ಬೆಂಗಳೂರು: ಬೆಂಗಳೂರು 18ಕೆ ಮ್ಯಾರಥಾನ್‌ಗೆ ಖ್ಯಾತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ (Bangalore 18K Marathon) ಚಾಲನೆ ನೀಡಿದರು.
ಬೆಂಗಳೂರು ಹೊಸಕೆರೆಹಳ್ಳಿಯ ಟೋಲ್ ಬಳಿ ಮ್ಯಾರಥಾನ್‌ಗೆ ವಿರಾಟ್ ಕೊಹ್ಲಿ ಅವರು ಚಾಲನೆ ನೀಡಿದರು. 18 ಕಿ.ಮೀ, 10 ಕಿ.ಮೀ ಮತ್ತು 5 ಕಿ.ಮೀ ಓಟಕ್ಕೆ ಚಾಲನೆ ನೀಡಲಾಯಿತು. ನಮಸ್ಕಾರ ಬೆಂಗಳೂರು ಎಂದು ಮಾತು ಪ್ರಾರಂಭಿಸಿದ ವಿರಾಟ್ ಕೊಹ್ಲಿ ಅವರು, ಇಷ್ಟು ಜನ ಸೇರಿರೋದು ನೋಡಿದ್ರೆ ತುಂಬಾ ಖುಷಿಯಾಗುತ್ತದೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದು ಹೇಳಿದರು.
ವಿರಾಟ್ ಕೋಹ್ಲಿ ನೋಡಲು ಅಭಿಮಾನಿಗಳು ಮುಗಿಬಿದ್ದರು. ಕೊಹ್ಲಿ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.