Site icon Vistara News

Train Fire Accident: ಮೆಜೆಸ್ಟಿಕ್‌ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಬೆಂಕಿ, ತಪ್ಪಿದ ಭಾರಿ ಅನಾಹುತ

train fire majestic

ಬೆಂಗಳೂರು: ಭಾರಿ ಜನದಟ್ಟಣೆಯ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ (ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ) ರೈಲೊಂದರಲ್ಲಿ ಬೆಂಕಿ (Train Fire Accident) ಕಾಣಿಸಿಕೊಂಡಿದೆ. ರೈಲಿನಿಂದ ಪ್ರಯಾಣಿಕರು ಇಳಿದು ಹೋದ ಬಳಿಕ ಅವಘಡ ಸಂಭವಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಮುಂಬೈನಿಂದ ಬಂದಿದ್ದ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನ ಎರಡು ಸ್ಲೀಪರ್ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ ರೈಲು ನಿಲುಗಡೆಯಾಗಿತ್ತು. ಇದು ಕೊನೆಯ ಸ್ಟಾಪ್‌ ಆಗಿದ್ದರಿಂದ ಪ್ರಯಾಣಿಕರೆಲ್ಲ ಇಳಿದು ಹೋಗಿದ್ದರು. ಬೋಗಿಗಳಿಗೂ ಬೆಂಕಿ ಆವರಿಸಿದ್ದು, ರೈಲ್ವೇ ಇಂಜಿನ್‌ನಿಂದ ಹೊರ ಬಂದ ದಟ್ಟ ಹೊಗೆಯನ್ನು ನೋಡಿ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕಗೊಂಡರು.

ನಾಲ್ಕೈದು ಅಗ್ನಿಶಾಮಕ ದಳ ತಂಡಗಳ ಸಿಬ್ಬಂದಿ ಸ್ಥಳಕ್ಕೆ ಕೂಡಲೇ ಆಗಮಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳ‌ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. ರೈಲಿನ ಸಮೀಪದಿಂದ ಪ್ರಯಾಣಿಕರನ್ನು ತೆರವು ಮಾಡಲಾಗಿದೆ. ನಿಲ್ದಾಣ ಪೂರ್ತಿಯಾಗಿ ಹೊಗೆ ಆವರಿಸಿಕೊಂಡಿದೆ.

ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಹೊಗೆಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದೂ ಪತ್ತೆಯಾಗಬೇಕಿದೆ. ಈ ಸುದ್ದಿ ಬೆಳವಣಿಗೆ ಹೊಂದುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Exit mobile version