Site icon Vistara News

Voting Awareness : ಸಾಲು ಸಾಲು ರಜೆ; ಮತದಾನಕ್ಕೆ ಚಕ್ಕರ್ ಹಾಕಿ, ಔಟಿಂಗ್ ಹೋದ್ರೆ ಬರುತ್ತೆ ನೋಟಿಸ್

Voting Awareness

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024 ) ಮತದಾನಕ್ಕೆ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೊನೆ ಹಂತದ ತಯಾರಿ ನಡೆಸುತ್ತಿದ್ದಾರೆ. ಇದರೊಟ್ಟಿಗೆ ಬೆಂಗಳೂರಲ್ಲಿ ಮತದಾನ ಪ್ರಮಾಣ (Voting Awareness) ಹೆಚ್ಚಿಸಲು ಈ ಬಾರಿಯೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಬಿಬಿಎಂಪಿ ಸಕ್ರಿಯ ಪಾತ್ರವನ್ನು ವಹಿಸಿತ್ತು. ಇದೀಗ ಏಪ್ರಿಲ್‌ 26ರಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿನೂತನ ಮಾರ್ಗ ಕಂಡುಕೊಂಡಿದೆ.

ಸಾಲು ಸಾಲು ರಜೆ ಇದೆ ಎಂದು ಮತದಾನ ಮಾಡುವುದು ಬಿಟ್ಟು ಐಟಿಬಿಟಿ ಉದ್ಯೋಗಿಗಳು ಔಟಿಂಗ್ ಹೋದರೆ ನೋಟಿಸ್ ಬರುವುದು ಖಂಡಿತ. ಮತದಾನ ಜಾಗೃತಿ ಬೆನ್ನಲ್ಲೇ ಬಿಬಿಎಂಪಿ ಬಿಸಿ ಮುಟ್ಟಿಸಲು ಮುಂದಾಗಿದೆ. ಐಟಿಬಿಟಿ ಕಂಪನಿಗಳ ಜತೆಗೆ ಸಮನ್ವಯತೆಯೊಂದಿಗೆ ಕಡ್ಡಾಯ ಮತದಾನಕ್ಕೆ ಕ್ರಮವಹಿಸಲಾಗುತ್ತಿದೆ.

ವೋಟ್ ಮಾಡದೆ ರಜೆ ಎಂಜಾಯ್ ಮಾಡಲು ಊರು ಬಿಡುವ ಉದ್ಯೋಗಿಗಳಿಗೆ ಆಯಾ ಕಂಪನಿಗಳಿಂದಲೇ ಬಿಬಿಎಂಪಿಗೆ ಸಂದೇಶ ರವಾನೆ ಆಗುತ್ತದೆ. ಕಂಪೆನಿ ನೀಡುವ ಮಾಹಿತಿ ಆಧಾರದ ಮೇಲೆ ಉದ್ಯೋಗಿಗಳ ಮೇಲೆ ಬಿಬಿಎಂಪಿ ಕ್ರಮಕ್ಕೆ ಮುಂದಾಗಲಿದೆ.

ಇದನ್ನೂ ಓದಿ: Voting awareness: ಸಮುದ್ರದಾಳದಲ್ಲಿ ಮತದಾನ ಜಾಗೃತಿ

ಏಪ್ರಿಲ್‌ 26ರಂದು ಬನ್ನೇರುಘಟ್ಟ ಪಾರ್ಕ್‌ ಕ್ಲೋಸ್‌

ಬೆಂಗಳೂರು: ಲೋಕಸಭೆ ಚುನಾವಣೆ (Lok sabha Election 2024) ಹಿನ್ನೆಲೆಯಲ್ಲಿ ಶೇ 100ಕ್ಕೆ 100ರಷ್ಟು ಮತದಾನ (Voting) ಆಗಬೇಕೆಂದು, ಚುನಾವಣಾ ಆಯೋಗ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಚುನಾವಣಾ ಆಯೋಗಕ್ಕೆ ಸಾಥ್‌ ನೀಡಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ಆಡಳಿತ ಮಂಡಳಿ ಮತದಾನದ ದಿನದಂದು ರಜೆ ಘೋಷಣೆ ಮಾಡಿದೆ.

ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ರಾಜಕೀಯ ಪಕ್ಷಗಳಂತೆ ಚುನಾವಣಾ ಆಯೋಗವೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನ ನಡೆಯುವ (Voting Day) ಆ ಎರಡು ದಿನವೂ ಸಾರ್ವತ್ರಿಕ ರಜೆಯನ್ನು (Government Holiday) ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು (Paid leave) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದರೆ, 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ದಿನಗಳಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

ರಜೆ ಸಿಕ್ಕ ಖುಷಿಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಝೂ, ಸಫಾರಿ ಮತ್ತು ಚಿಟ್ಟೆ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಏಪ್ರಿಲ್‌ 26ರಂದು ಮತದಾನ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರಜೆ ಘೋಷಿಸಲಾಗಿದೆ. ಲೋಕಸಭಾ ಚುನಾವಣೆಯ ಮತದಾನದಲ್ಲಿ ಜನರು ಸಕ್ರಿಯವಾಗಿ ಭಾಗಿಯಾಗಲೆಂದು ರಜೆ ಘೋಷಣೆ ಮಾಡಲಾಗಿದೆ.

ಮತದಾನದ ಪ್ರಮಾಣ ಹೆಚ್ಚಳ ಮಾಡುವ ದೃಷ್ಟಿಯಿಂದ ಏಪ್ರಿಲ್‌ 26ರಂದು ಬನ್ನೇರುಘಟ್ಟ ಪಾರ್ಕ್‌ ರಜೆ ಇರಲಿದೆ. 26 ಬದಲಾಗಿ ಏಪ್ರಿಲ್‌ 30ರಂದು ಪಾರ್ಕ್‌ ತೆರೆಯಲಿದೆ. ಬನ್ನೇರುಘಟ್ಟ ಪಾರ್ಕ್‌ ಪ್ರತಿ ಮಂಗಳವಾರ ರಜೆ ಇರುತ್ತಿತ್ತು. ಆದರೆ 26ರ ರಜೆಯನ್ನು ಸರಿದೂಗಿಸುವ ಸಲುವಾಗಿ ಏಪ್ರಿಲ್‌ 30ರಂದು ಪ್ರವಾಸಿಗರ ವೀಕ್ಷಣೆಗೆ ಲಭ್ಯ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version