Site icon Vistara News

Kaithi 2 Karthi | ಕೈದಿ-2 ಯಾವಾಗ ಬರುತ್ತೆ? ಈ ಬಗ್ಗೆ ನಟ ಕಾರ್ತಿ ಹೇಳಿದ್ದೇನು?

Kaithi Karthi

ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಈಗೇನಿದ್ದರೂ ಪಾರ್ಟ್-1 & ಪಾರ್ಟ್-2 ಲೆಕ್ಕಾಚಾರ. ಅದರಲ್ಲೂ ಬಿಗ್​ ಬಜೆಟ್ ಚಿತ್ರಗಳನ್ನ ಒಂದೇ ಭಾಗದಲ್ಲಿ ತೋರಿಸೋದಿಲ್ಲ. ಹೀಗೆ ‘ಕೈದಿ-2’ ಕೂಡ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ. ಕೋಟ್ಯಂತರ ಜನ ‘ಕೈದಿ-2’ (Kaithi 2 Karthi) ನೋಡಲು ಕಾಯುತ್ತಿದ್ದು, ‘ಕೈದಿ-2’ ಬಿಡುಗಡೆಯ ಕುರಿತು ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ.

2019ರಲ್ಲಿ ರಿಲೀಸ್ ಆಗಿದ್ದ ‘ಕೈದಿ-1’ ಸಲೀಸಾಗಿ ₹100 ಕೋಟಿ ಕ್ಲಬ್ ಸೇರಿತ್ತು. ಈಗ ‘ಕೈದಿ-2’ ಇದಕ್ಕಿಂತ 10 ಪಟ್ಟು ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದೆ. ಹೀಗಾಗಿ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ‘ಕೈದಿ-2’ ನೋಡಲು ಕಾಯುತ್ತಿದ್ದಾರೆ. ಈ ಹೋತ್ತಲ್ಲೇ ‘ಕೈದಿ’ ಖ್ಯಾತಿಯ ಕಾರ್ತಿ ಬಿಗ್​ ಅಪ್ಡೇಟ್ ನೀಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಪ್ರಮೋಷನ್​ಗಾಗಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ನಟ ಕಾರ್ತಿ ಗುಟ್ಟು ಬಿಚ್ಚಿಟ್ಟಿದ್ದಾರೆ. ‘ಕೈದಿ-2’ ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕೈದಿ-2’ ಯಾವಾಗ..?
ಒಂದು ರಾತ್ರಿಯ ಘಟನೆ ಆಧರಿಸಿ ತಯಾರಾಗಿದ್ದ ಸಿನಿಮಾ ‘ಕೈದಿ-1’ ಯಾರೂ ಊಹಿಸದ ಯಶಸ್ಸು ಗಳಿಸಿತ್ತು. ಇದಾದ ಬಳಿಕ ನಟ ಕಾರ್ತಿ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡರು. ಇದೇ ಕಾರಣಕ್ಕೆ ‘ಕೈದಿ-2’ ಯಾವಾಗ ರಿಲೀಸ್ ಆಗುತ್ತೆಂದು ಅಭಿಮಾನಿಗಳು ಕಾಯುತ್ತಿದ್ದರು. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ನಟ ಕಾರ್ತಿ, ಮುಂದಿನ ವರ್ಷ ಅಂದರೆ 2023ಕ್ಕೆ ಬಿಗ್ ಅಪ್ಡೇಟ್ ನೀಡುವ ಮುನ್ಸೂಚನೆ ಕೊಟ್ಟಿದ್ದಾರೆ. ಹಾಗೆಯೇ, ಮುಂದಿನ ವರ್ಷವೇ ‘ಕೈದಿ-2’ ರಿಲೀಸ್​ ಆಗಬಹುದು ಎಂಬ ಸುಳಿವನ್ನೂ ನೀಡಿದ್ದಾರೆ. ಗುರುವಾರ (ಸೆ.30) ‘ಪೊನ್ನಿಯಿನ್ ಸೆಲ್ವನ್’ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ ನಟ ಕಾರ್ತಿ.

ಒಂದು ಕಡೆ ಕಮಲ್ ಹಾಸನ್ ಅವರ ‘ವಿಕ್ರಂ’ ಸಿನಿಮಾ ಕ್ಲೈಮ್ಯಾಕ್ಸ್ ದೊಡ್ಡ ಟ್ವಿಸ್ಟ್ ನೀಡಿದೆ. ‘ಕೈದಿ-2’ ಕುರಿತು ಹಿಂಟ್ ಕೊಟ್ಟಿತ್ತು ‘ವಿಕ್ರಂ’ ಕ್ಲೈಮ್ಯಾಕ್ಸ್. ಹಾಗೇ ‘ವಿಕ್ರಂ-2’ ಮತ್ತು ರೋಲೆಕ್ಸ್ ನಡುವೆ ಕಾಳಗಕ್ಕೂ ಕಹಳೆ ಊದಿದೆ. ಇಷ್ಟೆಲ್ಲದರ ನಡುವೆ ನಟ ಕಾರ್ತಿ ಬೆಂಗಳೂರಿನಲ್ಲಿ ‘ಕೈದಿ-2’ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸಿನಿಮಾ ಮೇಲಿನ ಕುತೂಹಲ ಈಗ ದುಪ್ಪಟ್ಟಾಗಿದೆ.

ಇದನ್ನೂ ಓದಿ: Ponniyin Selvan | ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೆ ಮಣಿರತ್ನಂ ಮಿಂಚು!

Exit mobile version