ಮೊಳಕಾಲ್ಮುರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಎಲ್ಲೇ ಹೋದರೂ ಜನ ಮುತ್ತಿಗೆ ಹಾಕುವುದು ಸಾಮಾನ್ಯ. ಅದಕ್ಕೆ ಕಾರಣ ಅವರ ಜನಪ್ರಿಯತೆ ಮಾತ್ರವಲ್ಲ ಅಪ್ಪಟ ಗ್ರಾಮೀಣ ಸೊಗಡು ಕೂಡಾ ಕಾರಣ.
ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿರುವ ಸಿದ್ದರಾಮಯ್ಯ ಅವರು ಕೂಡಾ ಸ್ಟಾರ್ ಆಕರ್ಷಣೆಯಾಗಿದ್ದಾರೆ. ಮೊಳಕಾಲ್ಮುರುವಿನಲ್ಲಿ ಅವರನ್ನು ನೋಡಲು ಜನರ ನೂಕುನುಗ್ಗಲೇ ಉಂಟಾಗಿತ್ತು. ಅವರ ಕಾರು ಸಾಗುವಾಗ ವಸ್ತುಶಃ ಜನರ ಅಡ್ಡ ನಿಂತೇ ಬಿಟ್ಟಿದ್ದರು. ಬಳಿಕ ಬ್ಯಾರಿಕೇಡ್‌ನಿಂದ ಅವರನ್ನು ನಿಯಂತ್ರಿಸಬೇಕಾಯಿತು.
ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ಉಳಿದುಕೊಂಡದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿರುವ ಪಕ್ಷದ ಮುಖಂಡ ಕುಮಾರ ಗೌಡ ಅವರ ನಿವಾಸದಲ್ಲಿ.
ಸಿದ್ದರಾಮಯ್ಯ ಅವರು ಭೇಟಿ ನೀಡಿದಾಗ ಗೊರವರ ನೃತ್ಯದ ಮೂಲಕ ಸ್ಥಳೀಯರು ಸ್ವಾಗತ ಕೋರಿದರು. ನೃತ್ಯಕ್ಕೆ ಮನಸೋತ ಸಿದ್ದರಾಮಯ್ಯ ಅವರು ತಾವೂ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಪಾದಯಾತ್ರೆ ಮಾಡಿ ಸುಸ್ತಾಗಿದ್ದರೂ ಅದ್ಯಾವುದನ್ನೂ ತೋರ್ಪಡಿಸಿಕೊಳ್ಳದೆ ಅವರು ಹೆಜ್ಜೆ ಹಾಕಿದರು.
ಇದನ್ನೂ ಓದಿ | Bharath jodo | ಕನ್ನಡ ಪರೀಕ್ಷೆ ವಿಷಯ ಪ್ರಸ್ತಾಪಿಸಿದ ರಾಹುಲ್, ಸಚಿವ ಶ್ರೀ ರಾಮುಲು ಕ್ಷೇತ್ರದಲ್ಲಿ ಕಮಾಲ್