ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಮರವೊಂದು (Tree Fall) ಧರೆಗುರುಳಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಚಾಲುಕ್ಯ ವೃತ್ತದಿಂದ ಮೈಸೂರ್ ಬ್ಯಾಂಕ್ ಕಡೆಯ ರಸ್ತೆ ಬಂದ್ ಆಗಿದೆ. ಜನರು ಓಡಾಟ ವಿಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದಿನನಿತ್ಯ ಹೆಚ್ಚಿನ ವಾಹನ ಸಂಚಾರ ಕಂಡುಬರುವ ರಸ್ತೆ ಇದಾಗಿದೆ.
ಶನಿವಾರ ಬೆಳಗ್ಗೆ 8:40ರ ಸುಮಾರಿಗೆ ಬೃಹತ್ ಮರ ನೆಲಕ್ಕೆ ಉರುಳಿದೆ. ಮಸೀದಿ ಮುಂಭಾಗವೇ ಮರ ಬಿದ್ದಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಧಾವಿಸಿದ್ದರು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರೇ ಮರ ತೆರವು ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ: Accident Case:ಕೇತೇನಹಳ್ಳಿ ಫಾಲ್ಸ್‌ನಿಂದ ಬರುವಾಗ ಕಾಲು ಜಾರಿ ಬಿದ್ದ ಮಹಿಳಾ ಟೆಕ್ಕಿ; 2 ಕಿಮೀ ಹೊತ್ತು ತಂದ ಯುವಕರು
ಚಾಲಕನ ನಿರ್ಲಕ್ಷ್ಯಕ್ಕೆ ಧರೆಗುರುಳಿದ ವಿದ್ಯುತ್ ಕಂಬಗಳು
ಚಾಲಕನ ನಿರ್ಲಕ್ಷ್ಯಕ್ಕೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ 1:30ರ ಸುಮಾರಿಗೆ ಹೈಡ್ರಾಲಿಕ್ ಏರಿಸಿಕೊಂಡು ಬಂದಿದ್ದ ಟಿಪ್ಪರ್ ಚಾಲಕ, ಲಾರಿ ಟಾಪ್‌ಗೆ ವೈರ್ ಸಿಕ್ಕಿಹಾಕಿಕೊಂಡಿದೆ. ಇದನ್ನೂ ಗಮನಿಸದೆ ಲಾರಿ ಚಲಾಯಿಸಿದ್ದರಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡಿದೆ.
ಲಾರಿಯಲ್ಲಿದ್ದ ಜಲ್ಲಿ ಹುಡಿ ಮುಖ್ಯರಸ್ತೆಯ ತುಂಬೆಲ್ಲಾ ಬಿದ್ದಿತ್ತು. ಮದ್ಯಪಾನ ಮಾಡಿ ಲಾರಿ ಚಲಾಯಿಸಿರುವ ಶಂಕೆ ಇದೆ. ಸದ್ಯ ಜೆಸಿಬಿ ಮುಖಾಂತರ ರಸ್ತೆ ತೆರವು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಟಿಪ್ಪರ್ ಹಾಗೂ ಚಾಲಕ ಮಣಿ ಎಂಬಾತನನ್ನು ಚಿಕ್ಕಬಾಣಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ