Site icon Vistara News

Train services: ಗೋಲಗುಂಬಜ್ ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಪರಿಷ್ಕರಣೆ; ಬೆಂಗಳೂರಿನಿಂದ ವಿಶೇಷ ರೈಲುಗಳ ಓಡಾಟ

train service

ಬೆಂಗಳೂರು: ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (Mysuru-Pandharpur Golgumbaz Express) (16535) ರೈಲಿನ ವೇಳಾಪಟ್ಟಿ ಪರಿಷ್ಕರಣೆ (Revision in Train Timings) ಮಾಡಲಾಗಿದೆ. ಇದರಿಂದಾಗಿ ರೈಲು ಸಂಖ್ಯೆ 16549 ಕೆಎಸ್‌ಆರ್ ಬೆಂಗಳೂರು-ಕೋಲಾರ ಡೆಮು ಮತ್ತು ರೈಲು ಸಂಖ್ಯೆ 06532 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಜುಲೈ 2 ರಿಂದ ಪರಿಷ್ಕರಣೆ (Train services) ಮಾಡಲಾಗುತ್ತಿದೆ.

ಬೆಂಗಳೂರು-ಕೋಲಾರ ಡೆಮು ರೈಲು ಈ ಮೊದಲು ಸಂಜೆ 6.10ಕ್ಕೆ ಹೊರಟು ಕೋಲಾರಕ್ಕೆ ರಾತ್ರಿ 9.30ಕ್ಕೆ ತಲುಪುತ್ತಿತ್ತು. ಆದರೆ ಇದೀಗ ಸಂಜೆ 6:20ಕ್ಕೆ ಬೆಂಗಳೂರಿನಿಂದ ಹೊರಟು ಕೋಲಾರಕ್ಕೆ ರಾತ್ರಿ 9.40ಕ್ಕೆ ತಲುಪಲಿದೆ. ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲು ಈ ಹಿಂದೆ 6.45ಕ್ಕೆ ಹೊರಟು, ರಾತ್ರಿ 9ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತಿತ್ತು. ಆದರೆ ಇದೀಗ ಸಂಜೆ 6.50ಕ್ಕೆ ಹೊರಟು ಕಂಟೋನ್ಮೆಂಟ್‌ಗೆ ಎಂದಿನ ಸಮಯಕ್ಕೆ (ರಾತ್ರಿ 9) ತಲುಪಲಿದೆ.

ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಓಡಾಟ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಅವುಗಳ ವಿವರ ಈ ಕೆಳಗಿನಂತಿವೆ

ಎಸ್ಎಂವಿಟಿ ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ವಿಷೇಶ ಎಕ್ಸ್ ಪ್ರೆಸ್ (06297/06298) ರೈಲು ಸಂಚಾರ

    ರೈಲು ಸಂಖ್ಯೆ 06297 ಎಸ್ಎಂವಿಟಿ ಬೆಂಗಳೂರಿನಿಂದ ಜುಲೈ 1, 3 ಮತ್ತು 6 ರಂದು ರಾತ್ರಿ 10 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 6:20ಕ್ಕೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ. ಪುನಃ ಇದೆ ರೈಲು (06298) ಜುಲೈ 2, 4 ಮತ್ತು 7ರಂದು ಪಂಢರಪುರದಿಂದ ರಾತ್ರಿ 8 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

    ಇದನ್ನೂ ಓದಿ: Karnataka Weather : ರಾಜ್ಯದ ಇಲ್ಲೆಲ್ಲ ವಿಪರೀತ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

    ಎಸಎಂವಿಟಿ ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ (06295/06296) ರೈಲು ಸಂಚಾರ

      ಜುಲೈ 2, 5, & 7, 2024 ರಂದು ರೈಲು ಸಂಖ್ಯೆ 06295 ಎಸಎಂವಿಟಿ ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 6:20ಕ್ಕೆ ಪಂಢರಪುರವನ್ನು ತಲುಪುತ್ತದೆ. ಪುನಃ ಇದೆ ರೈಲು (06296) ಜುಲೈ 3, 6, & 8, 2024 ರಂದು ಪಂಢರಪುರದಿಂದ ರಾತ್ರಿ 8 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:30 ಗಂಟೆಗೆ ಎಸಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

      ಈ ರೈಲುಗಳ ನಿಲುಗಡೆಗಳು

      ಈ ಮೇಲಿನ ವಿಶೇಷ ರೈಲುಗಳು ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ ರೋಡ, ಘಟಪ್ರಭಾ, ರಾಯಬಾಗ, ಚಿಂಚಲಿ, ಉಗರ್ ಖುರ್ದ್, ಮೀರಜ್, ಕವಠೆ-ಮಹಂಕಲ್, ಧಲಗಾಂವ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

      ಬೋಗಿಗಳ ಸಂಯೋಜನೆ:

      ರೈಲು ಸಂಖ್ಯೆ 06297/06298 ಎಸಿ ಫಸ್ಟ್ ಕ್ಲಾಸ್-1, ಎಸಿ ಟು ಟೈಯರ್-2, ಎಸಿ ತ್ರೀ ಟೈಯರ್-2, ಸ್ಲೀಪರ್ ಕ್ಲಾಸ್-6, ಜನರಲ್ ಸೆಕೆಂಡ್ ಕ್ಲಾಸ್-7, ಮತ್ತು ಎಸ್‌ಎಲ್‌ಆರ್/ಡಿ-2 ಸೇರಿದಂತೆ ಒಟ್ಟು 20 ಬೋಗಿಗಳು ಒಳಗೊಂಡಿರುತ್ತದೆ.

      ರೈಲು ಸಂಖ್ಯೆ 06295/06296 ಎಸಿ ಟು ಟೈಯರ್-1, ಎಸಿ ತ್ರೀ ಟೈಯರ್-1, ಸ್ಲೀಪರ್ ಕ್ಲಾಸ್-12, ಜನರಲ್ ಸೆಕೆಂಡ್ ಕ್ಲಾಸ್-4, ಮತ್ತು ಎಸ್‌ಎಲ್‌ಆರ್/ಡಿ-2 ಸೇರಿದಂತೆ ಒಟ್ಟು 20 ಬೋಗಿಗಳು ಒಳಗೊಂಡಿರುತ್ತದೆ.

      ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

      Exit mobile version