Site icon Vistara News

Bengaluru News: ಬೆಂಗಳೂರಿನಲ್ಲಿ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ

Bengaluru News

ಬೆಂಗಳೂರು: ನಗರದ ಯಲಹಂಕದಲ್ಲಿರುವ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯುಎಫ್‌ನಲ್ಲಿ ಎರಡು ದಿನಗಳ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧಾ ಕಾರ್ಯಕ್ರಮವನ್ನು (Bengaluru News) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಕೇಶವ ಪ್ರಸಾದ್ ಎಸ್. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಬಳಿಕ ಮಾತನಾಡಿದರು. ಈ ವೇಳೆ ಬೆಂಗಳೂರು ಕೆವಿಎಸ್ ಡಿಸಿ ಧರ್ಮೇಂದ್ರ ಪಟ್ಲೆ ಉಪಸ್ಥಿತರಿದ್ದರು.

ಇದನ್ನೂ ಓದಿ: Fixed Deposits: ಪೋಸ್ಟ್ ಆಫೀಸ್ ಎಫ್‌ಡಿ; ಬಡ್ಡಿ ದರ ಎಷ್ಟು, ಏನೆಲ್ಲ ಲಾಭ? 

ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಾದೇಶಿಕವಾಗಿ ಅರ್ಹತೆ ಪಡೆದ ಶಾಲೆಗಳಲ್ಲಿ ಕೆವಿ ಡಿಆರ್‌ಡಿಒ ಬೆಂಗಳೂರು, ಕೆವಿ ನಂಬರ್ ಒನ್ ಎಎಫ್‌ಎಸ್ ಜಾಲಹಳ್ಳಿ ವೆಸ್ಟ್, ಕೆವಿ ನಂಬರ್ ಟು ಎಎಫ್ಎಸ್ ಜಾಲಹಳ್ಳಿ ಈಸ್ಟ್, ಕೆವಿ ನಂಬರ್ ಒನ್ ಹುಬ್ಬಳ್ಳಿ, ಕೆವಿ ನಂಬರ್ ಟು ಬೆಳಗಾವಿ, ಕೆವಿ ಬಿಆರ್‌ಬಿಎನ್‌ಎಂಪಿಎಲ್ ಮೈಸೂರು, ಕೆವಿ ಸಿಆರ್‌ಪಿಎಫ್‌ ಯಲಹಂಕ ಸೇರಿದಂತೆ 04 ಶಾಲೆಗಳು ಮೊದಲ ದಿನ ಪ್ರಸ್ತುತಪಡಿಸಿದವು.

ಇದನ್ನೂ ಓದಿ: Kannada New Movie: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ ಟೀಸರ್ ರಿಲೀಸ್‌

ಎರಡನೇ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ಡಿ.ಎಸ್. ಅರುಣ್, ಕೆವಿಎಸ್ ಬೆಂಗಳೂರು ಎಸಿ ಆರ್. ಪ್ರಮೋದ್ ಹಾಗೂ ಮನೋಹರ್ ಲಾಲ್ ಜೀಂಗರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಉತ್ತಮ ಭಾಷಣಕಾರರನ್ನು ಗೌರವಿಸಿ, ಸನ್ಮಾನಿಸಲಾಯಿತು.

Exit mobile version