Site icon Vistara News

ಬೆಂಗಳೂರಿಗೆ ಪ್ರಧಾನಿ ಮೋದಿ; ರಸ್ತೆಗಳ ಸಂಚಾರ ಬದಲು

ಸಂಚಾರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಓಡಾಡುವವರು ಗಮನಿಸಬೇಕಾದ ಸುದ್ದಿ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ಜೂ.20) ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಮತ್ತು ಕೆಲ ಮಾರ್ಗಗಳನ್ನು ಬದಲಾಯಿಸಲಾಗಿದೆ.

ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಗಣ್ಯರು ಸಂಚರಿಸುವ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಲು ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಎಲಿವೇಟೆಡ್ ಕಾರಿಡಾರ್ ರಸ್ತೆಯನ್ನು ಬಳಸುವ ಸಾರ್ವಜನಿಕರು, ಈ ರಸ್ತೆಯ ಬಳಕೆಯನ್ನು ಬದಲಾಯಿಸಿ ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಬಹುದು.

ಏ‌ರ್‌ಪೋರ್ಟ್‌ನಿಂದ ಬೆಂಗಳೂರು ನಗರದ ಕಡೆಗೆ

ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ

1.ಆರಮನೆ ಮೈದಾನ ತ್ರಿಪುರವಾಸಿನಿ (ಗೇಟ್ ನಂ-02) – ಸಾರ್ವಜನಿಕರು ಹಾಗೂ ಪೊಲೀಸ್‌ ಸಿಬ್ಬಂದಿ
ವಾಹನಗಳು.
2.ನಾಗಸೇನ, ಸ್ಕೂಲ್ ಮೈದಾನ, ಸದಾಶಿವನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವಾಹನ

ಮಧ್ಯಾಹ್ನ 12.30ರಿಂದ 03 ಗಂಟೆಯವರೆಗೆ ಸಂಚಾರ ನಿಷೇಧಿಸಲಾದ ರಸ್ತೆ

ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಸಂಚಾರ ನಿಷೇಧಿಸಲಾದ ರಸ್ತೆ

ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಸಂಚಾರ ನಿಷೇಧಿಸಲಾದ ರಸ್ತೆ :

ಸಂಚಾರ ನಿಷೇಧಿಸಲಾದ ರಸ್ತೆ

ನಿಷೇಧಿಸಿದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ವಾಹನಗಳ ಪಾರ್ಕಿಂಗ್‌ ನಿಷೇಧಿಸಿರುವ ರಸ್ತೆಗಳು, ಸ್ಥಳಗಳು

ಇದನ್ನೂ ಓದಿ | ಮೈಸೂರಿಗೆ ನಾಳೆ ಪ್ರಧಾನಿ ಮೋದಿ ಆಗಮನ, ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

ನಿಷೇಧಿಸಿರುವ ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ, ಪಾರ್ಕಿಂಗ್ ಸ್ಥಳ

ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇಧ ರಸ್ತೆಗಳು (ಬೆಳಗ್ಗೆ 9.10ರಿಂದ ಸಂಜೆ 6ಗಂಟೆವರೆಗೆ)

  1. ನಾಗರಬಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಬಾವಿ ಜಂಕ್ಷನ್ ವರೆಗೆ
  2. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ನಿಂದ ಜೈರಾಮ್‌ ದಾಸ್ ಜಂಕ್ಷನ್ ವರೆಗೆ
  3. ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್‌ ನಿಂದ ಶಿರ್ಕೆ ಜಂಕ್ಷನ್‌ ವರೆಗೆ
  4. ಯೂನಿವರ್ಸಿಟಿ ಒಳಭಾಗದ ಎಲ್ಲ ರಸ್ತೆಗಳು
  5. ಮೈಸೂರು ರಸ್ತೆ ನೈಸ್ ಬ್ರಿಡ್ಜ್ ಬಳಿ
  6. ಹೊಸಕೋಟೆಯಿಂದ ಬರುವ ವಾಹನಗಳು
  7. ಹೊಸೂರು ರಸ್ತೆ ಕಡೆಯಿಂದ ಬರುವ ವಾಹನಗಳು

ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ

ಶಾಲಾಳಿತ ಮಂಡಳಿಗಳಿಗೆ ವಿಶೇಷ ಸೂಚನೆ:
ಪ್ರಧಾನ ಮಂತ್ರಿ ಮಧ್ಯಾಹ್ನ 12.30 ರಿಂದ 13.30 ರವರೆಗೆ ಕೊಮ್ಮಘಟ್ಟ -ಜ್ಞಾನಭಾರತಿ ಹಾಗೂ ಜ್ಞಾನಭಾರತಿ ಕೊಮ್ಮಘಟ್ಟದ ಕಾರ್ಯಕ್ರಮದ ಸ್ಥಳಗಳಲ್ಲಿ ಸಂಚರಿಸುವುದರಿಂದ, ಈ ವೇಳೆ ಸಂಚಾರ ನಿರ್ಬಂಧವನ್ನು ಭದ್ರತೆ ಮತ್ತು ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ವಿಧಿಸಲಾಗಿರುತ್ತದೆ. ಆದ್ದರಿಂದ ಶಾಲಾ ಮಕ್ಕಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಸುರಂಗ ಮಾರ್ಗ ಉದ್ಘಾಟಿಸಿ, ಕಸ ಹೆಕ್ಕಿದ ಪ್ರಧಾನಿ ಮೋದಿ; ವಿಡಿಯೋ ವೈರಲ್‌

Exit mobile version