Site icon Vistara News

Viral Video | ಕ್ಲಾಸ್‌ ರೂಮ್‌ನಲ್ಲಿ ವಿದ್ಯಾರ್ಥಿಗಳ ರೋಮ್ಹಾನ್ಸ್: ಕಾಲೇಜಿಂದ ಡಿಬಾರ್‌

Viral Video

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವಿಡಿಯೊಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದಕ್ಕೆ ಹೊಸ ಸೇರ್ಪಡೆ ಆನೇಕಲ್‌ನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರ ಕಿಸ್ಸಿಂಗ್‌ ಮತ್ತು ಉಂಗುರ ತೊಡಿಸುವ ವಿಡಿಯೊ.

ಇದನ್ನೂ ಓದಿ | Viral Video: ಅಯೋಧ್ಯೆ ನದಿಯಲ್ಲಿ ಸ್ನಾನ ಮಾಡುವಾಗ ಪತ್ನಿಗೆ ಮುತ್ತುಕೊಟ್ಟು ಜನರಿಂದ ಗೂಸಾ ತಿಂದ!

ಆನೇಕಲ್‌ ಪಟ್ಟಣದ ಖಾಸಗಿ ಕಾಲೇಜಿನ ಕ್ಲಾಸ್‌ ರೂಮ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರಣಯದ ವಿಡಿಯೊ ಈಗ ವೈರಲ್‌ ಆಗಿದೆ. ವಿದ್ಯಾರ್ಥಿಗಳಿಬ್ಬರು ಕ್ಲಾಸ್‌ನಲ್ಲಿ ಪಾಠ ಕೇಳುವುದು ಬಿಟ್ಟು, ಕೈ ಕೈ ಹಿಡಿದುಕೊಂಡು ತುಟಿಗೆ ಮುತ್ತಿಟ್ಟು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇನ್ನೊಂದು ದೃಶ್ಯದಲ್ಲಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ವಿದ್ಯಾರ್ಥಿ ಉಂಗುರ ತೊಡಿಸುವ ಸನ್ನಿವೇಶವಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡಿದೆ. ಆ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದೆ.

ಇದನ್ನೂ ಓದಿ | Viral Video: ಅಸಭ್ಯ ವರ್ತನೆ; ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಉಗುಳಿದ ಕಾಂಗ್ರೆಸ್‌ ನಾಯಕಿ

Exit mobile version