ಬೆಂಗಳೂರು: ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ (ಎಫ್‌ಪಿಪಿಸಿಎ) ಹೆಸರಿನಲ್ಲಿ ಬೆಸ್ಕಾಂ ಮತ್ತೆ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ ಎಫ್‌ಪಿಪಿಸಿಎ ಶುಲ್ಕವನ್ನು ಪ್ರತಿ ಯೂನಿಟ್ 50 ಪೈಸೆ ಬದಲಿಗೆ 1.15 ರೂ.ಗೆ ಹೆಚ್ಚಳ ಮಾಡಿ (Power Price Hike) ಬೆಸ್ಕಾಂ ಆದೇಶ ಹೊರಡಿಸಿದೆ.
ಸದ್ಯ ‘ಗೃಹಜ್ಯೋತಿ’ ಯೋಜನೆ ಜಾರಿಯಿಂದಾಗಿ ಫಲಾನುಭವಿಗಳಿಗೆ ಈ ಶುಲ್ಕ ಹೆಚ್ಚಳದ ಹೊರೆ ಇಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಹೀಗಾಗಿ ಗೃಹಜ್ಯೋತಿ ಫಲಾನುಭವಿಗಳಲ್ಲದ ಬಳಕೆದಾರರು ಹಾಗೂ ವಾಣಿಜ್ಯ ಬಳಕೆದಾರರಿಗೆ ಹೊರೆ ಆಗಲಿದೆ.
ಕೆಇಆರ್‌ಸಿಯ ಆದೇಶದಂತೆ 2023ರ ಜನವರಿಯಿಂದ ಮಾ.31ರವರೆಗಿನ ವಿದ್ಯುತ್ ಖರೀದಿ ವೆಚ್ಚದಲ್ಲಿನ ವ್ಯತ್ಯಾಸ ಸರಿದೂಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬೆಸ್ಕಾಂ ಗ್ರಾಹಕರು ವಿದ್ಯುತ್ ಶುಲ್ಕದ ಜತೆಗೆ 51 ಪೈಸೆ ಮಾತ್ರ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಇದೀಗ ಬೆಸ್ಕಾಂ ಕಂಪೆನಿಯು ತಿಂಗಳವಾರು ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಣೆ ಮಾಡಿದೆ.
ಇದನ್ನೂ ಓದಿ | Karnataka Politics: ನಿಗಮ-ಮಂಡಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿ; ಕೆಪಿಸಿಸಿ ಪ್ರಚಾರ ಸಮಿತಿ ಪದಾಧಿಕಾರಿಗಳ ಆಗ್ರಹ
ಇನ್ನು ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ 27 ಪೈಸೆ, ಜೂನ್ ತಿಂಗಳಲ್ಲಿ 9 ಪೈಸೆ ಹಾಗೂ ಜುಲೈ ತಿಂಗಳಲ್ಲಿ 28 ಪೈಸೆ ಸೇರಿ 64 ಪೈಸೆಯಷ್ಟು ಹೆಚ್ಚು ವಿದ್ಯುತ್ ಖರೀದಿ ವೆಚ್ಚ ತಗುಲಿರುವುದಾಗಿ ಬೆಸ್ಕಾಂ ಮಾಹಿತಿ ನೀಡಿದೆ.