Site icon Vistara News

Vivekananda Jayanti | ಸಭ್ಯನಾಗುವುದು ವ್ಯಕ್ತಿತ್ವದಿಂದಲೇ ಹೊರತು ಬಟ್ಟೆಯಿಂದಲ್ಲ ಎಂದವರು ವಿವೇಕಾನಂದ: ನಟಿ ಪ್ರಣೀತಾ ಸುಭಾಷ್‌

vivekananda-jayanti-actress-pranitha-subhash-speech

ಬೆಂಗಳೂರು: ಒಬ್ಬ ವ್ಯಕ್ತಿ ಸಭ್ಯನಾಗುವುದು ಆತನ ವ್ಯಕ್ತಿತ್ವದಿಂದಲೇ ಹೊರತು ಆತ ಧರಿಸುವ ಬಟ್ಟೆಯಿಂದಲ್ಲ ಎಂಬ ಸತ್ಯವನ್ನು ಸಾರಿದವರು ಸ್ವಾಮಿ ವಿವೇಕಾನಂದ ಎಂದು ಖ್ಯಾತ ಚಲನಚಿತ್ರನಟಿ ಪ್ರಣೀತಾ ಸುಭಾಷ್‌ ತಿಳಿಸಿದರು.

ವಿವೇಕಾನಂದ ಜಯಂತಿ (Vivekananda Jayanti) ಪ್ರಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟ್‌ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ʼವಿವೇಕ ವಂದನೆʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದಿನ ಪೀಳಿಗೆಯು ನಮ್ಮ ಸಂಸ್ಕೃತಿ, ಧರ್ಮ ಮಾರ್ಗವನ್ನು ಬಿಟ್ಟು ಹೋಗುತ್ತಿದೆಯೇ ಎಂಬ ಆತಂಕವಿದೆ. ಅಂತಹ ಸಮಯದಲ್ಲಿ ವಿವೇಕಾನಂದ ಜಯಂತಿಯಂತಹ ಕಾರ್ಯಕ್ರಮಗಳು ಬಹಳ ಮುಖ್ಯವಾಗುತ್ತವೆ.

ನೀವೇಕೆ ಸಭ್ಯ ಬಟ್ಟೆ ಧರಿಸುವುದಿಲ್ಲ ಎಂದು ಸ್ವಾಮಿ ವಿವೇಕಾನಂದರನ್ನು ವಿದೇಶದಲ್ಲಿ ವ್ಯಕ್ತಿಯೊಬ್ಬ ಪ್ರಶ್ನಿಸಿದ. ಆಗ ಸ್ವಾಮಿ ವಿವೇಕಾನಂದರು, ನಿಮ್ಮ ದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಸಭ್ಯನನ್ನಾಗಿ ಮಾಡುವುದು ಟೈಲರ್‌. ಆದರೆ ನಮ್ಮ ದೇಶದಲ್ಲಿ ಒಬ್ಬನ ವ್ಯಕ್ತಿತ್ವವೇ ಆತನನ್ನು ಸಭ್ಯನನ್ನಾಗಿಸುತ್ತದೆ ಎಂದು ಉತ್ತರ ನೀಡಿದರು. ಅವರಂತೆಯೇ ನಾವೆಲ್ಲರೂ ಜೀವನ ನಡೆಸಬೇಕು ಎಂದರು.

ಘನ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು ಸ್ವಾಮಿ ವೀರೇಶಾನಂದ ಸರಸ್ವತೀ, ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಮತ್ತು ಎಮ್‌ಡಿ ಎಚ್‌.ವಿ. ಧರ್ಮೇಶ್‌, ಶಾಸಕ ಸಿದ್ದು ಸವದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ವಿವೇಕಯುಗ ಫೌಂಡೇಷನ್‌ ಅಧ್ಯಕ್ಷ ಡಾ. ಡಿ.ಎಂ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣ ಮೂರ್ತಿ ಹಾಗೂ ಭವಾನಿ ಹೆಗಡೆ ಅವರ ಗಾಯನ ಕಾರ್ಯಕ್ರಮವಿತ್ತು.

ಸಹಯೋಗ:
ಕಾರ್ಯಕ್ರಮಕ್ಕೆ ಪರಿಶ್ರಮ ನೀಟ್‌ ಅಕಾಡೆಮಿ, ಕೆಎಂಎಫ್‌ ನಂದಿನಿ, ಎಎಂಸಿ ಎಜುಕೇಷನ್‌, ವಿವೇಕಯುಗ ಫೌಂಡೇಷನ್‌, ಕ್ಯಾಮ್ಸ್‌ ಕರ್ನಾಟಕ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ ಒದಗಿಸಿದ್ದವು.

ಇದನ್ನೂ ಓದಿ | Vivekananda Jayanti 2023 | ವ್ಯಕ್ತಿತ್ವದಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆ ಬೆಳೆಸಿಕೊಳ್ಳಿ: ಸ್ವಾಮಿ ವೀರೇಶಾನಂದ ಸರಸ್ವತೀ

Exit mobile version