ಬೆಂಗಳೂರು: ವೈಟ್ ಟಾಪಿಂಗ್ ಯೋಜನೆಯಡಿ ಗೂಡ್ಸ್ ಶೆಡ್ ರಸ್ತೆಯು ನವೀಕರಣಗೊಂಡಿದ್ದು, ಜುಲೈ 7ರ ಗುರುವಾರದಂದು ಸಂಚಾರಕ್ಕೆ ಮುಕ್ತವಾಗಲಿದೆ. ಈ ಕುರಿತು ಬಿಬಿಎಂಪಿ ಚೀಫ್ ಎಂಜಿನಿಯರ್ (ಪ್ರಾಜೆಕ್ಟ್ಸ್) ಲೋಕೇಶ್ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ವೈಟ್ ಟಾಪಿಂಗ್ ರಸ್ತೆಗಾಗಿ ಸುಮಾರು 11.88 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಿಜಿಎಸ್ ಫ್ಲೈಓವರ್, ಅಂಬೇಡ್ಕರ್ ಡೌನ್ ಲ್ಯಾಂಪ್‌ನಿಂದ ಡಾ.ಟಿಸಿಎಂ ರಾಯನ್ ರಸ್ತೆ ಮಾರ್ಗವಾಗಿ ಶಾಂತಲಾ ಜಂಕ್ಷನ್‌ವರೆಗೆ ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಬೇಲಿಮಠದ ರಸ್ತೆಯಿಂದ ಶಾಂತಲಾ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 15ರಿಂದ ಗೂಡ್ಸ್ ಶೆಡ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು. ನಗರದ ಪ್ರಮುಖ ಲಿಂಕ್ ರಸ್ತೆಗಳಲ್ಲಿ ಒಂದಾದ ಗೂಡ್ಸ್ ಶೆಡ್ ರಸ್ತೆಯು ಗುರುವಾರದಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಮುಕ್ತವಾಗಲಿದೆ.
ಇದನ್ನೂ ಓದಿ | ಕಾಮಗಾರಿ ಮುಗಿದರೂ ರಸ್ತೆ ಬಂದ್ ಮಾಡಿದ ಬಿಜೆಪಿ ಸದಸ್ಯರು, ಸ್ಥಳೀಯರಿಂದ ಬಂಡೆ ತೆರವು