ಬೆಂಗಳೂರು: ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು (Free Bus Service) ಅವಕಾಶ ನೀಡಿರುವ ಸರ್ಕಾರದ ಶಕ್ತಿ ಯೋಜನೆಯಿಂದ (Shakthi Scheme) ಸಂಕಷ್ಟಕ್ಕೆ ಒಳಗಾದ ಖಾಸಗಿ ಸಾರಿಗೆ ಸಂಸ್ಥೆಗಳು (Private Passenger Vehicles) ಕರೆ ನೀಡಿರುವ ಸೆಪ್ಟೆಂಬರ್ 11ರ ಬಂದ್‌ನ್ನು (September 11 bundh) ಯಾವ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ (Transport Strike) ಎಂದು ಒಕ್ಕೂಟ ತಿಳಿಸಿದೆ.
32 ಖಾಸಗಿ ಸಾರಿಗೆ ಸಂಸ್ಥೆಗಳನ್ನು ಒಳಗೊಂಡ ಒಕ್ಕೂಟ ಬಂದ್ ಸೆಪ್ಟೆಂಬರ್ 11ರಂದು ಕರೆ ನೀಡಿದ್ದರಿಂದ ಅಂದು ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗುವುದು ನಿಶ್ಚಿತ ಎಂದು ಅರಿತಿರುವ ಸರ್ಕಾರ ನಾನಾ ಹಂತಗಳಲ್ಲಿ ಒಕ್ಕೂಟವನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ. ಬುಧವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಒಕ್ಕೂಟದ ಜತೆಗೆ ಸಭೆ ನಡೆಸಿದ್ದರೂ ಅದು ಫಲಕಾರಿಯಾಗಿರಲಿಲ್ಲ. ಗುರುವಾರ ಸಾರಿಗೆ ಇಲಾಖೆ ಅಧಿಕಾರಿಗಳು ಸಾರಿಗೆ ಒಕ್ಕೂಟದ ಜತೆ ಸಭೆ ನಡೆಸಿ ಮನವೊಲಿಕೆಗೆ ಮುಂದಾದರು. ಆದರೆ ಮನವೊಲಿಕೆಗೆ ಬಗ್ಗದ ಸಾರಿಗೆ ಒಕ್ಕೂಟ ಬಂದ್ ಕರೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳ ಮೇಲೆಯೇ ಆರೋಪ
ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆಯ ಮಹತ್ವದ ಸಭೆಯಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳ ಸಮಸ್ಯೆಗಳ ಅರಿವು ಮೂಡಿಸಿದ ನಿಷ್ಠಾವಂತ ಸಂಘಟನೆಗಳನ್ನು ಕಡೆಗಣನೆ ಮಾಡಲಾಗಿದೆ ಅಂತ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಆರೋಪ ಮಾಡಿದ್ದಾರೆ. ಅಲ್ಲದೆ ಅಲ್ಲದೆ ಹೆಚ್ಚುವರಿ ಆಯುಕ್ತರಾದ ಹೇಮಂತ್ ಕುಮಾರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸಿಎಂ ಬಗ್ಗೆಯೂ ಸಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಅಂತ ಇದೆ ವೇಳೆ ಆಗ್ರಹಿಸಿದರು.
ಒಟ್ಟಾರೆ ಸರ್ಕಾರ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಸೆಪ್ಟೆಂಬರ್ 11ರಂದು ಬಂದ್ ನಡೆಯುವುದು ಖಚಿತವಾಗಿದೆ. ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಿ, ಬಂದ್ ಗೆ ತಯಾರಿ ನಡೆಸಿರುವ ಖಾಸಗಿ ಸಾರಿಗೆ ಒಕ್ಕೂಟ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಅದೇನೇ ಇದ್ದರೂ ಇದರಿಂದ ಖಾಸಗಿ ಸಾರಿಗೆ ಅವಲಂಬಿಸಿರುವ ಪ್ರಯಾಣಿಕರು ಸಮಸ್ಯೆ ಆಗುವುದಂತೂ ನಿಶ್ಚಿತ ಎನ್ನಲಾಗಿದೆ.
ಅಂದು ಆಟೋ ರಿಕ್ಷಾ, ಟ್ಯಾಕ್ಸಿ, ಸ್ಕೂಲ್ ಬಸ್ ಸೇರಿದಂತೆ ವಾಹನಗಳು, ಖಾಸಗಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಈಗಾಗಲೇ ಪ್ರಕಟಿಸಿದೆ.
ಈಗ ಇರುವ ಏಕೈಕ ಸಾಧ್ಯತೆ ಎಂದರೆ ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂತಿಮ ಸುತ್ತಿನ ಮಾತುಕತೆ ನಡೆಸುವುದು. ಈ ಮಾತುಕತೆ ಸೆ. 10ರಂದು ನಡೆಯುವ ಸಾಧ್ಯತೆಗಳು ಇವೆ.
ಇದನ್ನೂ ಓದಿ: Transport Strike: ಸೆ.11ಕ್ಕೆ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಪಕ್ಕಾ; ಡೋಂಟ್ ವರಿ ಎಂದ ರಾಮಲಿಂಗಾರೆಡ್ಡಿ