Site icon Vistara News

Viral video | ಮುದ್ದು ಮಾಡುವ ನೆಪದಲ್ಲಿ ಶ್ವಾನವನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ ಯುವಕರು

viral video dog

ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿಗೆ ಅಪರಿಚಿತ ಯುವಕರಿಬ್ಬರು ರಾಡ್‌ನಲ್ಲಿ ಬಡಿದು ಕೊಲೆ ಮಾಡಿರುವ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral video) ಆಗಿದೆ. ರಸ್ತೆಯಲ್ಲಿದ್ದ ಬೀದಿ ನಾಯಿಯನ್ನು ಮುದ್ದಾಡುವ ನೆಪದಲ್ಲಿ ಬಂದ ಇಬ್ಬರು ಯುವಕರು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.

ಒಬ್ಬ ಯುವಕ ಶ್ವಾನವನ್ನು ಮುದ್ದಾಡುತ್ತಾ ಹತ್ತಿರ ಕರೆದರೆ, ಹಿಂದಿನಿಂದ ರಾಡ್‌ ಹಿಡಿದು ಬಂದ ಮತ್ತೊಬ್ಬ ಯುವಕ ಮಲಗಿದ್ದ ಬೀದಿನಾಯಿಗೆ ರಭಸವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಶ್ವಾನವು ರಸ್ತೆಯಲ್ಲಿ ನರಳಾಡುತ್ತಾ ಬಿದ್ದಿತ್ತು. ಇಷ್ಟಕ್ಕೇ ಸುಮ್ಮನಾಗದ ದುರುಳರು ಆ ಶ್ವಾನಕ್ಕೆ ನೀರು ಸುರಿದು ಮತ್ತಷ್ಟು ನರಳುವಂತೆ ಮಾಡಿದ್ದಾರೆ. ಆಗ ಕಿರುಚುತ್ತಾ ಒದ್ದಾಡಿಯೇ ಆ ಮೂಕಪ್ರಾಣಿಯು ಪ್ರಾಣ ಬಿಟ್ಟಿದೆ. ಅಲ್ಲಿಯೇ ಇದ್ದ ಮತ್ತೊಂದು ಶ್ವಾನ ಹೆದರಿ ಓಡಿ ಹೋದರೂ ಬಿಡದ ಪಾಪಿಗಳು ಅದನ್ನು ಹಿಂಬಾಲಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆದರೆ, ಅದು ತಪ್ಪಿಸಿಕೊಂಡಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಸಾರ್ವಜನಿಕರು, ಶ್ವಾನ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ಅಮಾನವೀಯ ಕೃತ್ಯದ ಸಿಸಿಟಿವಿ ದೃಶ್ಯವು ದೆಹಲಿಯದ್ದು ಎನ್ನಲಾಗುತ್ತಿದೆ. ಬೀದಿ ನಾಯಿಗಳ ಮೇಲೆ ಹಲ್ಲೆ ಮಾಡಿರುವುದಕ್ಕೆ ಪಿಸಿ ಆ್ಯಕ್ಟ್‌ 1960 ಪ್ರಕಾರ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವಂತೆ ಅನಿಮಲ್‌ ಆ್ಯಕ್ಟಿವಿಸ್ಟ್‌ ಅರುಣ್‌ ಪ್ರಸಾದ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ | 108 ambulance | ಚಾಲಕರಿಗೆ ಸಿಗದ 3 ತಿಂಗಳ ಸಂಬಳ; ಜಿವಿಕೆಗೆ ಕೊನೇ ಡೆಡ್‌ಲೈನ್ ನೀಡಿದ ಆರೋಗ್ಯ ಇಲಾಖೆ

Exit mobile version