Site icon Vistara News

IPS Transfer : ಎಡಿಜಿಪಿ ಅಲೋಕ್‌ ಕುಮಾರ್‌ ಸೇರಿ ಇಬ್ಬರು IPS ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ

ADGP Alok Kumar transfer

ಬೆಂಗಳೂರು: ರಾಜ್ಯದ ಇಬ್ಬರು ಐಎಎಸ್‌ ಅಧಿಕಾರಿಗಳಾದ (IPS Officers Transfer) ಎಡಿಜಿಪಿ ಅಲೋಕ್‌ ಕುಮಾರ್‌ (ADGP Alok Kumar) ಮತ್ತು ರಾಮಚಂದ್ರ ರಾವ್‌ (Ramachandra Rao) ಅವರನ್ನು ವರ್ಗಾವಣೆ ಮಾಡಲಾಗಿದೆ ಮತ್ತು ಅವರಿಗೆ ಮುಂಬಡ್ತಿ ನೀಡಲಾಗಿದೆ.

ಅಲೋಕ್ ಕುಮಾರ್ ಅವರನ್ನು ಮೂರು ತಿಂಗಳ ಹಿಂದೆಯಷ್ಟೇ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿಯಾಗಿ ವರ್ಗ ಮಾಡಲಾಗಿತ್ತು. ಅವರಿಗೆ ಮೂರೇ ತಿಂಗಳಲ್ಲಿ ವರ್ಗಾವಣೆ ಭಾಗ್ಯ ಸಿಕ್ಕಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿದ್ದಾಗ ರಾಜ್ಯದಲ್ಲಿ ಎಲ್ಲೇ ಸಮಸ್ಯೆ ಉಂಟಾದರೂ ಅಲ್ಲಿಗೆ ದೌಡಾಯಿಸುತ್ತಿದ್ದರು ಅಲೋಕ್‌ ಕುಮಾರ್.‌ ರಾಜ್ಯದ ಮೂಲೆ ಮೂಲೆಗಳಿಗೆ ಅವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.

ಮುಂದೆ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿಯಾಗಿ ಕೆಲಸ ಮಾಡಿದ ಅವರು ಅಲ್ಲೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಅದರಲ್ಲೂ ಮುಖ್ಯವಾಗಿ ಮರಣದ ಹೆದ್ದಾರಿ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಾಕಷ್ಟು ಕಾನೂನು ಮತ್ತು ತಾಂತ್ರಿಕ ಕ್ರಮಗಳ ಮೂಲಕ ಅಪಘಾತ ಸಾವಿನ ಸಂಖ್ಯೆಯನ್ನು ಒಂದಂಕಿಗೆ ಇಳಿಸಿದ್ದರು.

ಇದನ್ನೂ ಓದಿ: Bangalore-Mysore Expressway: ಮರಣ ಮಾರ್ಗವಾಗಿದ್ದ ಹೆದ್ದಾರಿ ಈಗ ಸೇಫ್‌ ; ಅಪಘಾತಗಳ ಸಂಖ್ಯೆ ಭಾರಿ ಇಳಿಕೆ

ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌, ಆಟೋ, ಬೈಕ್‌ ಸೇರಿದಂತೆ ಹಲವು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಲ್ಲದೆ, ವೇಗಮಿತಿಯನ್ನು ಪ್ರತಿ ಗಂಟೆಗೆ 100 ಕಿ.ಮೀ.ಗೆ ಇಳಿಸಿದ್ದು ಅವರ ಕಾರ್ಯತಂತ್ರದ ಭಾಗವಾಗಿತ್ತು. ಅದರ ಅನುಷ್ಠಾನಕ್ಕಾಗಿ ಅಲ್ಲಲ್ಲಿ ವೇಗ ಮಿತಿ ಪರಿಶೀಲನೆಗೆ ಕ್ಯಾಮೆರಾ ಅಳವಡಿಸಿ ನಿಗಾ ಇಡಲಾಗಿತ್ತು. ಇನ್ನು ಮುಂದೆ ಅವರು ಪೊಲೀಸ್‌ ತರಬೇತಿ ಕೇಂದ್ರವನ್ನು ನೋಡಿಕೊಳ್ಳಲಿದ್ದಾರೆ.

ಕರ್ನಾಟಕ ಹೌಸಿಂಗ್ ಸೊಸೈಟಿಯ ಎಂಡಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮಚಂದ್ರ ರಾವ್ ಅವರಿಗೆ ಮುಂಬಡ್ತಿ ಭಾಗ್ಯ ನೀಡಿದೆ. ರಾವ್ ಅವರನ್ನು ಡಿಜಿಪಿಯಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

Exit mobile version