Site icon Vistara News

LK Advani: ಅಡ್ವಾಣಿಗೆ ಭಾರತ ರತ್ನ; ಕೇಂದ್ರದ ನಿರ್ಧಾರ ಶ್ಲಾಘನೀಯ: ಟಿ.ಎ. ಶರವಣ ಅಭಿನಂದನೆ

LK Advani and TA Sharavana

ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (LK Advani) ಅವರಿಗೆ ‘ಭಾರತ ರತ್ನ’ (Bharat Ratna) ಪ್ರಶಸ್ತಿ ಘೋಷಿಸಿದ ಕೇಂದ್ರ ಬಿಜೆಪಿ ಸರ್ಕಾರದ ಕ್ರಮಕ್ಕೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ ಅಭಿನಂದಿಸಿದ್ದಾರೆ.

ರಾಷ್ಟ್ರ ರಾಜಕಾರಣದ ಭೀಷ್ಮ ಎಂದೇ ಜನಪ್ರಿಯರಾದ ಮಾಜಿ ಉಪ ಪ್ರಧಾನಿ, ಅಪ್ರತಿಮ ಹೋರಾಟಗಾರ, ಹಿರಿಯ ಮುತ್ಸದ್ದಿ ರಾಜಕಾರಣಿ, ಸಂಘಟಕ, ಎಲ್.ಕೆ. ಅಡ್ವಾಣಿ ಅವರಿಗೆ ಭಾರತರತ್ನ ನೀಡುವ ಕೇಂದ್ರ ಸರ್ಕಾರದ ನಿರ್ಣಯ ಅತ್ಯಂತ ಶ್ಲಾಘನೀಯ. ಈ ಮೂಲಕ ಅಡ್ವಾಣಿ ಅವರ ದೇಶಸೇವೆಗೆ ಸೂಕ್ತವಾದ ಗೌರವ ದೊರೆತಿದೆ. ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಟಿ.ಎ. ಶರವಣ ತಿಳಿಸಿದ್ದಾರೆ.

ಎಲ್‌.ಕೆ. ಅಡ್ವಾಣಿ ಸೇರಿ 1954ರಿಂದ 2024ರವರೆಗಿನ ಭಾರತ ರತ್ನ ಪುರಸ್ಕೃತರ ಪಟ್ಟಿ ಇಲ್ಲಿದೆ

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (Lal Krishan Advani) ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಫೆಬ್ರವರಿ 3ರಂದು) ಬೆಳಗ್ಗೆ ಘೋಷಿಸಿದ್ದಾರೆ. ಇತ್ತೀಚೆಗೆ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ (Bharat Ratna) ಘೋಷಿಸಲಾಗಿತ್ತು.

“ಎಲ್.ಕೆ. ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಮೋದಿ ಇಂದು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದ್ದಾರೆ.

ದಿವಂಗತ ನಾಯಕ ಕರ್ಪೂರಿ ಠಾಕೂರ್ ಜನಪ್ರಿಯ ನಾಯಕರಾಗಿದ್ದರು. ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಜನ ನಾಯಕ್ ಎಂದು ಕರೆಯಲಾಗುತ್ತಿತ್ತು. ಡಿಸೆಂಬರ್ 1970ರಿಂದ ಜೂನ್ 1971 ರವರೆಗೆ (ಸಮಾಜವಾದಿ ಪಕ್ಷ / ಭಾರತೀಯ ಕ್ರಾಂತಿ ದಳ) ಮತ್ತು ಡಿಸೆಂಬರ್ 1977ರಿಂದ ಏಪ್ರಿಲ್ 1979 (ಜನತಾ ಪಕ್ಷ) ಬಿಹಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ. ಅಡ್ವಾಣಿ ಸೇರಿಕೊಂಡು ಇದುವರೆಗೆ 50 ಗಣ್ಯರಿಗೆ ಈ ಪ್ರತಿಷ್ಠಿತ ಗೌರವ ನೀಡಲಾಗಿದೆ. ಅವರೆಲ್ಲರ ವಿವರ ಇಲ್ಲಿದೆ.

ವರ್ಷಭಾರತ ರತ್ನ ಪಡೆದವರು
2024ಕರ್ಪೂರಿ ಠಾಕೂರ್ (ರಾಜಕಾರಣಿ) – ಬಿಹಾರ, ಎಲ್‌.ಕೆ.ಅಡ್ವಾಣಿ (ರಾಜಕಾರಣಿ)
2019ನಾನಾಜಿ ದೇಶ್​ಮುಖ್ (ಸಾಮಾಜಿಕ ಕಾರ್ಯಕರ್ತ) – ಮಹಾರಾಷ್ಟ್ರ
ಭೂಪೇನ್ ಹಜಾರಿಕಾ (ಹಿನ್ನೆಲೆ ಗಾಯಕ, ಗೀತರಚನೆಕಾರ, ಸಂಗೀತಗಾರ, ಕವಿ ಮತ್ತು ಚಲನಚಿತ್ರ ನಿರ್ಮಾಪಕ) – ಅಸ್ಸಾಂ
ಪ್ರಣಬ್ ಮುಖರ್ಜಿ (ರಾಜಕಾರಣಿ) – ಪಶ್ಚಿಮ ಬಂಗಾಳ
2015ಅಟಲ್ ಬಿಹಾರಿ ವಾಜಪೇಯಿ (ರಾಜಕಾರಣಿ) – ಮಧ್ಯಪ್ರದೇಶ
ಮದನ್ ಮೋಹನ್ ಮಾಳವೀಯ (ವಿದ್ವಾಂಸ ಮತ್ತು ಶೈಕ್ಷಣಿಕ ಸುಧಾರಕ) – ಉತ್ತರ ಪ್ರದೇಶ
2014ಸಚಿನ್ ತೆಂಡೂಲ್ಕರ್ (ಕ್ರಿಕೆಟಿಗ) – ಮಹಾರಾಷ್ಟ್ರ
ಸಿಎನ್ಆರ್ ರಾವ್ (ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ) – ಕರ್ನಾಟಕ
2009ಭೀಮಸೇನ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ) – ಕರ್ನಾಟಕ
2001ಬಿಸ್ಮಿಲ್ಲಾ ಖಾನ್ (ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ) – ಉತ್ತರ ಪ್ರದೇಶ
ಲತಾ ಮಂಗೇಶ್ಕರ್ (ಹಿನ್ನೆಲೆ ಗಾಯಕಿ) – ಮಹಾರಾಷ್ಟ್ರ
1999ಪಂಡಿತ್​ ರವಿಶಂಕರ್ (ಸಿತಾರ್ ವಾದಕ) – ಉತ್ತರ ಪ್ರದೇಶ
ಗೋಪಿನಾಥ್ ಬೊರ್ಡೊಲೋಯ್ (ಸ್ವಾತಂತ್ರ್ಯ ಹೋರಾಟಗಾರ) – ಅಸ್ಸಾಂ
ಅಮರ್ತ್ಯ ಸೇನ್ (ಅರ್ಥಶಾಸ್ತ್ರಜ್ಞ) – ಪಶ್ಚಿಮ ಬಂಗಾಳ
ಜಯಪ್ರಕಾಶ್ ನಾರಾಯಣ್ (ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ) – ಬಿಹಾರ
1998ಚಿದಂಬರಂ ಸುಬ್ರಮಣ್ಯಂ (ಸ್ವಾತಂತ್ರ್ಯ ಹೋರಾಟಗಾರ) – ತಮಿಳುನಾಡು
ಎಂ.ಎಸ್.ಸುಬ್ಬುಲಕ್ಷ್ಮಿ (ಕರ್ನಾಟಕ ಶಾಸ್ತ್ರೀಯ ಗಾಯಕಿ) – ತಮಿಳುನಾಡು
1997ಎಪಿಜೆ ಅಬ್ದುಲ್ ಕಲಾಂ (ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಜ್ಱನಿ) – ತಮಿಳುನಾಡು
ಅರುಣಾ ಅಸಫ್ ಅಲಿ (ಸ್ವಾತಂತ್ರ್ಯ ಹೋರಾಟಗಾರ್ತಿ) – ಪಶ್ಚಿಮ ಬಂಗಾಳ
ಗುಲ್ಜಾರಿಲಾಲ್ ನಂದಾ (ಸ್ವಾತಂತ್ರ್ಯ ಹೋರಾಟಗಾರ) – ಪಂಜಾಬ್
1992ಸತ್ಯಜಿತ್ ರೇ (ಚಲನಚಿತ್ರ ನಿರ್ಮಾಪಕ) – ಪಶ್ಚಿಮ ಬಂಗಾಳ
ಜೆಆರ್ಡಿ ಟಾಟಾ (ಕೈಗಾರಿಕೋದ್ಯಮಿ) – ಮಹಾರಾಷ್ಟ್ರ
1991ಮೊರಾರ್ಜಿ ದೇಸಾಯಿ (ಸ್ವಾತಂತ್ರ್ಯ ಹೋರಾಟಗಾರ) – ಗುಜರಾತ್
ಸರ್ದಾರ್​​ ವಲ್ಲಭಭಾಯಿ ಪಟೇಲ್ (ಸ್ವಾತಂತ್ರ್ಯ ಹೋರಾಟಗಾರ) – ಗುಜರಾತ್
ರಾಜೀವ್ ಗಾಂಧಿ (ರಾಜಕಾರಣಿ) – ಉತ್ತರ ಪ್ರದೇಶ
1990ನೆಲ್ಸನ್ ಮಂಡೇಲಾ (ವರ್ಣಭೇದ ನೀತಿ ವಿರೋಧಿ ಹೋರಾಟಗಾರ) – ದಕ್ಷಿಣ ಆಫ್ರಿಕಾ
ಡಾ. ಬಿ.ಆರ್.ಅಂಬೇಡ್ಕರ್ (ಸಮಾಜ ಸುಧಾರಕ) – ಮಹಾರಾಷ್ಟ್ರ
1988ಎಂ.ಜಿ.ರಾಮಚಂದ್ರನ್ (ನಟ-ರಾಜಕಾರಣಿ) – ತಮಿಳುನಾಡು
1987ಖಾನ್ ಅಬ್ದುಲ್ ಗಫಾರ್ ಖಾನ್ (ಸ್ವಾತಂತ್ರ್ಯ ಹೋರಾಟಗಾರ) – ಪಾಕಿಸ್ತಾನ
1983ವಿನೋಬಾ ಭಾವೆ (ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ) – ಮಹಾರಾಷ್ಟ್ರ
1980ಮದರ್ ತೆರೇಸಾ (ಕ್ಯಾಥೊಲಿಕ್ ಸನ್ಯಾಸಿನಿ) – ಪಶ್ಚಿಮ ಬಂಗಾಳ
1976ಕೆ ಕಾಮರಾಜ್ (ರಾಜಕಾರಣಿ) – ತಮಿಳುನಾಡು
1975ವಿ.ವಿ.ಗಿರಿ (ಸ್ವಾತಂತ್ರ್ಯ ಹೋರಾಟಗಾರ) – ಒಡಿಶಾ
1971ಇಂದಿರಾ ಗಾಂಧಿ (ರಾಜಕಾರಣಿ) – ಉತ್ತರ ಪ್ರದೇಶ
1966ಲಾಲ್ ಬಹದ್ದೂರ್ ಶಾಸ್ತ್ರಿ (ಸ್ವಾತಂತ್ರ್ಯ ಹೋರಾಟಗಾರ) – ಉತ್ತರ ಪ್ರದೇಶ
1963ಪಾಂಡುರಂಗ ವಾಮನ್ ಕಾನೆ (ಇಂಡಾಲಜಿಸ್ಟ್ ಮತ್ತು ಸಂಸ್ಕೃತ ವಿದ್ವಾಂಸ) – ಮಹಾರಾಷ್ಟ್ರ
ಜಾಕಿರ್ ಹುಸೇನ್ (ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣ ತತ್ವಜ್ಞಾನಿ) – ಆಂಧ್ರಪ್ರದೇಶ
1962ರಾಜೇಂದ್ರ ಪ್ರಸಾದ್ (ಸ್ವಾತಂತ್ರ್ಯ ಹೋರಾಟಗಾರ, ವಕೀಲ, ರಾಜನೀತಿಜ್ಞ ಮತ್ತು ವಿದ್ವಾಂಸ) – ಬಿಹಾರ
1961ಪುರುಷೋತ್ತಮ್ ದಾಸ್ ಟಂಡನ್ (ಸ್ವಾತಂತ್ರ್ಯ ಹೋರಾಟಗಾರ) – ಉತ್ತರ ಪ್ರದೇಶ
ಬಿಧಾನ್ ಚಂದ್ರ ರಾಯ್ (ವೈದ್ಯ, ರಾಜಕೀಯ ನಾಯಕ, ಲೋಕೋಪಕಾರಿ, ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ) – ಪಶ್ಚಿಮ ಬಂಗಾಳ
1958ಧೋಂಡೋ ಕೇಶವ್ ಕರ್ವೆ (ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ) – ಮಹಾರಾಷ್ಟ್ರ
1957ಗೋವಿಂದ್ ವಲ್ಲಭ್ ಪಂತ್ (ಸ್ವಾತಂತ್ರ್ಯ ಹೋರಾಟಗಾರ) – ಉತ್ತರಾಖಂಡ್
1955ಜವಾಹರಲಾಲ್ ನೆಹರು (ಸ್ವಾತಂತ್ರ್ಯ ಹೋರಾಟಗಾರ ಮತ್ತು ಲೇಖಕ) – ಉತ್ತರ ಪ್ರದೇಶ
ಎಂ.ವಿಶ್ವೇಶ್ವರಯ್ಯ (ಸಿವಿಲ್ ಎಂಜಿನಿಯರ್, ರಾಜನೀತಿಜ್ಞ ಮತ್ತು ಮೈಸೂರಿನ ದಿವಾನ) – ಕರ್ನಾಟಕ
ಭಗವಾನ್ ದಾಸ್ (ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಶಿಕ್ಷಣ ತಜ್ಞ) – ಉತ್ತರ ಪ್ರದೇಶ
1954ಸಿ.ವಿ.ರಾಮನ್ (ಭೌತಶಾಸ್ತ್ರಜ್ಞ) – ತಮಿಳುನಾಡು
ಸರ್ವಪಲ್ಲಿ ರಾಧಾಕೃಷ್ಣನ್ (ತತ್ವಜ್ಞಾನಿ ಮತ್ತು ರಾಜಕಾರಣಿ) – ತಮಿಳುನಾಡು
ಸಿ ರಾಜಗೋಪಾಲಾಚಾರಿ (ರಾಜಕಾರಣಿ, ಬರಹಗಾರ, ವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ) – ತಮಿಳುನಾಡು

ಇದನ್ನೂ ಓದಿ: LK Advani : ಎಲ್.ಕೆ. ಆಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

Exit mobile version