಲ್‌ ಜನರಲ್‌ ಕ್ರಿಸ್ಟೊಫರ್‌ ಡಬ್ಲ್ಯು ಹಾಡ್ಜಸ್‌ (Christopher W Hodges) ತಿಳಿಸಿದರು.

ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಯು.ಎಸ್‌. ಕಮರ್ಷಿಯಲ್‌ ಸರ್ವೀಸ್‌ನ (US Commercial Service) 30ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಪಾಲುದಾರಿಕೆಯು ಏರುಗತಿಯಲ್ಲಿದೆ. ಇದರಿಂದ ಎರಡೂ ದೇಶಗಳಲ್ಲಿ ನೂರಾರು ಸಾವಿರ ಉದ್ಯೋಗ ಸೃಷ್ಟಿಗೆ ನೆರವಾಗುತ್ತಿದ್ದು, ತಾಂತ್ರಿಕ ಆವಿಷ್ಕಾರಗಳಿಗೆ ಪ್ರೋತ್ಸಾಹ ಸಿಗುವಂತಾಗಿದೆ. ಭಾರತದಲ್ಲಿ ಅಮೆರಿಕದ ಪ್ರಮುಖ ವಾಣಿಜ್ಯ ಸಹಭಾಗಿಗಳಲ್ಲಿ ಬೆಂಗಳೂರು ನಗರವೂ ಒಂದಾಗಿದೆ. ಈ ನಗರವು ಸುಮಾರು 650ಕ್ಕೂ ಹೆಚ್ಚು ಅಮೆರಿಕನ್‌ ಕಂಪನಿಗಳಿಗೆ ಆತಿಥ್ಯ ನೀಡಿದ್ದು, ಈ ಯಶೋಗಾಥೆಯ ಬಹುದೊಡ್ಡ ಭಾಗವಾಗುವ ಮೂಲಕ ಅಮೆರಿಕ- ಭಾರತ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಅಮೆರಿಕ- ಭಾರತದ ನಡುವಿನ ವಾಣಿಜ್ಯ ವ್ಯವಹಾರವು ಬಾಹ್ಯಾಕಾಶ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಆರೋಗ್ಯ, ಶಿಕ್ಷಣ, ಮತ್ತು ಏರೋಸ್ಪೇಸ್ ವಲಯಗಳಲ್ಲಿ ಹಿಂದೆಂದಿಗಿಂತಲೂ ಬಲವಾಗಿದೆ. ಬೆಂಗಳೂರಿನಲ್ಲಿ ಯು.ಎಸ್‌. ಕಮರ್ಷಿಯಲ್‌ ಸರ್ವೀಸ್‌ನ ಸಂಭ್ರಮಾಚರಣೆ ಮಾಡುತ್ತಿರುವ ಹೊತ್ತಿನಲ್ಲೇ ಮುಂದಿನ ಮೂವತ್ತು ವರ್ಷಗಳಲ್ಲಿ ಎಂಹತ ಸಹಭಾಗಿತ್ವ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ ಎಂದರು.

ಇದನ್ನೂ ಓದಿ | Rishi Sunak: ಜೈ ಸಿಯಾ ರಾಮ್‌ ಎಂದು ಭಾಷಣ ಆರಂಭಿಸಿದ ರಿಷಿ ಸುನಕ್;‌ ವಿಡಿಯೊ ವೈರಲ್, ಏನಿದರ ಅರ್ಥ?

ನವದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮಿನಿಸ್ಟರ್‌ ಕೌನ್ಸಲರ್‌ ಫಾರ್‌ ಕಮರ್ಷಿಯಲ್‌ ಅಫೇರ್ಸ್‌ ಜೊನಾಥನ್‌ ಹೀಮರ್‌, ಚೆನ್ನೈನಲ್ಲಿನ ಯುಎಸ್‌ ದೂತಾವಾಸದ ಪ್ರಿನ್ಸಿಪಲ್‌ ಕಮರ್ಷಿಯಲ್‌ ಆಫೀಸರ್‌ ಕೇರಿ ಅರುಣ್‌ ಮತ್ತು ಚೆನ್ನೈನಲ್ಲಿ ಪೊಲಿಟಿಕಲ್‌, ಎಕನಾಮಿಕ್‌ ವಿಭಾಗದ ಮುಖ್ಯಸ್ಥೆ ವಿರ್ಸಾ ಪರ್ಕಿನ್ಸ್‌ ಅವರೂ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸ್ಥಳೀಯ, ಅಂತಾರಾಷ್ಟ್ರೀಯ ಉದ್ಯಮಿಗಳು, ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು.

Exit mobile version