ಬೆಂಗಳೂರು: ಬೆಂಗಳೂರಿನ ಬನಶಂಕರಿಯಲ್ಲಿ ಬೆಳ್ಳಂಬೆಳಗ್ಗೆ ಪುಂಡರು ವ್ಹೀಲಿಂಗ್ ನಡೆಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಂಡರ ಹುಚ್ಚಾಟಕ್ಕೆ ಅಮಾಯಕರು ಜೀವ ಕಳೆದುಕೊಂಡರೆ ಯಾರು ಹೊಣೆ ಎಂದು ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಬೆಂಗಳೂರಿನ ಬನಶಂಕರಿಯ 3 ನೇ ಹಂತದಲ್ಲಿ ಘಟನೆ…ನಡೆದಿದೆ. ಜಿಗ್ ಜಾಗ್ ಜೊತೆ ವಿಲ್ಹಿಂಗ್ ಮಾಡಿ ಪುಂಡರ ಹುಚ್ಚಾಟ ನಡೆದಿದೆ. ಪೊಲೀಸರು ವ್ಹೀಲಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ಮಾತ್ರವಲ್ಲದೆ ತುಮಕೂರು, ಮೈಸೂರು ಮೊದಲಾದ ಕಡೆಗಳಲ್ಲಿ ಕೂಡ ವ್ಹೀಲಿಂಗ್ ಹಾವಳಿ ಹೆಚ್ಚುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಈ ಉಪಟಳ ಹೆಚ್ಚು ಎನ್ನುತ್ತಾರೆ ಸಾರ್ವಜನಿಕರು.