Site icon Vistara News

Water Metre theft : ಬೆಂಗಳೂರಿನಲ್ಲಿ ಶುರುವಾಗಿದೆ ವಾಟರ್‌ ಮೀಟರ್‌ ಕಳ್ಳತನ

water metre

ಬೆಂಗಳೂರು: ಬೆಂಗಳೂರಿನಲ್ಲಿ ಮನೆಗಳಿಗೆ ಅಳವಡಿಸಿರುವ ವಾಟರ್ ಮೀಟರ್‌ಗಳ (Water Metre theft) ಕಳ್ಳತನ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ.

ಕಳ್ಳರು ಸ್ಕೂಲ್ ಬ್ಯಾಗ್ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಮನೆ ಮುಂದೆ ಅಳವಡಿಸಿರುವ ವಾಟರ್ ಮೀಟರ್ ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಲಾಲ್ ಬಾಗ್ ಬಳಿ ಇರುವ ಚಿಕ್ಕ ಮಾವಳ್ಳಿ ಬಳಿ ಇಂಥ ಕೃತ್ಯ ನಡೆದಿದೆ. ಬಿಡಬ್ಲ್ಯೂ ಎಸ್ ಎಸ್ ಬಿಗೆ ಸೇರಿದ ವಾಟರ್ ಮೀಟರ್ ಅನ್ನು ಕಳ್ಳತನ ಮಾಡಲಾಗಿದೆ. ಈ ಭಾಗದಲ್ಲಿ ಹಲವೆಡೆ ವಾಟರ್ ಮೀಟರ್ ಕಳ್ಳತನ ನಡೆದಿದೆ ಎಂದು ಸಮಾಜಿಕ ಜಾಲತಾಣದಲ್ಲಿ ಜನತೆ ದೂರಿದ್ದಾರೆ.

Exit mobile version