ಬೆಂಗಳೂರು: ಟ್ರಾಫಿಕ್ ಉಲ್ಲಂಘಿಸಿದ ವಾಹನ ಚಾಲಕರು ಶೇ.50 ರಿಯಾಯಿತಿಯಲ್ಲಿ ದಂಡ ಕಟ್ಟಬಹುದು ಎಂದು ಪೊಲೀಸರು ಆಫರ್ (traffic fine) ಕೊಟ್ಟಿರುವ ಹಿನ್ನೆಲೆಯಲ್ಲಿ ವಾಹನ ವಾಲಕ- ಮಾಲಿಕರು ದಂಡ ಕಟ್ಟಲು ಮುಗಿಬಿದ್ದಿದ್ದಾರೆ. ಸತತ ಏಳನೇ ದಿನವೂ ದಾಖಲೆ ಮೊತ್ತದಲ್ಲಿ ದಂಡ ಸಂಗ್ರಹವಾಗಿದೆ.
ರಿಯಾಯಿತಿ ಕೊಟ್ಟ 7ನೇ ದಿನ ಅತ್ಯಧಿಕ ದಂಡ ಸಂಗ್ರಹವಾಗಿದ್ದು, ಗುರುವಾರ ಸಂಗ್ರಹವಾದ ದಂಡದ ಮೊತ್ತ ಬರೋಬ್ಬರಿ 12,36,35,450 ರೂಪಾಯಿಗಳು. 7ನೇ ದಿನದ ಮುಕ್ತಾಯಕ್ಕೆ ದಂಡ ಸಂಗ್ರಹ ಮೊತ್ತ ಒಟ್ಟು 61.93 ಕೋಟಿ ದಾಟಿದೆ.
7ನೇ ದಿನ 2373852 ಪ್ರಕರಣಗಳಿಂದ 12 ಕೋಟಿ 36 ಲಕ್ಷದ 35 ಸಾವಿರದ 450 ರೂ ದಂಡ ಸಂಗ್ರಹವಾಗಿದೆ. ಇದರಲ್ಲಿ ಪಿಡಿಎ ಮೂಲಕ 251623 ಕೇಸ್‌ಗಳಲ್ಲಿ 5 ಕೋಟಿ 99 ಲಕ್ಷದ 20 ಸಾವಿರದ 900 ರೂ ದಂಡ ಸಂಗ್ರಹವಾಗಿದೆ. ಪೇಟಿಎಂ ಮೂಲಕ 149672 ಕೇಸ್‌ಗಳಲ್ಲಿ 4 ಕೋಟಿ 24 ಲಕ್ಷದ 45 ಸಾವಿರದ 650 ರೂ., ಬೆಂಗಳೂರು ಒನ್‌ನಲ್ಲಿ 82364 ಕೇಸ್‌ಗಳಲ್ಲಿ 2 ಕೋಟಿ 11 ಲಕ್ಷದ 16 ಸಾವಿರದ 450 ರೂ., ಟಿಎಂಸಿಯಲ್ಲಿ 595 ಕೇಸ್‌ಗಳಲ್ಲಿ 1 ಲಕ್ಷದ 52 ಸಾವಿರದ 450 ರೂ. ಸಂಗ್ರಹವಾಗಿದೆ.
ಒಟ್ಟಾರೆ ಈವರೆಗೆ 2373852 ಕೇಸ್‌ಗಳಲ್ಲಿ 65 ಕೋಟಿ 93 ಲಕ್ಷದ 60 ಸಾವಿರದ 291 ರೂ ದಂಡ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: Traffic Fine: ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ; 5 ದಿನದಲ್ಲಿ 50 ಕೋಟಿ ರೂ. ದಾಟಿದ ದಂಡ ಸಂಗ್ರಹ