Site icon Vistara News

Bharat jodo | ಬಳ್ಳಾರಿಯ ಜೀನ್ಸ್‌ ಉದ್ಯಮದ ನೋವು ನಲಿವು ಕೇಳಿಸಿಕೊಂಡ ರಾಹುಲ್‌ ಗಾಂಧಿ, ಸಿಕ್ಕಿತು ಕೆಲವು ಗಿಫ್ಟ್‌!

Rahul jeans

ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಇಂದು ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಜೀನ್ಸ್ ಉದ್ಯಮಗಳಿಬ್ಬರ ತಯಾರಿಕ ಘಟಕಗಳಿಗೆ ಭೇಟಿ ನೀಡಿ, ಜೀನ್ಸ್ ಉದ್ಯಮದ ಸಾಧಕ ಬಾಧಕ ಕುರಿತು ಚರ್ಚಿಸಿದರು.

ಭಾರತ್‌ ಜೋಡೋ ಯಾತ್ರೆಯ ನೇತೃತ್ವ ವಹಿಸಿ ಸಾಗುತ್ತಿರುವ ರಾಹುಲ್‌ ಗಾಂಧಿ ಅವರು ಸೋಮವಾರ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಡುವು ನೀಡಿದ್ದರು. ಹೀಗಾಗಿ ಅವರು ಸಂಗನಕಲ್ಲು ಕ್ಯಾಂಪ್‌ನಲ್ಲೇ ಇದ್ದರು. ಸಂಗನಕಲ್ಲು ಕ್ಯಾಂಪ್‌ನಿಂದ ಕೌಲ್ ಬಜಾರ್ ಜೀನ್ಸ್ ಘಟಕಕ್ಕೆ ಭೇಟಿ ಅವರು ನೀಡಿದರು. ವಿನೋದ್, ಜಾವೇದ್ ಸೇರಿದಂತೆ ಮೂರು ಜೀನ್ಸ್ ಘಟಕಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಭಾನುವಾರ ಮೋಕಾದಲ್ಲಿ ಜೀನ್ಸ್ ಉದ್ಯಮಿಗಳೊಂದಿಗೆ ಮಾತನಾಡಿದ ಬೆನ್ನಲ್ಲೇ ಮರುದಿನ ಭೇಟಿ ನೀಡಿದರು.

ಜೀನ್ಸ್ ಪ್ಯಾಂಟ್ ತಯಾರಿಕೆ, ಉದ್ಯಮದಲ್ಲಿನ ನೋವು ನಲಿವುಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಎ.ಕೆ ಜೀನ್ಸ್ ಘಟಕಕ್ಕೂ ತೆರಳಿ ಅಲ್ಲಿದ್ದ ಕಾರ್ಮಿಕರು, ಹೊಲಿಗೆ ಯಂತ್ರಗಳು, ಕಟ್ಟಿಂಗ್‌ ಮಾಸ್ಟರ್ ಗಳ ಜೊತೆ ಸಮಾಲೋಚನೆ ನಡೆಸಿದರು.

ರಾಹುಲ್‌ ಗಾಂಧಿ ಅವರು ಸೋಮವಾರ ಬಳ್ಳಾರಿಯ ಜೀನ್ಸ್‌ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಕೌಲ್ ಬಜಾರ್‌ಗೆ ರಾಹುಲ್ ಗಾಂಧಿ ಅವರು ಭೇಟಿ ನೀಡುವ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಜನತೆ ಭೇಟಿಯಾಗಲು ಬಂದಿದ್ದರು. ಯುವಕರು ರಾಹುಲ್ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇನ್ನು ಕೆಲವರು ಉಡುಗೊರೆ ನೀಡಿ ಫೋಟೊ ತೆಗೆಸಿಕೊಂಡರು. ಜೊತೆಗೆ ಗ್ರಾಮೀಣ ಶಾಸಕ‌. ಬಿ.ನಾಗೇಂದ್ರ, ಕಾಂಗ್ರೆಸ್ ಜಗನ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ | Bharath jodo | ಗೊರವರ ಕುಣಿತಕ್ಕೆ ಮನಸೋತು ಹೆಜ್ಜೆ ಹಾಕಿದ ಸಿದ್ದರಾಮಯ್ಯ, ನೋಡಲು ನೂಕುನುಗ್ಗಲು

Exit mobile version