ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಕುರಿತು ಬಿಜೆಪಿ ನಾಯಕರು ಉಪಯೋಗಿಸುತ್ತಿದ್ದ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಭಾರತ ಘೋಷಣೆಯಂತೆಯೇ ಇದೀಗ ಕಾಂಗ್ರೆಸ್ ವತಿಯಿಂದ ಬಿಜೆಪಿ ವಿರುದ್ಧ ಆನ್‌ಲೈನ್ ಅಭಿಯಾನವನ್ನು ಆರಂಭಿಸಲಾಗಿದೆ.
ಇತ್ತೀಚೆಗೆ ಬೆಳಕಿಗೆ ಬಂದ ಮತದಾರರ ದತ್ತಾಂಶ ಅಕ್ರಮ ಸಂಗ್ರಹ ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ, ಮತದಾರರ ಗುರುತಿನ ಚೀಟಿಯನ್ನಲ್ಲ, ಬಿಜೆಪಿಯನ್ನು ಡಿಲೀಟ್ ಮಾಡಿ (Delete BJP Not Voter ID) ಎಂಬ ಅಭಿಯಾನ ಆರಂಭಿಸಿದೆ.
ಇದು ಕಾಂಗ್ರೆಸ್‌ನ ಡಿಜಿಟಲ್ ಅಭಿಯಾನವಾಗಿದ್ದು, ಮತದಾರರ ಹೆಸರಿನಲ್ಲಿ ಗುರುತಿನ ಚೀಟಿ ಇದೆಯೇ ಇಲ್ಲವೇ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಬೆಂಗಳೂರಿನಲ್ಲಿ 6.6 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮತದಾರರ ಪಟ್ಟಿಯನ್ನು ಪರಿಶೀಲಿಸಲು ಚುನಾವಣಾ ಆಯೋಗದ ವೆಬ್‌ಸೈಟ್ www.electoralsearch.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ.
ವಾಟ್ಸ್‌ಆ್ಯಪ್, ಫೇಸ್‌ಬುಕ್ ಡಿಜಿಟಲ್ ವೇದಿಕೆ ಮೂಲಕ ಬೆಂಗಳೂರು ಮತದಾರರನ್ನು ತಲುಪಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಲು ಅಭಿಯಾನ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ | Voter Data | ಹುಬ್ಬಳ್ಳಿಯಲ್ಲಿ ಆ್ಯಪ್ ಮೂಲಕ ಸರ್ವೇ ನಡೆಸಿ ಮತದಾರರ ಮಾಹಿತಿ ಪಡೆಯುತ್ತಿದ್ದ ಮೂವರ ಸೆರೆ