ಬೆಂಗಳೂರು: ಕರೆಂಟ್ ಶಾಕ್ ನಿಂದ ( Electric shock ) ಇಬ್ಬರು ಕಾರ್ಮಿಕರು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಣನಕುಂಟೆ ಬಳಿ ಇರುವ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ. ಅಸ್ಸಾಂ ಮೂಲದ ದಿಲೀಪ್, ಮಧುಗಿರಿ ಮೂಲದ ರಘು ಮೃತಪಟ್ಟಿದ್ದಾರೆ.
ಎಸ್ ಟಿ ಪಿ ಕೆಲಸ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ. ರಾತ್ರಿ ಪಾಳಿಯಲ್ಲಿ ಎಸ್ ಟಿ ಪಿ ಕೆಲಸ ಮಾಡುತ್ತಿದ್ದ ಯುವಕರು ಕರೆಂಟ್ ಶಾಕ್‌ನಿಂದ ಸಾವಿಗೀಡಾಗಿದ್ದಾರೆ. ಅಪಾರ್ಟೆಂಟ್ ಕುರಿತ ಒಳ ಚರಂಡಿ ಕೆಲಸ ಮಾಡುವ ಸಂಧರ್ಭದಲ್ಲಿ ಅವಘಡವಾಗಿದೆ. ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಯುವಕರು ಕೆಲಸ ಮಾಡುತ್ತಿದ್ದರು.