Site icon Vistara News

Sumangala s mummigatti : ಹಿರಿಯ ಲೇಖಕಿ ಸುಮಂಗಳಾ ಎಸ್‌ ಮುಮ್ಮಿಗಟ್ಟಿ ನಿಧನ

sumangala mummugatti

#image_title

ಬೆಂಗಳೂರು: ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ, (Sumangala s mummigatti ) ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಸುಮಂಗಳಾ ಎಸ್ ಮುಮ್ಮಿಗಟ್ಟಿಯವರು ಭಾನುವಾರ ಬೆಳಗ್ಗೆ (12-3-2023) ನಿಧನ ಹೊಂದಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ವಿಜ್ಞಾನದ ಕೃತಿಗಳು, ಸಾವಿರಾರು ಲೇಖನಗಳನ್ನು, ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸಿದ್ದ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅವುಗಳಲ್ಲಿ, ಪರಿಸರ ಪ್ರಶಸ್ತಿ ರೇಡಿಯೋ ಅಸ್ಕರ್ ಅಂತರಾಷ್ಟ್ರೀಯ ಪ್ರಶಸ್ತಿಯ ಪ್ರಮುಖ. ಇತ್ತೀಚೆಗೆ ವಿಜ್ಞಾನ ತಂತ್ರಜ್ಞಾನ ದರ್ಶನ ಕೃತಿಯನ್ನು ಪ್ರಕಟಿಸಿದ್ದರು. ಅದ್ಬುತ ಆವಾಸ ಅಂಡಮಾನ್, ಅಲ್ಲಮ ಪ್ರಭು, ಮತ್ತಿತರ ಕೃತಿಗಳನ್ನೂ ರಚಿಸಿದ್ದಾರೆ. ಹಲವಾರು ವಿಜ್ಞಾನ ಸಂವಹನಕಾರರನ್ನು ಪ್ರೋತ್ಸಾಹಿಸಿದ ಕೀರ್ತಿ ಸುಮಂಗಳಾ ಅವರದ್ದಾಗಿದೆ. ಮದ್ಯಾಹ್ನ 2 ಗಂಟೆಗೆ ಚಾಮರಾಜ ಪೇಟೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Exit mobile version