Site icon Vistara News

Bhagavad Gita | ರಾಜ್ಯದಲ್ಲಿ ಗುಜರಾತ್‌ ಮಾದರಿ ಪಠ್ಯದಲ್ಲಿ ಭಗವದ್ಗೀತೆ; ಅಳವಡಿಕೆ ಪ್ರಕ್ರಿಯೆ ಚುರುಕು?

Bhagavadgeetha

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಗುಜರಾತ್ ಮಾದರಿಯಲ್ಲಿ ಭಗವದ್ಗೀತೆ (Bhagavad Gita) ಪಠ್ಯ ಕ್ರಮ ಜಾರಿ ಮಾಡಲು ತೆರೆಮರೆಯಲ್ಲಿ ಮತ್ತೆ ಕಸರತ್ತು ನಡೆದಿದೆ. ಪ್ರಸಕ್ತ ವರ್ಷದಲ್ಲಿಯೇ ಜಾರಿ ಮಾಡಲು ಚಿಂತನೆ ಮಾಡಲಾಗಿದೆ ಎನ್ನಲಾಗಿದೆ.

ಸರ್ಕಾರದ ಹಂತದಲ್ಲಿ ರಚನೆಯಾಗಿರುವ ಸಮಿತಿಯಿಂದ ಪಠ್ಯ ನಿರ್ಧಾರವನ್ನು ಮಾಡಲಾಗುತ್ತಿದೆ. ಇದೇ ವರ್ಷದಲ್ಲಿ ನೈತಿಕ ಮೌಲ್ಯದ ಪಾಠಗಳನ್ನು ಪರಿಚಯಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಬೋಧನೆಗೆ ತಯಾರಿ ಶುರುವಾಗಿದೆ. ಇದರ ಜತೆಗೆ ರಾಮಾಯಣ, ಮಾಹಭಾರತ ಬೋಧನೆಗೂ ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.

ಈ ಮಾಸಾಂತ್ಯಕ್ಕೆ ಗೀತೆಬೋಧನೆ ಸಿದ್ಧತೆ ಪೂರ್ಣ?

ಆಗಸ್ಟ್‌ ಮಾಸಾಂತ್ಯದ ವೇಳೆ ನೈತಿಕ ಪಾಠದ ಅಡಿಯಲ್ಲಿ ಗೀತೆ ಬೋಧಿಸಲು ಸಂಪೂರ್ಣ ತಯಾರಿ ಮಾಡಿಕೊಳ್ಳಲಾಗಿದ್ದು, ಪಠ್ಯ ಪುರಿಷ್ಕರಣೆಯ ಗೊಂದಲ ಬಗೆಹರಿಯುತ್ತಿದ್ದಂತೆ ಭಗವದ್ಗೀತೆಯನ್ನು ತರಗತಿಯಲ್ಲಿ ಪರಿಚಯಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಏನಿದು ಗುಜರಾತ್‌ ಮಾದರಿ?

ಗುಜರಾತ್‌ನಲ್ಲಿ 6 ರಿಂದ 12 ನೇ ತರಗತಿಯವರೆಗೆ ಭಗವದ್ಗೀತೆಯ ಪಠ್ಯವನ್ನು ಅಲ್ಲಿನ ಸರ್ಕಾರ ಪರಿಚಯಿಸಿದೆ. ಈ ಮೂಲಕ ಮಕ್ಕಳಿಗೆ ನೈತಿಕ ಪಾಠವನ್ನು ಮಾಡುತ್ತಿದೆ.

ರಾಜ್ಯದಲ್ಲಿ ಪರ-ವಿರೋಧ

ರಾಜ್ಯದಲ್ಲಿ ಕಳೆದ ಮಾರ್ಚ್‌ನಲ್ಲಿ ಶಿಕ್ಷಣ ಸಚಿವ ನಾಗೇಶ್‌ ಅವರು, ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತು ಹೇಳಿಕೆ ನೀಡುತ್ತಿದ್ದಂತೆ ರಾಜ್ಯಾದ್ಯಂತ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಕೊನೆಗೆ ಪಠ್ಯ ಪುಸ್ತಕ ಪರಿಷ್ಕರಣ ವಿಷಯವಾಗಿ ರಾಜ್ಯದೆಲ್ಲೆಡೆ ಗಂಭೀರ ಚರ್ಚೆ ನಡೆದ ಹಿನ್ನೆಲೆಯಲ್ಲಿ ಈ ವಿಷಯವು ನನೆಗುದಿಗೆ ಬಿದ್ದಿತ್ತು. ಆದರೆ, ಈಗ ಪುನಃ ಭಗವದ್ಗೀತೆ ಅಳವಡಿಕೆಗೆ ತಯಾರಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | ಭಗವದ್ಗೀತೆ ಪಠಣ ಶಾಲಾ ಶಿಕ್ಷಣ ಸಂಸ್ಕೃತಮಯ ಮಾಡುವ ಷಡ್ಯಂತ್ರ: ಚಿಂತಕರ ಹೇಳಿಕೆ

Exit mobile version