ಬೆಂಗಳೂರು: ಅಲ್ಪಾವಧಿಯಲ್ಲೇ ರಾಜ್ಯಾದ್ಯಂತ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿ ಮಾಧ್ಯಮ ಎನಿಸಿಕೊಂಡಿರುವ ವಿಸ್ತಾರ ನ್ಯೂಸ್ (Vistara News private Ltd) ನಾಡಿನ ಬೆಳಕಾಗಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ (Vistara News Awards) ಉದ್ದೇಶದಿಂದ ರೂಪಿಸಿದ ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ಸ್ -2023 (Vistara News Best teacher award-2023) ಪ್ರದಾನ ಸಮಾರಂಭ ಶುಕ್ರವಾರ (ಡಿಸೆಂಬರ್ 22) ಬೆಂಗಳೂರಿನಲ್ಲಿ ನಡೆಯಿತು.
ಬೆಂಗಳೂರಿನ ಕೆ.ಜಿ. ರೋಡ್ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲೆಯ 35 ಶಿಕ್ಷಕ/ಶಿಕ್ಷಕಿಯರು ಮತ್ತು ಮೂವರು ಪ್ರಯೋಗಶೀಲ ಸಾಧಕರನ್ನು ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಕೆಲವು ಜಿಲ್ಲೆಗಳ ಕಾರ್ಯಕ್ರಮ ಮುಕ್ತಾಯಗೊಂಡಿದ್ದು, ಉಳಿದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿದೆ.
ಬೆಂಗಳೂರು ಜಿಲ್ಲಾ ಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ, ಖ್ಯಾತ ಚಿತ್ರ ನಟಿ ತಾರಾ ಅನುರಾಧಾ, ಮೇಲ್ಮನೆ ಸದಸ್ಯ ನಾಗರಾಜ್ ಯಾದವ್ ಸೇರಿದಂತೆ ಹಲವು ಗಣ್ಯರು ಶಿಕ್ಷಣ ತಜ್ಞರು ಉಪಸ್ಥಿತರಿದ್ದರು. ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಶಸ್ತಿಗೆ ಭಾಜನರಾದ ಸಾಧಕ ಶಿಕ್ಷಕ/ಶಿಕ್ಷಕಿಯರು, ಪ್ರಯೋಗಶೀಲರು ಇವರು
1.ಪ್ರೊ. ಡಾ. ಜಯರಾಮ ಶೆಟ್ಟಿ ಎಸ್.
ಅಧ್ಯಕ್ಷರು ಮತ್ತು ನಿರ್ದೇಶಕರು, ಶ್ರೀ ದುರ್ಗಾಪರಮೇಶ್ವರಿ ಎಜುಕೇಷನ್ ಟ್ರಸ್ಟ್
ಜೆಸ್‌ಎಸ್‌ಪಿಯು ಕಾಲೇಜು ಮತ್ತು ಜೆ ಎಸ್ ಡಿಗ್ರಿ ಕಾಲೇಜು, ಬೆಂಗಳೂರು.
2. ಡಾ. ಪ್ರಶಾಂತ್ ಫರ್ನಾಂಡಿಸ್
ಪ್ರಾಂಶುಪಾಲರು, ಕೇಂಬ್ರಿಡ್ಜ್ ಸ್ಕೂಲ್, ಕೆ ಆರ್ ಪುರಂ, ಬೆಂಗಳೂರು
3.ಶ್ರೀ ದೇವರಾಜು ಆರ್.
ಜೀವಶಾಸ್ತ್ರ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು, ಕೆ.ಆರ್ ಪುರಂ, ಬೆಂಗಳೂರು-36
4.ಶ್ರೀಮತಿ ಸಾಯಿ ಕುಮಾರಿ ಬಿ.
ಪ್ರಾಂಶುಪಾಲರು, ಅಮರ ಜ್ಯೋತಿ ಇಂಗ್ಲಿಷ್ ಸ್ಕೂಲ್, ದೇವಸಂದ್ರ, ಕೆ.ಆರ್.ಪುರಂ, ಬೆಂಗಳೂರು.
5.ಶ್ರೀ ಗೋಪಿನಾಥ ಕೆ.ವಿ.
ಕೋಆರ್ಡಿನೇಟರ್ & ಮೆಂಟರ್ ಬಾಲ್ಡ್‌ವಿನ್ ಸ್ಕೂಲ್, ಬೆಂಗಳೂರು
6.ಕೆ.ಎಂ. ಮಧುಮಾಲತಿ,
ಸಹಶಿಕ್ಷಕಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪುಟ್ಟೇನಹಳ್ಳಿ, ಬೆಂಗಳೂರು
7.ಶ್ರೀಮತಿ ಸುಜಾತ ಸತೀಶ್
ಪ್ರಾಂಶುಪಾಲರು, ಲಿಯೋ ಕಿಡ್ಸ್, ಜ್ಞಾನ ಭಾರತಿ ಪ್ರೈಮರಿ & ಹೈ ಸ್ಕೂಲ್ ಬೆಂಗಳೂರು.
8.ಶ್ರೀ ಸತೀಶ ಎನ್.ಸಿ.,
ಸಹಾಯಕ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಬಿದರಹಳ್ಳಿ, ಬೆಂಗಳೂರು ದಕ್ಷಿಣ
9.ಶ್ರೀಮತಿ ವಿಜಯಲಕ್ಷ್ಮೀ ಎನ್. ಕೆ.
ಪ್ರಾಂಶುಪಾಲರು, ಜೆ ಎಸ್ ಪ್ರೀ-ಯೂನಿವರ್ಸಿಟಿ ಕಾಲೇಜು, ಬೆಂಗಳೂರು.
10.ಶ್ರೀ ರುದ್ರೇಗೌಡ ಎ.ಆರ್.,
ಸಹಶಿಕ್ಷಕ, ಕರ್ನಾಟಕ ಪಬ್ಲಿಕ್ ಸ್ಕೂಲ್, ಹೆಗ್ಗನಹಳ್ಳಿ, ಬೆಂಗಳೂರು
11.ಸೀಮಾ ಕುಲ್ಸುಮ್
ಉಪ ಪ್ರಾಂಶುಪಾಲರು, ಐಸಿಎಸ್‌ಇ, ನ್ಯೂ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸ್ಕೂಲ್, ಬಾಣಸವಾಡಿ, ಬೆಂಗಳೂರು.
12.ಶ್ರೀ ಶ್ರೀಕಾಂತ ಭಟ್
ಸಂಸ್ಕೃತ ಅಧ್ಯಾಪಕರು, ಪ್ರಾರ್ಥನಾ ಶಾಲೆ, ಬೆಂಗಳೂರು
13. ಡಾ. ಶರ್ಲೆಟ್ (Dr Sharlet DSa)
ಪ್ರಾಂಶುಪಾಲರು, ಬ್ರೂಕ್ಲಿನ್ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿಜಯನಗರ, ಬೆಂಗಳೂರು.
14.ಜ್ಯೋತಿ ಕೆ.ಪಿ.,
ಉಪನ್ಯಾಸಕರು, ಸರ್ಕಾರಿ ಪದವಿಪೂರ್ವ ಕಾಲೇಜು, ಅಗರ, ಎಚ್.ಎಸ್.ಆರ್. ಬಡಾವಣೆ, ಬೆಂಗಳೂರು
15. ಲಲಿತಮ್ಮ ಬಿ.ಎನ್.,
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕೋಡಿ ಚಿಕ್ಕನಹಳ್ಳಿ, ಬೆಂಗಳೂರು
16. ಭಾರತಿ ಮಣೂರ,
ಸಹಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಜಾಲಹಳ್ಳಿ, ಬೆಂಗಳೂರು
17. ಶ್ರೀ ವಾಸು ಆರ್.
ಉಪ ಪ್ರಾಂಶುಪಾಲರು, ನ್ಯೂ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು
18. ಶ್ರೀ ಮೋಹನ್ ಕುಮಾರ್ ಕೆ.,
ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಲೂರು, ತಾವರೆಕೆರೆ, ಬೆಂಗಳೂರು
19. ಕವಿತಾ ಎಚ್.
ದೈಹಿಕ ಶಿಕ್ಷಣ ಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಜರಗನಹಳ್ಳಿ, ಜೆ.ಪಿ. ನಗರ, ಬೆಂಗಳೂರು
20.ಸುಧಾಮಣಿ ಎ,
ಸಹ ಶಿಕ್ಷಕರು, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಆಲಹಳ್ಳಿ, ಅಂಜನಾಪುರ, ಬೆಂಗಳೂರು
21.ಶ್ರೀಮತಿ ದೇವಿ ಎಂ.
ಪ್ರಾಂಶುಪಾಲರು ಕೇಂಬ್ರಿಡ್ಜ್ ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು
22.ಶ್ರೀ ಡಾ. ಸಿ. ಬಿ. ಶಶಿಧರ್
ಕಾರ್ಯದರ್ಶಿಗಳು, ಎಸ್.ಕೆ. ಸಮೂಹ ಶಿಕ್ಷಣ ಸಂಸ್ಥೆ, ಬೊಮ್ಮಸಂದ್ರ, ಅನೇಕಲ್, ಬೆಂಗಳೂರು.
23. ಶ್ರೀ ಎನ್.ನಂಜರಾಜೇ ಅರಸ್
ಶಿಕ್ಷಕರು, ಸೌಂದರ್ಯ ಸ್ಟೇಟ್ ಸ್ಕೂಲ್, ಹಾವನೂರು ಬಡಾವಣೆ, ಬೆಂಗಳೂರು
24. ವಿಜಯಲಕ್ಷ್ಮೀ ಆರ್.
ಉಪ ಪ್ರಾಂಶುಪಾಲರು, ಸಿಬಿಎಸ್‌ಇ, ಬಾಲ್ಡ್‌ವಿನ್ ಸ್ಕೂಲ್, ಬೆಂಗಳೂರು
25.ಶ್ರೀಮತಿ ಶಶಿಕಲಾ ಎಸ್ ಹಿರೇಮಠ
ಮುಖ್ಯ ಶಿಕ್ಷಕಿ, ಇಂಡಿಯನ್ ಪಬ್ಲಿಕ್ ಸ್ಕೂಲ್ ತುರುವೆಕೆರೆ, ತುಮಕೂರು ಜಿಲ್ಲೆ
26. ಶ್ರೀಮತಿ ಜಿ. ವೀಣಾ
ಶಿಕ್ಷಕರು, ಸೌಂದರ್ಯ ಸೆಂಟ್ರಲ್ ಸ್ಕೂಲ್, ಸಿದ್ದೇನಹಳ್ಳಿ, ಬೆಂಗಳೂರು
27.ಶ್ರೀ ನರೇಂದ್ರ ಎಂ., ಸಹಶಿಕ್ಷಕರು,
ಎನ್.ಕೆ.ಎಸ್.ಅನುದಾನಿತ ಪ್ರೌಢ ಶಾಲೆ, ಮೆಜೆಸ್ಟಿಕ್ ವೃತ್ತ, ಬೆಂಗಳೂರು
28. ಗಝಾಲ ಅಂಜುಮ್,
ಸಹ ಶಿಕ್ಷಕಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಹರಿನಗರ, ಬೆಂಗಳೂರು-62
29. ಮಂಗಳಮ್ಮ ಜಿ.,
ಹಿರಿಯ ಮುಖ್ಯ ಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ, ಬೆಂಗಳೂರು ದಕ್ಷಿಣ ವಲಯ- 1
30. ಶೈಲಜಾ ಎಚ್.ಎನ್.
ಕೋಆರ್ಡಿನೇಟರ್ & ಮೆಂಟರ್ ಬಾಲ್ಡ್‌ವಿನ್ ಸ್ಕೂಲ್, ಬೆಂಗಳೂರು
31.ಸುಜಾತಮ್ಮ ಕೆ.ಎಂ.,
ಸಹಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೆರಟೇನ ಅಗ್ರಹಾರ, ಬೆಂಗಳೂರು ದಕ್ಷಿಣ ವಲಯ-3
32. ಧನ್ಯ ಕುಮಾರ ಎನ್.
ಪ್ರೌಢಶಾಲಾ ಸಹಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಚಿಕ್ಕಜಾಲ, ಬೆಂಗಳೂರು ಉತ್ತರ ವಲಯ
33. ಸಾವಿತ್ರಿ ಕೆ.ಎಸ್., ಸಹಶಿಕ್ಷಕಿ,
ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬೈರಸಂದ್ರ, ಜಯನಗರ, ಬೆಂಗಳೂರು
34. ಪುಟ್ಟಲಕ್ಷ್ಮಮ್ಮ, ಕೆ.,
ಸರ್ಕಾರಿ ಪ್ರೌಢ ಶಾಲೆ, ಅಗ್ರಹಾರ ದಾಸರ ಹಳ್ಳಿ, ಬೆಂಗಳೂರು ಉತ್ತರ ವಲಯ
35. ಸವಿತಾ ಕೆ.ಎಲ್.,
ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಲಸಹಳ್ಳಿ, ಆನೆಕಲ್ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ
ಇದನ್ನೂ ಓದಿ: Vistara Best teacher Award 2023: ಶಾಲೆಗಳ ಸಮಗ್ರ ಅಭಿವೃದ್ಧಿ, ಶಿಕ್ಷಕರ ಸಮಸ್ಯೆ ಪರಿಹಾರ; ಸಚಿವ ಮಧು ಬಂಗಾರಪ್ಪ
ವಿಶೇಷ ಗೌರವ ಪಡೆದ ಸಾಧಕರು
- ಶ್ರೀ ಮನೋಜ್ ಪಡಿಕ್ಕಲ್ ಸಿಇಒ, ಪಡಿಕ್ಕಲ್ ಟ್ರಾವೆಲ್ಸ್, ಬೆಂಗಳೂರು
- ಶ್ರೀ ಡಾ.ರಮೇಶ್ ಎ. ಡಫೋಡಿಲ್ಸ್ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿ, ಮಾಲೂರು, ಕೋಲಾರ
- ಡಾ. ಶಿಲ್ಪಾ ಎಚ್. ನವೀನ್, ಅಧ್ಯಕ್ಷರು, ಡಾ. ಶಿಲ್ಪಾ ಸಮನ್ವಯ್ ಫೌಂಡೇಷನ್ ಬೆಂಗಳೂರು