Fixed Deposits: ಪೋಸ್ಟ್ ಆಫೀಸ್ ಎಫ್‌ಡಿ; ಬಡ್ಡಿ ದರ ಎಷ್ಟು, ಏನೆಲ್ಲ ಲಾಭ? - Vistara News

ಮನಿ-ಗೈಡ್

Fixed Deposits: ಪೋಸ್ಟ್ ಆಫೀಸ್ ಎಫ್‌ಡಿ; ಬಡ್ಡಿ ದರ ಎಷ್ಟು, ಏನೆಲ್ಲ ಲಾಭ?

ಕಷ್ಟಪಟ್ಟುಗಳಿಸಿದ ಹಣವನ್ನು ಹೂಡಿಕೆ ಮಾಡಲು ಸುರಕ್ಷಿತ ಆಯ್ಕೆಯನ್ನು ಹುಡುಕುತ್ತಿದ್ದರೆ ಭದ್ರತೆಯನ್ನು ಒದಗಿಸುವ ಯೋಜನೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಅಂಚೆ ಕಚೇರಿಯ ಫಿಕ್ಸೆಡ್ ಡೆಪಾಸಿಟ್‌ನಲ್ಲಿ (Fixed Deposits) ಹೂಡಿಕೆ ಮಾಡಿದರೆ ಉತ್ತಮ ಆದಾಯದೊಂದಿಗೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಈ ಕುರಿತ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

Fixed Deposits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆಯಾಗಿ ಎಲ್ಲರ ಗಮನ ಸೆಳೆಯುವ ಪೋಸ್ಟ್ ಆಫೀಸ್‌ನ (post office) ಫಿಕ್ಸೆಡ್ ಡೆಪಾಸಿಟ್‌ಗಳನ್ನು (Fixed Deposits) ಟರ್ಮ್ ಡಿಪಾಸಿಟ್‌ಗಳು (term deposits) ಎಂದೂ ಕರೆಯಲಾಗುತ್ತದೆ. ಇದೊಂದು ಅದ್ಭುತ ಯೋಜನೆಯಾಗಿದ್ದು, ಹೂಡಿಕೆ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇದರಲ್ಲಿ ಹೂಡಿಕೆ (investment) ಮಾಡಬಹುದು. ಅದಕ್ಕೂ ಮೊದಲು ಇದರ ಬಗ್ಗೆ ಸಂಪೂರ್ಣ ತಿಳಿದುಕೊಂಡರೆ ಒಳ್ಳೆಯದು.

ಪೋಸ್ಟ್ ಆಫೀಸ್ ಎಫ್‌ಡಿ ಅಥವಾ ಟರ್ಮ್ ಡೆಪಾಸಿಟ್‌ಗಳು ಇಂಡಿಯಾ ಪೋಸ್ಟ್ ಮೂಲಕ ಉಳಿತಾಯ ಮಾಡುವ ಸುರಕ್ಷಿತ ಮತ್ತು ಸುಲಭವಾದ ಮಾರ್ಗಗಳಾಗಿವೆ.

ಬ್ಯಾಂಕ್‌ಗಳು ಎಲ್ಲ ಕಡೆ ಲಭ್ಯವಿರುವುದಿಲ್ಲ. ಹೀಗಾಗಿ ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಸಿಗುವ ಕೆಲವೊಂದು ಪ್ರಯೋಜನಗಳನ್ನು ನಾವು ಸುಲಭವಾಗಿ ಪಡೆಯಬಹುದು. ಪೋಸ್ಟ್ ಆಫೀಸ್‌ನಲ್ಲಿ ಲಭ್ಯವಿರುವ ಎಫ್‌ಡಿ ಯೋಜನೆಯು ಠೇವಣಿದಾರರಿಗೆ ಹೆಚ್ಚಿನ ಬಡ್ಡಿದರದೊಂದಿಗೆ ತಮ್ಮ ಹಣವನ್ನು ಉಳಿಸಲು ಅವಕಾಶ ನೀಡುತ್ತದೆ. ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆಯು ಗ್ರಾಮೀಣ ಜನರಲ್ಲಿ ವಿಶೇಷವಾಗಿ ಅಚ್ಚುಮೆಚ್ಚಿನದ್ದಾಗಿದೆ. ಯಾಕೆಂದರೆ ಇದು ಭಾರತದಲ್ಲಿನ ಅಗ್ರ ಸ್ಥಿರ ಠೇವಣಿ ಪೂರೈಕೆದಾರರಲ್ಲಿ ಒಂದಾಗಿದೆ.

2024ರ ಬಡ್ಡಿ ದರಗಳು

ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಬಡ್ಡಿ ದರ ಇಂತಿದೆ. 1 ವರ್ಷಕ್ಕೆ ಶೇ. 6, 1 ವರ್ಷ 1 ದಿನದಿಂದ 2 ವರ್ಷಗಳ ವರೆಗೆ ಶೇ. 7, 2 ವರ್ಷ 1 ದಿನದಿಂದ 3 ವರ್ಷಗಳ ವರೆಗೆ ಶೇ. 7.1, 3 ವರ್ಷಗಳಿಂದ 5 ವರ್ಷಗಳವರೆಗೆ ಶೇ. 7.5ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

ಪ್ರಯೋಜನಗಳು ಏನೇನು?

ಪೋಸ್ಟ್ ಆಫೀಸ್‌ನ ಎಫ್‌ಡಿಯಲ್ಲಿ ಒಂದು ವರ್ಷದಿಂದ ಐದು ವರ್ಷಗಳವರೆಗೆ ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಬಹುದು. ಒಬ್ಬ ವ್ಯಕ್ತಿಯು ಯಾವುದೇ ಅಂಚೆ ಕಚೇರಿಯಲ್ಲಿ ತನಗೆ ಬೇಕಾದಷ್ಟು ಎಫ್‌ಡಿ ಖಾತೆಗಳನ್ನು ತೆರೆಯಬಹುದು. ಖಾತೆಗಳನ್ನು 10 ವರ್ಷ ಮತ್ತು ಮೇಲ್ಪಟ್ಟವರು ಯಾರಾದರೂ ತೆರೆಯಬಹುದು. ಅಂತಹ ಖಾತೆಗಳನ್ನು 18 ವರ್ಷ ತುಂಬಿದ ಅನಂತರ ಅಪ್ರಾಪ್ತರ ಹೆಸರಿಗೆ ವರ್ಗಾಯಿಸಬಹುದು.

ಠೇವಣಿ ಮಾಡಬೇಕಾದ ಕನಿಷ್ಠ ಮೊತ್ತ 200 ರೂ. ಆಗಿದ್ದು, ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಇದರಲ್ಲಿ ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ. ಅಗತ್ಯವಿರುವಂತೆ ಏಕ ಮತ್ತು ಜಂಟಿ ಖಾತೆ ನಡುವೆ ಬದಲಾಯಿಸಲೂಬಹುದು.
5 ವರ್ಷಗಳ ಹೂಡಿಕೆ ಮಾಡಿರುವ ಠೇವಣಿಗಳಿಗೆ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು. ಖಾತೆಗಳನ್ನು ಸುಲಭವಾಗಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದಾಗಿದೆ. ಎಲ್ಲ ಖಾತೆಗಳು ಆಯಾ ಕಾಲದ ಬಡ್ಡಿ ದರಗಳೊಂದಿಗೆ ಮುಕ್ತಾಯದ ಸಮಯದಲ್ಲಿ ಸ್ವಯಂ ಚಾಲಿತವಾಗಿ ಮರುಸಮತೋಲನಗೊಳ್ಳುತ್ತವೆ.

ಇದನ್ನೂ ಓದಿ: National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

ಅಗತ್ಯವಿರುವ ದಾಖಲೆಗಳು ಏನೇನು?

ಭಾರತೀಯ ನಿವಾಸಿಗಳಿಗೆ ಒಂಟಿಯಾಗಿ ಅಥವಾ ಜಂಟಿಯಾಗಿ, ಪೋಷಕರ ಆರೈಕೆಯಲ್ಲಿ ಅಪ್ರಾಪ್ತ ವಯಸ್ಕರು ಈ ಖಾತೆಗಳನ್ನು ತೆರೆಯಬಹುದು. ಆದರೆ ಎನ್‌ಆರ್‌ಐಗಳು ಮತ್ತು ಸಂಸ್ಥೆಗಳಿಗೆ ಈ ಖಾತೆ ತೆರೆಯಲು ಅವಕಾಶವಿಲ್ಲ.

ಆಧಾರ್, ಪಾನ್ ಕಾರ್ಡ್ ಗುರುತಿನ ಪುರಾವೆಯಾಗಿ, ವಿದ್ಯುತ್ ಬಿಲ್, ನೀರಿನ ಸಂಪರ್ಕ, ಪಾಸ್‌ಪೋರ್ಟ್ ಇತ್ಯಾದಿಗಳನ್ನು ವಿಳಾಸ ಪುರಾವೆಯಾಗಿ, ಸಾಕ್ಷಿ ಸಹಿಯೊಂದಿಗೆ ನಾಮಿನಿ ವಿವರಗಳನ್ನು ಒಳಗೊಂಡಂತೆ ದಾಖಲೆ ಪುರಾವೆಗಳನ್ನು ಒದಗಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Richest Village: ಗುಜರಾತ್‌ನಲ್ಲಿದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ! ಇಲ್ಲಿಯ ಜನ ಇಟ್ಟಿರುವ ಫಿಕ್ಸೆಡ್‌ ಡಿಪಾಸಿಟ್‌ ಮೌಲ್ಯ 7,000 ಕೋಟಿ ರೂ!

ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವೊಂದು (Richest Village) ಗುಜರಾತ್‌ನಲ್ಲಿದೆ. ಅದರ ಸಮೃದ್ಧಿಯ ಹಿಂದಿನ ಕಾರಣ ಅಚ್ಚರಿಯನ್ನು ಉಂಟು ಮಾಡುತ್ತದೆ. ಇಲ್ಲಿನ ನಿವಾಸಿಗಳು ಕನಿಷ್ಠ 7,000 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ. ಇದು ಅವರು ಎಷ್ಟು ಶ್ರೀಮಂತರು ಎಂಬುದರ ಒಂದು ಸಣ್ಣ ನೋಟವಷ್ಟೇ! ಈ ಕುರಿತ ಕುತೂಹಲಕರ ವರದಿ ಇಲ್ಲಿದೆ.

VISTARANEWS.COM


on

By

Richest Village
Koo

ಗುಜರಾತ್ (Gujarat) ಭಾರತದ ಪ್ರಮುಖ ವ್ಯಾಪಾರ ತಾಣಗಳಲ್ಲಿ ಒಂದಾಗಿದ್ದು, ಇದು ದೇಶಕ್ಕೆ ಕೆಲವು ಉನ್ನತ ಕೈಗಾರಿಕೋದ್ಯಮಿಗಳನ್ನು ನೀಡಿದೆ. ಆದರೆ ಸಮೃದ್ಧಿ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಇಲ್ಲಿರುವ ಪುಟ್ಟ ಗ್ರಾಮವೊಂದು ಏಷ್ಯಾದ ಶ್ರೀಮಂತ (richest village in Asia) ಗ್ರಾಮವಾಗಿ (Richest Village) ಗುರುತಿಸಿಕೊಂಡಿದೆ.

ಕಛ್‌ನಲ್ಲಿರುವ ಮಾಧಾಪರ್ ಅನ್ನು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಲ್ಲಿ ಆರ್ಥಿಕ ಸಮೃದ್ಧಿಗೇನೂ ಕೊರತೆಯಿಲ್ಲ. ಭುಜ್‌ನ ಹೊರವಲಯದಲ್ಲಿರುವ ಈ ಗ್ರಾಮದ ನಿವಾಸಿಗಳು 7,000 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ. ಇದು ಅವರು ಎಷ್ಟು ಶ್ರೀಮಂತರು ಎಂಬುದನ್ನು ಹೇಳುತ್ತದೆ.

ಮಾಧಾಪರ್‌ನಲ್ಲಿ ಪಟೇಲ್ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರ ಜನಸಂಖ್ಯೆಯು ಸುಮಾರು 32,000 ಎಂದು ಅಂದಾಜಿಸಲಾಗಿದೆ. ಇದು 2011 ರಲ್ಲಿ 17,000 ಆಗಿತ್ತು.

ಈ ಹಳ್ಳಿಯು ಹೆಚ್ ಡಿಎಫ್ ಸಿ ಬ್ಯಾಂಕ್, ಎಸ್‌ಬಿಐ, ಪಿಎನ್‌ಬಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಮುಂತಾದ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳನ್ನು ಒಳಗೊಂಡಂತೆ 17 ಬ್ಯಾಂಕ್‌ಗಳನ್ನು ಹೊಂದಿದೆ. ಇದು ಒಂದೇ ಹಳ್ಳಿಗೆ ಅಸಾಮಾನ್ಯವಾಗಿದೆ. ಅದರ ಹೊರತಾಗಿಯೂ ಹೆಚ್ಚಿನ ಬ್ಯಾಂಕ್‌ಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿ ಹೊಂದಿವೆ.


ಗ್ರಾಮದ ಈ ಏಳಿಗೆಯ ಹಿಂದಿನ ಕಾರಣವೆಂದರೆ ಅನಿವಾಸಿ ಭಾರತೀಯ ಕುಟುಂಬಗಳು. ಅವರು ಸ್ಥಳೀಯ ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಪ್ರತಿ ವರ್ಷ ಕೋಟಿ ರೂ. ಗಳನ್ನು ಠೇವಣಿ ಮಾಡುತ್ತಾರೆ. ಗ್ರಾಮವು ಸುಮಾರು 20,000 ಮನೆಗಳನ್ನು ಹೊಂದಿದೆ. ಆದರೆ ಸುಮಾರು 1,200 ಕುಟುಂಬಗಳು ವಿದೇಶದಲ್ಲಿ ಅದರಲ್ಲೂ ಹೆಚ್ಚಾಗಿ ಆಫ್ರಿಕನ್ ದೇಶಗಳಲ್ಲಿ ವಾಸಿಸುತ್ತಿವೆ.

ಮಧ್ಯ ಆಫ್ರಿಕಾದಲ್ಲಿನ ನಿರ್ಮಾಣ ವ್ಯವಹಾರಗಳಲ್ಲಿ ಗುಜರಾತಿಗಳು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಈ ಪ್ರದೇಶ ದೊಡ್ಡ ವಲಸಿಗ ಜನಸಂಖ್ಯೆಯ ಭಾಗವಾಗಿದೆ. ಅನೇಕರು ಯುಕೆ, ಆಸ್ಟ್ರೇಲಿಯಾ, ಅಮೆರಿಕ ಮತ್ತು ನ್ಯೂಜಿಲೆಂಡ್‌ನಲ್ಲಿಯೂ ವಾಸಿಸುತ್ತಿದ್ದಾರೆ.

ಅನೇಕ ಗ್ರಾಮಸ್ಥರು ವಿದೇಶದಲ್ಲಿ ವಾಸಿಸುತ್ತಿದ್ದರೂ, ಅಲ್ಲೇ ಕೆಲಸ ಮಾಡಿಕೊಂಡಿದ್ದರೂ ಅವರು ತಮ್ಮ ಗ್ರಾಮದೊಂದಿಗೆ ನಂಟು ಹೊಂದಿದ್ದಾರೆ ಮತ್ತು ಅವರು ವಾಸಿಸುವ ಸ್ಥಳಕ್ಕಿಂತ ಹೆಚ್ಚಾಗಿ ತಮ್ಮ ಹಣವನ್ನು ಇಲ್ಲಿನ ಬ್ಯಾಂಕ್‌ಗಳಲ್ಲಿ ಇಡಲು ಬಯಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾರುಲ್ಬೆನ್ ಕಾರ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಇದನ್ನೂ ಓದಿ: Job market: ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ; ವರ್ಷಾಂತ್ಯದೊಳಗೆ ಹೊಸಬರ ನೇಮಕಕ್ಕೆ ಮುಂದಾದ ಶೇ. 72ರಷ್ಟು ಕಂಪನಿಗಳು!

ಗ್ರಾಮದ ಬ್ಯಾಂಕ್ ಗಳಲ್ಲಿ ಅಪಾರ ಠೇವಣಿ ಇಡುವುದರಿಂದ ಗ್ರಾಮ ಸಮೃದ್ಧಿಯಾಗಿದೆ. ನೀರು, ನೈರ್ಮಲ್ಯ ಮತ್ತು ರಸ್ತೆಯಂತಹ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿದೆ. ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು, ಕೆರೆಗಳು ಮತ್ತು ದೇವಾಲಯಗಳು ಬಂಗಲೆಗಳಿವೆ ಎನ್ನುತ್ತಾರೆ ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್‌ನ ಸ್ಥಳೀಯ ಶಾಖಾ ವ್ಯವಸ್ಥಾಪಕರು.

Continue Reading

ಸಿನಿಮಾ

Kaun Banega Crorepati: ಕೌನ್ ಬನೇಗಾ ಕರೋಡ್‌‌ಪತಿ ವಿಜೇತರು ತೆರಿಗೆ ಎಷ್ಟು ಕಟ್ಟಬೇಕು?

ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ಸಾಕಷ್ಟು ಪ್ರತಿಭಾವಂತರು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Kaun Banega Crorepati
Koo

ಜನಪ್ರಿಯ ಟಿವಿ ಷೋಗಳಲ್ಲಿ (most famous TV shows) ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ವಿಜೇತರಿಗೆ ಸಾವಿರದಿಂದ ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಹೀಗಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಕಠಿಣ ಸ್ಪರ್ಧೆಯನ್ನು ಎದುರಿಸಿ ಇದರಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಸಾಕಷ್ಟು ಪ್ರತಿಭಾವಂತರು ಇಲ್ಲಿ ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು (tax) ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಗೊಂದಲ ಹಲವರಲ್ಲಿ ಇದೆ.

Kaun Banega Crorepati
Kaun Banega Crorepati


ಕೆಬಿಸಿ ಬಹುಮಾನದ ಮೊತ್ತಕ್ಕೆ ಎಷ್ಟು ತೆರಿಗೆ?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194ಬಿ ಪ್ರಕಾರ ರಿಯಾಲಿಟಿ ಟಿವಿ ಶೋಗಳು, ಲಾಟರಿ, ಸ್ಪರ್ಧೆ, ಕಾರ್ಡ್ ಆಟ ಇತ್ಯಾದಿಗಳಿಂದ ಯಾವುದೇ ರೀತಿಯ ಗಳಿಕೆಯು “ಇತರ ಮೂಲಗಳಿಂದ ಆದಾಯ” ದ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಬಹುಮಾನದ ಮೊತ್ತವು 10,000 ರೂ. ಮೀರಿದರೆ ಮೂಲದಲ್ಲಿ ಶೇ. 30ರಷ್ಟು ತೆರಿಗೆ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಬಹುಮಾನವನ್ನು ಹಸ್ತಾಂತರಿಸುವ ಮೊದಲು ಟಿಡಿಎಸ್ ಕಡಿತಗೊಳಿಸಲು ಅಧಿಕಾರಿಗಳು ಅಥವಾ ಬಹುಮಾನದ ಹಣವನ್ನು ವಿತರಿಸುವ ವ್ಯಕ್ತಿ ಜವಾಬ್ದಾರರಾಗಿರುತ್ತಾರೆ. ಇದಕ್ಕೆ ಸೆಕ್ಷನ್ 80ಸಿ ಅಥವಾ 80ಡಿ ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿಗಳನ್ನು ಪಡೆಯಲು ಸಾಧ್ಯವಿಲ್ಲ.

ಸೆಕ್ಷನ್ 194ಬಿ ನಿಯಮಗಳು ಏನು?

ಸೆಕ್ಷನ್ 194ಬಿ ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳು ನೆನಪಿನಲ್ಲಿರಲಿ. ಎಲ್ಲಾ ರೀತಿಯ ರಿಯಾಲಿಟಿ ಟಿವಿ ಶೋ, ಲಾಟರಿ ಇತ್ಯಾದಿಗಳಿಂದ ಬಹುಮಾನ ಗಳಿಕೆಗಳಿಗೆ ಇದು ಅನ್ವಯಿಸುತ್ತದೆ.

ಬಹುಮಾನದ ಹಣವನ್ನು ಕಂತುಗಳಲ್ಲಿ ಸ್ವೀಕರಿಸಿದರೆ ಪ್ರತಿ ಬಾರಿ ಪಾವತಿಯನ್ನು ಸ್ವೀಕರಿಸಿದಾಗ ಟಿಡಿಎಸ್ ಅನುಪಾತದ ದರದಲ್ಲಿ ತೆರಿಗೆಯನ್ನು ಅನ್ವಯಿಸಲಾಗುತ್ತದೆ.

ಮಾರಾಟವಾಗದ ಲಾಟರಿಯಲ್ಲಿರುವ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ಇದು ವ್ಯಾಪಾರ ಆದಾಯದ ಭಾಗವಾಗಿರುತ್ತದೆ.

ಬಹುಮಾನವು ಕೇವಲ ರಜೆ ಪ್ಯಾಕೇಜ್, ಕಾರು, ಇತ್ಯಾದಿಗಳಾಗಿದ್ದರೆ ವಿಜೇತರು ಅದನ್ನು ಸ್ವೀಕರಿಸುವ ಮೊದಲು ಟಿಡಿಎಸ್ ಪಾವತಿಸಬೇಕಾಗುತ್ತದೆ. ತೆರಿಗೆ ದರವು ಶೇ. 30 ಮತ್ತು ಮಾರುಕಟ್ಟೆ ಮೌಲ್ಯದ ಹೆಚ್ಚುವರಿ ಶುಲ್ಕವನ್ನು ಒಳಗೊಂಡಿರುತ್ತದೆ.

ಒಂದು ವೇಳೆ ನಗದು ಮತ್ತು ವಸ್ತು ರೂಪದ ಬಹುಮಾನವನ್ನು ಸ್ವೀಕರಿಸಿದರೆ ಎರಡರ ಜಂಟಿ ಮೌಲ್ಯದ ಮೇಲೆ ಟಿಡಿಎಸ್ ಅನ್ವಯಿಸುತ್ತದೆ. ಆದರೆ ಅದನ್ನು ನಗದು ಭಾಗದಿಂದ ಮಾತ್ರ ಕಡಿತಗೊಳಿಸಲಾಗುತ್ತದೆ.

ಬಹುಮಾನವು ಕೇವಲ ವಸ್ತುವಾಗಿದ್ದರೆ ಇದನ್ನು ವಿತರಿಸುವ ವ್ಯಕ್ತಿಯು ವಿಜೇತರಿಗೆ ಹಸ್ತಾಂತರಿಸುವ ಮೊದಲು ಎಲ್ಲಾ ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಒಂದು ವೇಳೆ ಬಹುಮಾನ ವಿಜೇತರ ಒಂದು ನಿರ್ದಿಷ್ಟ ಭಾಗವು ಸರ್ಕಾರ ಅಥವಾ ಲಾಟರಿ ಏಜೆನ್ಸಿಗೆ ಹೋದರೆ ಆ ಭಾಗವು ಟಿಡಿಎಸ್ ನಲ್ಲಿ ಬರುವುದಿಲ್ಲ.

ಇದನ್ನೂ ಓದಿ: Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

ಸೆಕ್ಷನ್ 194ಜಿ ಪ್ರಕಾರ ಲಾಟರಿ ಏಜೆಂಟ್‌ಗಳಿಗೆ ಕಮಿಷನ್‌ಗಳ ಪಾವತಿಯು ತೆರಿಗೆಗೆ ಒಳಪಡುತ್ತದೆ.

ಕೌನ್ ಬನೇಗಾ ಕರೋಡ್ ಪತಿಯಲ್ಲಿ ನಗದು ಬಹುಮಾನವನ್ನು ಗೆದ್ದ ಅನಂತರ ಶೇ. 30ರಷ್ಟು ಟಿಡಿಎಸ್ ಮತ್ತು ಶೇ. 4ರಷ್ಟು ಹೆಚ್ಚುವರಿ ಸೆಸ್ ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

Continue Reading

ಮನಿ-ಗೈಡ್

National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

ನಿವೃತ್ತಿ ಮತ್ತು ಮಾಸಿಕ ಪಿಂಚಣಿ ಎರಡಕ್ಕೂ ಏಕಕಾಲದಲ್ಲಿ ಪಾವತಿ ವ್ಯವಸ್ಥೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಕಲ್ಪಿಸಿದೆ. ವಿಶ್ವಾಸಾರ್ಹ ಪಿಂಚಣಿ ಯೋಜನೆಗಾಗಿ ಹುಡುಕುತ್ತಿದ್ದರೆ ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.

VISTARANEWS.COM


on

By

National Pension Scheme
Koo

ದಿನಕ್ಕೆ 200 ರೂ. ಪಾವತಿಸಿ ಮಾಸಿಕ ಪಿಂಚಣಿಯಾಗಿ (monthly pension) ಲಕ್ಷಾಂತರ ರೂಪಾಯಿ ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ನಿವೃತ್ತಿ ಪಿಂಚಣಿಯನ್ನು (Retirement Pension) ಪಡೆಯಲು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (National Pension Scheme) ಅತ್ಯುತ್ತಮ ದಾರಿ ಇದೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯ ಯೋಜನೆಯನ್ನು ಯೋಚಿಸುತ್ತಿದ್ದರೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನಿವೃತ್ತಿ ಮತ್ತು ಮಾಸಿಕ ಪಿಂಚಣಿ ಎರಡಕ್ಕೂ ಏಕಕಾಲದಲ್ಲಿ ಪಾವತಿ ವ್ಯವಸ್ಥೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಕಲ್ಪಿಸಿದೆ. ವಿಶ್ವಾಸಾರ್ಹ ಪಿಂಚಣಿ ಯೋಜನೆಗಾಗಿ ಹುಡುಕುತ್ತಿದ್ದರೆ ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.

ದಿನಕ್ಕೆ ಕೇವಲ 167 ರೂ.

18 ವರ್ಷ ತುಂಬಿದ ಅನಂತರ ಮೊದಲ ತಿಂಗಳಿನಿಂದ ಹೂಡಿಕೆಯನ್ನು ಪ್ರಾರಂಭಿಸಿದರೆ 57 ವರ್ಷಗಳ ಅವಧಿಯವರೆಗೆ ಅಂದರೆ 75 ವಯಸ್ಸಿನವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ದಿನಕ್ಕೆ 167 ರೂಪಾಯಿಯಂತೆ ತಿಂಗಳಿಗೆ 5,000 ರೂ. ಹೂಡಿಕೆ ಮಾಡಿದರೆ ಪಿಂಚಣಿ ಮತ್ತು ನಿವೃತ್ತಿ ಪಾವತಿ ಮೊತ್ತ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಹುದು.

ಹೂಡಿಕೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದರೆ ಚಂದಾದಾರರು 3,51,978 ರೂ.ಗಿಂತ ಕಡಿಮೆಯಿಲ್ಲದ ಮಾಸಿಕ ಪಿಂಚಣಿ ಮತ್ತು 10.55 ಕೋಟಿ ರೂ.ಗಳ ಒಂದು ಬಾರಿ ಪಾವತಿಗೆ ಅರ್ಹರಾಗಿರುತ್ತಾರೆ. ಪಿಂಚಣಿಯು 60ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. ಆ ವಯಸ್ಸಿನಲ್ಲಿ ಒಟ್ಟು ಮೊತ್ತವನ್ನು ಪಡೆಯಬಹುದು.

ವರ್ಷಾಶನ ಶೇ. 40ರಷ್ಟು ಇರುವುದನ್ನು ಶೇ. 50ರಷ್ಟು ಏರಿಕೆ ಮಾಡಿದರೆ ಮಾಸಿಕ ಪಿಂಚಣಿಯಾಗಿ 4,39,973 ರೂ. ಆಗುತ್ತದೆ. ಆದರೆ ಒಂದು ಬಾರಿ ಪಾವತಿ 8,79,94,588 ರೂ.ಗೆ ಇಳಿಯಲಿದೆ.

ದಿನಕ್ಕೆ 200 ರೂ.

ದಿನಕ್ಕೆ 167 ರೂ. ಅನ್ನು 200 ರೂ.ಗೆ ಹೆಚ್ಚಿಸಿದರೆ ಎನ್‌ಪಿಎಸ್ 4,22,374 ರೂ. ಪಿಂಚಣಿ ನೀಡುತ್ತದೆ ಮತ್ತು 12.67 ಕೋಟಿ ರೂ. ಗಳ ಒಂದು ಬಾರಿ ಪಾವತಿಯನ್ನು ನೀಡುತ್ತದೆ. ಇದು ಕಾರ್ಪಸ್‌ನ ಶೇ. 40ರ ದರದಂತೆ ವರ್ಷಾಶನವನ್ನು ನಿರೀಕ್ಷಿಸಬಹುದು ಮತ್ತು ಉಳಿದ ಶೇ. 60 ಅನ್ನು ಒಂದು ಬಾರಿ ಪಾವತಿಯಾಗಿ ತೆಗೆದುಕೊಳ್ಳಬಹುದು.

ಇದನ್ನೂ ಓದಿ: UPI Payment: ಡಿಜಿಟಲ್ ಪಾವತಿಯಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು?

National Pension Scheme
National Pension Scheme


30 ವರ್ಷದಿಂದ ಪ್ರಾರಂಭಿಸಿದರೆ

ಒಬ್ಬನು 30 ವರ್ಷದಿಂದ ಪ್ರಾರಂಭಿಸಿ ಪೂರ್ಣ ಅವಧಿಗೆ ತಿಂಗಳಿಗೆ 5,000 ರೂ. ಹೂಡಿಕೆ ಮಾಡಿದರೆ ಎನ್‌ಪಿಎಸ್ 1,29,260 ರೂಪಾಯಿಗಳ ಪಿಂಚಣಿ ಮತ್ತು 3.87 ಕೋಟಿ ರೂಪಾಯಿಗಳ ಒಂದು ಬಾರಿಯ ಪಾವತಿಯನ್ನು ನೀಡುತ್ತದೆ. ಇದು ಕಾರ್ಪಸ್‌ನ ಶೇ. 40ರಷ್ಟು ವರ್ಷಾಶನ ಖರೀದಿ ಮಾಡಬಹುದು.

ಒಬ್ಬ ವ್ಯಕ್ತಿಯು ತಿಂಗಳಿಗೆ 6,000 ರೂ. ಹೂಡಿಕೆ ಮಾಡಿದರೆ 1,55,112 ರೂ. ಪಿಂಚಣಿಯಾಗಿ ಮತ್ತು 4.65 ಕೋಟಿ ರೂ. ಅನ್ನು ಒಂದು ಬಾರಿ ಪಾವತಿಯಾಗಿ ಪಡೆಯಬಹುದು. ಇದು ಕಾರ್ಪಸ್‌ನ ಶೇ. 40ರಷ್ಟನ್ನು ವರ್ಷಾಶನದ ಖರೀದಿ ಮಾಡಬಹುದು. ಹೂಡಿಕೆದಾರರು ಮಾಡಿದ ಮಾಸಿಕ ಕೊಡುಗೆಗಳಿಗೆ ಹೂಡಿಕೆಯ ಮೇಲಿನ ಲಾಭವು ಶೇ. 10ರಷ್ಟನ್ನು ಆಗಿರುತ್ತದೆ. ವರ್ಷಾಶನದ ಆದಾಯ ದರವು ಶೇ. 6 ಆಗಿದೆ.

Continue Reading

ಮನಿ-ಗೈಡ್

UPI Payment: ಡಿಜಿಟಲ್ ಪಾವತಿಯಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು?

ಯುಪಿಐ ಮೂಲಕ (UPI Payment) ತಪ್ಪಾಗಿ ಬೇರೆಯವರಿಗೆ ಹಣ ಪಾವತಿಯಾದರೆ ಪರಿಹಾರಕ್ಕಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪೋರ್ಟಲ್‌ನಲ್ಲಿ ದೂರು ಸಲ್ಲಿಸಲು ಅವಕಾಶವಿದೆ. ಇಲ್ಲಿ ದೂರು ಸಲ್ಲಿಸುವುದು, ಹೇಗೆ, ಪರಿಹಾರ ಹೇಗೆ ಪಡೆದುಕೊಳ್ಳಬಹುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

UPI Payment
Koo

ಡಿಜಿಟಲ್ ಪಾವತಿ (UPI Payment) ಪದ್ಧತಿ ಇತ್ತೀಚೆಗೆ ಹೆಚ್ಚಾಗಿದೆ. ಇದರ ನಡುವೆ ಬಳಕೆದಾರರು ಅಜಾಗರೂಕತೆಯಿಂದ ತಪ್ಪು ವ್ಯಕ್ತಿಗೆ ಹಣವನ್ನು ವರ್ಗಾಯಿಸುವ ಅಪಾಯವೂ ಹೆಚ್ಚಿದೆ. ತಪ್ಪಿ ಬೇರೆ ಯಾರಿಗಾದರೂ ನಿಮ್ಮಿಂದ ಯುಪಿಐ (UPI) ಮೂಲಕ ಹಣ ಪಾವತಿಯಾದರೆ (money transfer) ಅಂತಹ ವಹಿವಾಟುಗಳನ್ನು ಹಿಂಪಡೆಯಲು ಹಲವು ದಾರಿಗಳಿವೆ.

ಯುಪಿಐ ಮೂಲಕ ನಿಮ್ಮಿಂದ ತಪ್ಪಾಗಿ ಹಣ ಪಾವತಿಯಾದರೆ ಪರಿಹಾರಕ್ಕಾಗಿ ಇಲ್ಲಿ ನೀಡಿರುವ ಕೆಲವು ಕ್ರಮಗಳನ್ನು ಅನುಸರಿಸಿ. ಮೊದಲು ಬಳಸಿರುವ ಪಾವತಿ ವ್ಯವಸ್ಥೆಗೆ ದೂರು ಸಲ್ಲಿಸಿ. ಯುಪಿಐ ವಹಿವಾಟುಗಳಿಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು.

ಎನ್‌ಪಿಸಿಐ ವೆಬ್‌ಸೈಟ್‌ಗೆ (npci.org.in) ಭೇಟಿ ನೀಡಿ ಮತ್ತು ‘ವಿವಾದ ಪರಿಹಾರ ಕಾರ್ಯವಿಧಾನ’ ವಿಭಾಗಕ್ಕೆ ಹೋಗಿ ಅಲ್ಲಿ, ‘ದೂರು’ ಟ್ಯಾಬ್ ಅಡಿಯಲ್ಲಿ ಅಗತ್ಯವಿರುವ ವಿವರಗಳನ್ನು ಹಾಕಿ ಆನ್‌ಲೈನ್ ಮೂಲಕ ದೂರು ಅರ್ಜಿ ಸಲ್ಲಿಸಿ.

ಇದರಲ್ಲಿ ಯುಪಿಐ ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ಎಷ್ಟು ಮೊತ್ತ ವರ್ಗಾಯಿಸಲಾಗಿದೆ, ವಹಿವಾಟಿನ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಜೊತೆಗೆ ಕಡಿತವನ್ನು ತೋರಿಸುವ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.

ಫಾರ್ಮ್ ಅನ್ನು ಭರ್ತಿ ಮಾಡುವಾಗ ದೂರಿಗೆ ಕಾರಣವಾಗಿ ‘ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ’ ಎಂಬುದನ್ನು ಆಯ್ಕೆ ಮಾಡಬೇಕು.


ಎನ್‌ಪಿಸಿಐ ವೆಬ್‌ಸೈಟ್‌ನ ಪ್ರಕಾರ ದೂರುಗಳನ್ನು ಮೊದಲು ಪಿಎಸ್‌ಪಿ ಬ್ಯಾಂಕ್ ಅಥವಾ ಯುಪಿಐ ವಹಿವಾಟಿನ ಟಿಪಿಎಪಿ ಬೋರ್ಡ್‌ನಲ್ಲಿ ಮೊದಲು ದೂರನ್ನು ಸಲ್ಲಿಸಲಾಗುತ್ತದೆ. ಇಲ್ಲಿ ದೂರುಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಸಮಸ್ಯೆ ಪರಿಹಾರವಾಗದೇ ಇದ್ದರೆ ಪಿಎಸ್‌ಪಿ ಬ್ಯಾಂಕ್ ಇದನ್ನು ಪರಿಶೀಲಿಸಲಿದೆ.

ಕೊನೆಯ ಆಯ್ಕೆಯಾಗಿ ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅಥವಾ ಡಿಜಿಟಲ್ ದೂರುಗಳಿಗಾಗಿ ಒಂಬುಡ್ಸ್‌ಮನ್ ಅವರನ್ನು ಸಂಪರ್ಕಿಸಬಹುದು. ಇಲ್ಲಿ ಗ್ರಾಹಕರೊಂದಿಗೆ ನೇರವಾಗಿ ಮಾತುಕತೆ ನಡೆಸಲಾಗುತ್ತದೆ ಮತ್ತು ದೂರಿನ ಸ್ಥಿತಿಗತಿಯ ಬಗ್ಗೆ ಗ್ರಾಹಕರಿಗೆ ವಿವರಿಸಲಾಗುತ್ತದೆ.

ಆರ್‌ಬಿಐ ಒಂಬುಡ್ಸ್‌ಮನ್

ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ವಹಿವಾಟುಗಳಿಗಾಗಿ ಅಧಿಕಾರಿಯನ್ನು ನೇಮಿಸಿದ್ದು, ಇವರು ಡಿಜಿಟಲ್ ಪಾವತಿ ವ್ಯವಸ್ಥೆಯ ದೂರುಗಳನ್ನು ನಿರ್ವಹಿಸುತ್ತಾರೆ.

ಇದನ್ನೂ ಓದಿ: Money Guide: ಎಸ್‌ಐಪಿ-ಪಿಪಿಎಫ್; ಹಣ ಹೂಡಿಕೆಗೆ ಯಾವುದು ಬೆಸ್ಟ್?

ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ಯಾವಾಗ ದಾಖಲಿಸಬೇಕು?

ಒಂದು ತಿಂಗಳ ಅನಂತರವೂ ನಿಮ್ಮ ದೂರು ಇತ್ಯರ್ಥವಾಗದೇ ಉಳಿದಿದ್ದರೆ ಅಥವಾ ಪ್ರತಿಕ್ರಿಯೆಯಿಂದ ನೀವು ಅತೃಪ್ತರಾಗಿದ್ದರೆ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್‌ಗೆ ನೇರವಾಗಿ ದೂರು ಸಲ್ಲಿಸಬಹುದು. ಇದಕ್ಕಾಗಿ ಬ್ಯಾಂಕ್ ಶಾಖೆ ಅಥವಾ ಕಚೇರಿ ಇರುವ ನ್ಯಾಯ ವ್ಯಾಪ್ತಿಯಲ್ಲಿ ದೂರುಗಳನ್ನು ಸಲ್ಲಿಸಬೇಕು ಅಥವಾ ಕೇಂದ್ರೀಕೃತ ಕಾರ್ಯಾಚರಣೆಗಳಿಗಾಗಿ ಗ್ರಾಹಕರ ವಿಳಾಸವನ್ನು ನೋಂದಾಯಿಸಲಾಗುತ್ತದೆ.

ಈ ಹಂತಗಳನ್ನು ಅನುಸರಿಸುವ ಮೂಲಕ ಅನಪೇಕ್ಷಿತ ಡಿಜಿಟಲ್ ಪಾವತಿ ದೋಷಗಳಿಗೆ ಪರಿಹಾರವನ್ನು ಪಡೆಯಬಹುದು ಮತ್ತು ಅಂತಹ ತಪ್ಪುಗಳ ಮೂಲಕ ಕಳೆದುಹೋದ ಹಣವನ್ನು ಮರಳಿ ಪಡೆಯಬಹುದು.

Continue Reading
Advertisement
Bengaluru News
ಬೆಂಗಳೂರು4 mins ago

Bengaluru News: ಬೆಂಗಳೂರಿನಲ್ಲಿ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ

Al-Qaeda terror module
ದೇಶ27 mins ago

Al-Qaeda Terror module: ಮೂರು ರಾಜ್ಯಗಳಲ್ಲಿ ಭರ್ಜರಿ ಉಗ್ರರ ಬೇಟೆ; 11ಶಂಕಿತರು ಅರೆಸ್ಟ್‌

Pralhad Joshi
ಬೆಂಗಳೂರು53 mins ago

Pralhad Joshi: ಮುಂಬೈ, ಕೋಲ್ಕತಾದಲ್ಲಿ ಇವಿ ಬ್ಯಾಟರಿ ಚಾರ್ಜರ್ ಘಟಕಕ್ಕೆ ಬೆಂಗಳೂರು ಮಾದರಿ

Richest Village
ದೇಶ59 mins ago

Richest Village: ಗುಜರಾತ್‌ನಲ್ಲಿದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ! ಇಲ್ಲಿಯ ಜನ ಇಟ್ಟಿರುವ ಫಿಕ್ಸೆಡ್‌ ಡಿಪಾಸಿಟ್‌ ಮೌಲ್ಯ 7,000 ಕೋಟಿ ರೂ!

Cabinet Meeting
ಕರ್ನಾಟಕ1 hour ago

Cabinet Meeting: ಕುಮಾರಸ್ವಾಮಿ, ಇತರ ಮೂವರ ವಿರುದ್ಧದ ಪ್ರಕರಣ; ಪ್ರಾಸಿಕ್ಯೂಷನ್‌ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಂಪುಟ ಸಲಹೆ

Yogi Adityanath
ದೇಶ1 hour ago

Yogi Adityanath: ಯೋಗಿ ಆದೇಶ ಪಾಲಿಸದ 13 ಲಕ್ಷ ಸರ್ಕಾರಿ ನೌಕರರು ವೇತನ ಕಳೆದುಕೊಳ್ಳೋದು ಗ್ಯಾರಂಟಿ! ಏನಿದು ಹೊಸ ನಿಯಮ?

CM Siddaramaiah
ಕರ್ನಾಟಕ2 hours ago

CM Siddaramaiah: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ ಸೂಚನೆ

Fixed Deposits
ಮನಿ-ಗೈಡ್2 hours ago

Fixed Deposits: ಪೋಸ್ಟ್ ಆಫೀಸ್ ಎಫ್‌ಡಿ; ಬಡ್ಡಿ ದರ ಎಷ್ಟು, ಏನೆಲ್ಲ ಲಾಭ?

Water Price hike
ಬೆಂಗಳೂರು2 hours ago

Water Price Hike: ಎಷ್ಟೇ ವಿರೋಧ ಬಂದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತ; ಡಿ.ಕೆ.ಶಿವಕುಮಾರ್

DK Shivakumar
ಬೆಂಗಳೂರು3 hours ago

DK Shivakumar: ನನಗೆ ಸಿಬಿಐಗಿಂತ ಲೋಕಾಯುಕ್ತದಿಂದಲೇ ಹೆಚ್ಚಿನ ಹಿಂಸೆ; ಡಿ.ಕೆ.ಶಿವಕುಮಾರ್ ಆರೋಪ!

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌