Site icon Vistara News

Vistara News Awards: ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್-‌2023 ಶುಕ್ರವಾರ ಪ್ರದಾನ

Best teachers Vistaranews awards

ಬೆಂಗಳೂರು: ಅಲ್ಪಾವಧಿಯಲ್ಲೇ ರಾಜ್ಯಾದ್ಯಂತ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿ ಮಾಧ್ಯಮ ಎನಿಸಿಕೊಂಡಿರುವ ವಿಸ್ತಾರ ನ್ಯೂಸ್‌ (Vistara News private Ltd) ನಾಡಿನ ಬೆಳಕಾಗಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ (Vistara News Awards) ಉದ್ದೇಶದಿಂದ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್ಸ್‌ -2023 (Vistara News Best teacher award-2023) ಯನ್ನು ನೀಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು (District level awards) ಅತ್ಯುತ್ತಮ ಶಿಕ್ಷಕರಿಗೆ ನೀಡಲಾಗುತ್ತಿದ್ದು, ಬೆಂಗಳೂರು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ (Award function) ಡಿಸೆಂಬರ್‌ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ತಮ್ಮ ಅನುಭವ, ಶಿಸ್ತು ಮತ್ತು ಸಾಮರ್ಥ್ಯಗಳನ್ನು ಧಾರೆ ಎರೆದು ವಿದ್ಯಾರ್ಥಿಗಳನ್ನು ಶ್ರೇಷ್ಠ ವ್ಯಕ್ತಿಗಳಾಗಿ, ಸಮಾಜದಲ್ಲಿ ಗಣ್ಯ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಅಡಿಗಲ್ಲಿಡುವ ಶಿಕ್ಷಕರು ತಾವು ಮಾತ್ರ ಎಲೆಮರೆ ಕಾಯಿಗಳಾಗಿಯೇ ಉಳಿಯುತ್ತಾರೆ. ಅಂಥ ಶಿಕ್ಷಕರನ್ನು ಗುರುತಿಸಿ ಪುರಸ್ಕರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸುವ ಉದಾತ್ತ ಆಶಯದೊಂದಿಗೆ ವಿಸ್ತಾರ ನ್ಯೂಸ್‌ ಈ ಪ್ರಶಸ್ತಿಯನ್ನು ಆರಂಭಿಸಿದೆ.

ಎಲ್ಲರ ಬಾಳನ್ನು ಬೆಳಗಿಸುವ ಶಿಕ್ಷಕರನ್ನು ಪ್ರಶಸ್ತಿಯ ಕಿರೀಟ ತೊಡಿಸಿ ಅವರ ಸಂತೃಪ್ತಿಯಲ್ಲಿ ಸಂಭ್ರಮಿಸಬೇಕು ಎನ್ನುವುದು ವಿಸ್ತಾರ ನ್ಯೂಸ್‌ನ ಆಶಯ. ಅದರ ಜತೆಗೆ ಇದು ಇನ್ನಷ್ಟು ಶಿಕ್ಷಕರಿಗೆ ಪ್ರೋತ್ಸಾಹ ನೀಡಿದಂತಾಗಬೇಕು ಎನ್ನುವುದು ನಮ್ಮ ಕನಸು ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು.

ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರನ್ನು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದ್ದು, ಈಗಾಗಲೇ ಬಳ್ಳಾರಿ, ಬೀದರ್‌, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆದಿದೆ. ಈಗ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಗಣ್ಯರು, ಸಾಧಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು ಜಿಲ್ಲಾ ಮಟ್ಟದ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಪ್ರದಾನ ಕಾರ್ಯಕ್ರಮ ಡಿಸೆಂಬರ್‌ 22ರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಫ್‌ಕೆಸಿಸಿಐಗೆ ಸೇರಿದ ಸರ್‌ ಎಂವಿ ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿಗಳಾದ ಶಿಕ್ಷಣ ತಜ್ಞ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದಾರೆ. ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರು ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭೆ ವಿಪಕ್ಷ ನಾಯಕರಾದ ಆರ್‌. ಅಶೋಕ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಮತ್ತು ಪರಿಶ್ರಮ ನೀಟ್‌ ಅಕಾಡೆಮಿಯ ಸಂಸ್ಥಾಪಕರಾದ ಪ್ರದೀಪ್‌ ಈಶ್ವರ್‌, ಖ್ಯಾತ ಚಿತ್ರ ನಟಿ ತಾರಾ ಅನುರಾಧಾ ಅವರು ಭಾಗವಹಿಸಲಿದ್ದಾರೆ.

ಶಿಕ್ಷಣ ಕ್ಷೇತ್ರದ ಪ್ರಯೋಗಶೀಲರ ಘನ ಉಪಸ್ಥಿತಿ

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದ ಹಲವು ಸಾಧಕ ವ್ಯಕ್ತಿಗಳು, ಚಿಂತಕರು, ಶಿಕ್ಷಣ ತಜ್ಞರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

  1. ವಲ್ಲೀಶ್‌ ಹೇರೂರ್‌, ಮ್ಯಾನೇಜಿಂಗ್‌ ಟ್ರಸ್ಟಿ, ಪ್ರಯೋಗ ಇನ್ಸ್‌ಟಿಟ್ಯೂಟ್‌ ಆಫ್‌ ಎಜುಕೇಶನ್‌ ರಿಸರ್ಚ್‌
  2. ಡಿ. ಶಶಿಕುಮಾರ್‌, ಶಿಕ್ಷಣ ತಜ್ಞರು ಮತ್ತು ನಿರ್ದೇಶಕರು, ಬ್ರೈನ್‌ ಸೆಂಟರ್‌, ಶಿಕ್ಷಣ ಸಂಶೋಧನಾ ಕೇಂದ್ರ
  3. ಡಾ. ಕೆ.ಆರ್‌. ಪರಮಹಂಸ, ಅಧ್ಯಕ್ಷರು ಎಎಂಸಿ ಸಮೂಹ ಶಿಕ್ಷಣ ಸಂಸ್ಥೆಗಳು
  4. ಡಾ. ಟಿ ವೇಣುಗೋಪಾಲ್‌, ಅಧ್ಯಕ್ಷರು, ನ್ಯೂ ಬಾಲ್ಡ್‌ವಿನ್‌ ಸಮೂಹ ಶಿಕ್ಷಣ ಸಂಸ್ಥೆಗಳು
  5. ಡಾ. ಡಿ.ಕೆ. ಮೋಹನ್‌, ಅಧ್ಯಕ್ಷರು, ಕೇಂಬ್ರಿಡ್ಜ್‌ ಸಮೂಹ ಶಿಕ್ಷಣ ಸಂಸ್ಥೆಗಳು

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುಮಾರಿ ನೇಹಾ ಅವರಿಂದ ಭರತನಾಟ್ಯವಿದೆ.

ಗುರುಗಳನ್ನು ಗೌರವಿಸುವ ನಮ್ಮ ದೇಶದ ಪರಂಪರೆಯನ್ನು ಮುಂದುವರಿಸುವ ವಿಸ್ತಾರ ನ್ಯೂಸ್‌ನ ಈ ಹೆಮ್ಮೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿಸ್ತಾರ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್‌.ವಿ. ಧರ್ಮೇಶ್‌, ಎಕ್ಸಿಕ್ಯೂಟಿವ್‌ ಚೇರ್ಮನ್‌ ಡಾ.ಎಚ್‌.ಎಸ್‌. ಶೆಟ್ಟಿ, ನಿರ್ದೇಶಕರಾದ ಶ್ರೀನಿವಾಸ್‌ ಹೆಬ್ಬಾರ್‌, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಪಾದಕ – ಸ್ಪೆಷಲ್‌ ಆಪರೇಷನ್ಸ್‌ ಕಿರಣ್‌ ಕುಮಾರ್‌ ಡಿ.ಕೆ. ಅವರು ವಿನಂತಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಕನ್ನಡ ಶಾಲೆಗಳಿಗೆ ವಿಸ್ತಾರ ನ್ಯೂಸ್‌ ಅಪೂರ್ವ ಕೊಡುಗೆ

ವಿಸ್ತಾರ ನ್ಯೂಸ್‌ ಸುದ್ದಿ ಪ್ರಸಾರದ ಜತೆಗೇ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಸವಲತ್ತುಗಳಿಲ್ಲದ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಊರಿನ ನಾಗರಿಕರು, ದಾನಿಗಳ ಸಹಯೋಗ ಮತ್ತು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆ ಈಗಾಗಲೇ ನಾಡಿನೆಲ್ಲೆಡೆ ಮನೆಮಾತಾಗಿದೆ. ʼನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಅಭಿಯಾನದಡಿ ಕಳೆದ ಒಂದು ವರ್ಷದ ಅವಧಿಯಲ್ಲಿ 300ಕ್ಕೂ ಹೆಚ್ಚು ಶಾಲೆಗಳು ದಾನಿಗಳ ನೆರವಿನಿಂದ ಮೂಲ ಸೌಕರ್ಯಗಳನ್ನು ಪಡೆದಿದೆ. ಹಲವಾರು ಗಣ್ಯರು‌ ಇದರಲ್ಲಿ ಕೈಜೋಡಿಸಿದ್ದಾರೆ.

ಇದನ್ನೂ ಓದಿ: Vistara Best Teacher Award: ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ

ಇದೇ ವೇಳೆ ಶಾಲೆಗಳಿಗೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಶಿಕ್ಷಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಕೂಡ ಮಾಡಲಾಗುತ್ತಿದೆ. ಅತ್ಯುತ್ತಮ ಶಾಲೆಗಳನ್ನು ಗುರುತಿಸಿ ಪರಿಚಯ ಮಾಡಲಾಗುತ್ತಿದೆ. ವಿಸ್ತಾರ ನ್ಯೂಸ್‌ನಲ್ಲಿ ಪ್ರತಿದಿನವೂ ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಕನ್ನಡ ಶಾಲೆಗಳ ಅಭಿವೃದ್ಧಿಯ ಹೊಸ ಶಕೆಯೇ ಆರಂಭಗೊಂಡಿದೆ.

ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್-‌2023 ಪ್ರದಾನ ಸಮಾರಂಭದ ಆಹ್ವಾನ

ಹಲವು ಸಂಘ ಸಂಸ್ಥೆಗಳ ಬೆಂಬಲ

ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ ಪ್ರದಾನ ಕಾರ್ಯಕ್ರಮವನ್ನು ಬೆಂಬಲಿಸಿ ಹಲವು ಶಿಕ್ಷಣ ಸಂಸ್ಥೆಗಳು ವಿಸ್ತಾರ ನ್ಯೂಸ್‌ ಬೆಂಗಾವಲಿಗೆ ನಿಂತಿವೆ. ರಾಮಯ್ಯ ಯುನಿವರ್ಸಿಟಿ ಆಪ್‌ ಅಪ್ಲೈಡ್‌ ಸೈನ್ಸಸ್‌, ನ್ಯೂ ಬಾಲ್ಡ್‌ ವಿನ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಟ್ಸ್‌, ಕೇಂಬ್ರಿಜ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಟ್ಸ್‌, ಎಎಂಸಿ ಎಜುಕೇಶನ್‌ ಮತ್ತು ಎಸ್‌ಡಿಪಿಇಟಿ ಶಿಕ್ಷಣ ಸಂಸ್ಥೆಗಳು ವಿಸ್ತಾರ ನ್ಯೂಸ್‌ನ ಉದಾತ್ತ ಆಶಯವನ್ನು ಬೆಂಬಲಿಸಿವೆ.

Exit mobile version