Site icon Vistara News

Road accident | ಕೆಆರ್‌ ಪುರಂನಲ್ಲಿ ಭೀಕರ ಅಪಘಾತಕ್ಕೆ ಇಬ್ಬರು ಮಹಿಳೆಯರ ಸಾವು, ಮೂವರು ಗಂಭೀರ

riksha

ಬೆಂಗಳೂರು: ಕೆ ಆರ್ ಪುರಂನಲ್ಲಿ ಭೀಕರ ಅಪಘಾತಕ್ಕೆ ಇಬ್ಬರು‌ ಮಹಿಳೆಯರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಫಾಝಿಲಾ‌ ಹಾಗೂ ತಾಸೀನ್ ಎಂಬ ಮಹಿಳೆಯರಿಬ್ಬರು ಮೃತಪಟ್ಟರೆ ಆಟೋ ಚಾಲಕ ಖಾಲೀದ್, ಮಕ್ಕಳಾದ ಸುಮಯ್ಯ ಹಾಗು ಸಾಧಿಯಾ ಸ್ಥಿತಿ ಗಂಭೀರವಾಗಿದೆ.

ಕೆ ಆರ್ ಪುರಂನಿಂದ ಚೆನ್ನಸಂದ್ರಕ್ಕೆ ಹೋಗುತ್ತಿದ್ದ ವೇಳೆ, ಕೆ ಆರ್ ಪುರ ಆರ್ ಟಿ ಒ ಬಳಿ ಅತಿ ವೇಗವಾಗಿ ಬಂದ ಕಪ್ಪು ಬಣ್ಣದ ಇನ್ನೋವಾ ಕಾರು, ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ಕಾರು ಚಾಲಕ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆಯಲ್ಲಿ ಖಾಲೀದ್‌ನ ಪತ್ನಿ ತಾಸೀನ್ ಹಾಗು ಸಹೋದರಿ ಫಾಝಿಲಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶುಕ್ರವಾರ ರಾತ್ರಿ ಸುಮಾರು 9 ಗಂಟೆಯ ಸಂಧರ್ಭದಲ್ಲಿ ಈ ಘಟನೆ ನಡೆದಿದ್ದು, ಉಳಿದ ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಕೆ ಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version