ಚಾಮರಾಜನಗರ: ಭಾರತ್ ಜೋಡೋ ಎರಡನೇ ದಿನದ ಪಾದಯಾತ್ರೆಗೆ ಮಳೆರಾಯ ತುಸು ಅಡ್ಡಿ ಮಾಡಿದ್ದು, ವಿಳಂಬವಾಗಿ ಆರಂಭಗೊಂಡಿದೆ.
ಗುಂಡ್ಲುಪೇಟೆ ತಾಲೂಕು ಬೇಗೂರಿನ ತೊಂಡರವಾಡಿ ಗೇಟ್ ಬಳಿ ಆರಂಭವಾಗಬೇಕಿದ್ದ ಪಾದಯಾತ್ರೆ ಮಳೆಯ ಕಾರಣದಿಂದ ತಡವಾಗಿ ಆರಂಭವಾಯಿತು. ಬೆಳಗ್ಗೆ 6.30ಕ್ಕೆ ಹೊರಡಬೇಕಿದ್ದ ಯಾತ್ರೆ 7.45ಕ್ಕೆ ಆರಂಭವಾಯಿತು. ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ ಪಾಟೀಲ್ ಸೇರಿದಂತೆ ಅನೇಕ ಕೈ ನಾಯಕರು ಭಾಗಿಯಾಗಿದ್ದಾರೆ. ಪ್ರತಿದಿನ 18- 20 ಕಿಲೋಮೀಟರ್ ಪಾದಯಾತ್ರೆ ನಿಗದಿಯಾಗಿದೆ. ಪ್ರತಿ ಹೋಬಳಿ, ಕ್ಷೇತ್ರದಲ್ಲಿ ಆಯಾ ಕ್ಷೇತ್ರಗಳ ಹಾಗೂ ಸುತ್ತಮುತ್ತಲಿನ ಕಾಂಗ್ರೆಸ್ ನಾಯಕರು, ಶಾಸಕರು ಪಾಲ್ಗೊಳ್ಳಲು ನಿಗದಿಯಾಗಿದೆ. ಯಾತ್ರೆಯ ಮೊದಲ ದಿನ ರಾಹುಲ್ ಗಾಂಧಿ ನಡಿಗೆಗೆ ಉತ್ತಮ ಸ್ಪಂದನೆ ದೊರೆತಿತ್ತು.
ಇದನ್ನೂ ಓದಿ | ಭಾರತ್ ಜೋಡೋ | ಐಕ್ಯತಾ ಯಾತ್ರೆಗೆ ಪ್ರತಿಯಾಗಿ ಬಿಜೆಪಿ ಜಾಹಿರಾತು ವಾರ್