ಬೆಂಗಳೂರು: ಬಂಗಾಳ ಕೊಲ್ಲಿ ವಾಯುಭಾರ ಕುಸಿತದ ಎಫೆಕ್ಟ್ ಬೆಂಗಳೂರಿಗೂ ತಟ್ಟಿದ್ದು, ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ನಿನ್ನೆಯಿಂದ ನಗರದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.
ಸೋಮವಾರ ಬೆಳಗ್ಗೆಯಿಂದ ಮತ್ತೆ ಚಳಿ, ಮೋಡ ಕವಿದ ವಾತಾವರಣ ಹಬ್ಬಿದೆ. ಡಿಸೆಂಬರ್‌ನ ಚಳಿ ಈಗಾಗಲೇ ರಾಜಧಾನಿಯಲ್ಲಿ ಪಾರಮ್ಯ ಮೆರೆದಿದ್ದು, ಅದರ ಜತೆಗೆ ಸೈಕ್ಲೋನ್ ಎಫೆಕ್ಟ್ ಕೂಡ ಸೇರಿಕೊಂಡು ಹಿಲ್ ಸ್ಟೇಶನ್ ಥರದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆಯ ಸಾಧ್ಯತೆ ಇದೆ. ತುಂತುರು ಮಳೆಯಿಂದ, ಭಾರಿ ಮಳೆ ಸಾಧ್ಯತೆಯಿದೆ. ಚಳಿ, ಮೋಡ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ | Art Exhibition | ಹವಾಮಾನ ಬದಲಾವಣೆ ಕುರಿತ ಕಲಾ ಪ್ರದರ್ಶನ