ಬೆಂಗಳೂರು: ಐತಿಹಾಸಿಕ ನಾಡಹಬ್ಬ ದಸರಾ ನಾಡಿನ ಕಲೆ ಮತ್ತು ಸಂಸ್ಕೃತಿಯ ವೈಭವಕ್ಕೆ ಹೆಸರುವಾಸಿಯಾಗಿದೆ. ಈ ಕಲೆ ಮತ್ತು ಸಂಸ್ಕೃತಿಯ ಪರಂಪರೆಯನ್ನು ಇನ್ನಷ್ಟು ಹೆಚ್ಚಿಸಲು ಯುವಕ ಸಂಘದ (Yuvaka Sangha) ವತಿಯಿಂದ ಅ.15ರಿಂದ 24ರವರೆಗೆ ಜಯನಗರದ ಯುವಪಥ ಸಭಾಂಗಣದಲ್ಲಿ ʼಯುವ ದಸರಾʼ ಆಯೋಜಿಸಲಾಗಿದೆ. ಹತ್ತು ದಿನಗಳು ನಡೆಯುವ ಯುವ ದಸರಾದಲ್ಲಿ ಪ್ರತಿ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಯುವ ದಸರಾದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು, ಸಂಜೆ ಘೋಷ್ಠಿಗಳು, ಬೊಂಬೆ ಕಾರ್ಯಾಗಾರ ಮತ್ತು ಪ್ರದರ್ಶನ, ದೇಸಿ ಆಟಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನಾ ದಿನವಾದ ಅ.15ರಂದು ಬೆಳಗ್ಗೆ 6ರಿಂದ 10ವರೆಗೆ ಹ್ಯಾಪಿ ಸ್ಟ್ರೀಟ್ ಹಾಗೂ ಸಂಜೆ 6ರಿಂದ 8ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹ್ಯಾಪಿ ಸ್ಟ್ರೀಟ್ ಭಾಗವಾಗಿ ಬೀದಿ ನಾಟಕ, ಸಾಂಪ್ರದಾಯಿಕ ಆಟಗಳು, ಗಾಯನ, ಮ್ಯೂಸಿಕ್ ಬ್ಯಾಂಡ್, ವಿವಿಧ ಆಹಾರ ಮಳಿಗೆಗಳು ಇರಲಿದ್ದು, ಇವು ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿವೆ. ಯುವ ದಸರಾ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ನೀಡಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಅ. 15 – ಕಥಕ್ ನೃತ್ಯ ಪ್ರದರ್ಶನ: ಖ್ಯಾತ ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್ ತಂಡದಿಂದ ಕಥಕ್ ನೃತ್ಯ
ಅ. 16 – ತಂಬೂರಿ ನೀಲಗಾರರ ಪದ: ಡಾ.ಮೈಸೂರು ಗುರುರಾಜ್ ಅವರಿಂದ ತಂಬೂರಿ ನೀಲಗಾರರ ಪದ
ಅ. 17 – ಜುಗಲ್ಬಂದಿ ಫ್ಯೂಶನ್ ಡಾನ್ಸ್: ನಿರ್ಮಿತಿ ಆರ್ಟ್ ಫೌಂಡೇಶನ್‌ನಿಂದ ಜುಗಲ್ಬಂದಿ ಫ್ಯೂಶನ್ ಡಾನ್ಸ್
ಅ. 18 – ಭಾರತೀಯ ಶಾಸ್ತ್ರೀಯ ಫ್ಯೂಶನ್: ರುದ್ರ ತಂಡದಿಂದ ಪ್ರದರ್ಶನ
ಅ.19 – ಭಕ್ತಿ ಗೀತೆಗಳು ಮತ್ತು ತಬಲಾ ತರಂಗ: ಶೋಭಾ ಎನ್.ಎಸ್ ತಂಡದಿಂದ ಭಕ್ತಿ ಗೀತೆಗಳ ಗಾಯನ ಮತ್ತು ಗುರು ಸಮರ್ಥ ಸಂಗೀತ ವಿದ್ಯಾಲಯ ತಂಡದಿಂದ ತಬಲಾ ವಾದನ
ಅ.20 – ಕರುನಾಡ ಕವಯಿತ್ರಿಯರು: ಶ್ರೀ ರುದ್ರಾಕ್ಷ ನಾಟ್ಯಾಲಯ ತಂಡದಿಂದ ಭರತನಾಟ್ಯ ಪ್ರದರ್ಶನ
ಅ. 21 – ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ಪಂಡಿತ್ ಕುಮಾರ್ ಮರ್ದೂರು ಅವರಿಂದ ಸಂಗೀತ ಕಛೇರಿ
ಅ. 22 – ಸುಗಮ ಸಂಗೀತ: ನಾದಚೈತನ್ಯ ಅವರಿಂದ ಸುಗಮ ಸಂಗೀತ
ಮಕ್ಕಳ ವಿಶೇಷ ಕಾರ್ಯಕ್ರಮ: ಬೆ.10-12 ಗಂಟೆವರೆಗೆ ಮಕ್ಕಳಿಂದ ನೃತ್ಯ ಪ್ರದರ್ಶನ ಮತ್ತು ತಾಯಿ-ಮಗಳಾದ ಸೋನಾಲಿಕಾ ಮತ್ತು ಶ್ರೀನಿಕಾ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ
ಅ.23 – ದೇವಿ ಭಜನೆ, ನಾಮಾವಳಿ: ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಸ್ವಾಮಿ ತದ್ಯುಕ್ತಾನಂದ ಮತ್ತು ತಂಡ
ಅ. 24 – ಸ್ನೇಹ ಮಿಲನ: ಯುವಕ ಸಂಘದ ಸ್ವಯಂ ಸೇವಕರು ಮತ್ತು ಹಿತೈಷಿಗಳ ಸ್ನೇಹ ಮಿಲನ
ವಿವಿಧ ಸ್ಪರ್ಧೆಗಳು
ಯುವ ದಸರಾ ಪ್ರಯುಕ್ತ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಏಕ ವ್ಯಕ್ತಿ ಸ್ಪರ್ಧೆ ಮತ್ತು ಗುಂಪು ಸ್ಪರ್ಧೆಗಳಿರಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಏಕ ವ್ಯಕ್ತಿ ಸ್ಪರ್ಧೆ ವಿಜೇತರಿಗೆ ಪ್ರಥಮ ಸ್ಥಾನ 5000 ರೂ., ದ್ವಿತೀಯ ಸ್ಥಾನ 3000 ರೂ., ತೃತೀಯ ಸ್ಥಾನ 2500 ರೂ. ನಗದು ಬಹುಮಾನ ಇರಲಿದೆ. ಅದೇ ರೀತಿ ಗುಂಪು ಸ್ಪರ್ಧೆಗಳ ವಿಜೇತರಿಗೆ ಪ್ರಥಮ ಸ್ಥಾನ 10,000 ರೂ., ದ್ವಿತೀಯ ಸ್ಥಾನ 8,000 ರೂ., ತೃತೀಯ ಸ್ಥಾನ 7,000 ರೂ. ಇರಲಿದೆ. ಇವುಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಇದನ್ನೂ ಓದಿ | Raja Marga Column : ಪರಿಸರ ಹೋರಾಟ; ಇದು ಕಾರಂತರ ಹುಚ್ಚುಮನಸ್ಸಿನ ಅತಿ ಶ್ರೇಷ್ಠ ಮುಖ!
ಏಕವ್ಯಕ್ತಿ, ಗುಂಪು ಸ್ಪರ್ಧೆ
ಅ. 16 – ಕಥಾ ವಾಚನ ಸ್ಪರ್ಧೆ, ಪ್ರಬಂಧ ಸ್ಪರ್ಧೆ
ಅ. 17 – ಭಾರತೀಯ ಶಾಸ್ತ್ರೀಯ ನೃತ್ಯ (ಏಕವ್ಯಕ್ತಿ ಮತ್ತು ಗುಂಪು ಸ್ಪರ್ಧೆ), ಅರೆ ಶಾಸ್ತ್ರೀಯ ನೃತ್ಯ
ಅ. 18 – ಭಾರತೀಯ ಶಾಸ್ತ್ರೀಯ ವಾದ್ಯ ಸ್ಪರ್ಧೆ (ತಾಳವಾದ್ಯ ಮತ್ತು ತಾಳವಾದ್ಯವಲ್ಲದ)
ಅ. 19 – ಸ್ಕಿಟ್, ಏಕಪಾತ್ರಾಭಿನಮಯ, ಕವನ ವಾಚನ
ಅ. 20 – ಗಾಯನ (ಗುಂಪು ಸ್ಪರ್ಧೆ)
ಅ.21 – ಶಾಸ್ತ್ರೀಯ ಗಾಯನ, ಅರೆ ಶಾಸ್ತ್ರೀಯ ಗಾಯನ (ಏಕ ವ್ಯಕ್ತ)
ಈ ಮೇಲಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಯುವ ದಸರಾ ವೆಬ್‌ಸೈಟ್ (bit.ly/yuvadasara) ನಲ್ಲಿ ಹೆಸರು ನೋಂದಣಿ ಮಾಡಿಸಬೇಕು. ಏಕ ವ್ಯಕ್ತಿ ಸ್ಪರ್ಧೆಗೆ ಪ್ರವೇಶ ಶುಲ್ಕ ಇಬ್ಬರಿಗೆ 100 ರೂ., ಗುಂಪು ಸ್ಪರ್ಧೆಗೆ 250 ರೂ. ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ 7411049296, 6360902574 ಗೆ ಸಂಪರ್ಕಿಸಿ.