Site icon Vistara News

Bhatkala News : ಸಮುದ್ರದ ಬಂಡೆ ಮಧ್ಯೆ ಸಿಲುಕಿಕೊಂಡು 24 ಗಂಟೆ ಪರದಾಡಿದ ಯುವಕ ಕೊನೆಗೂ ರಕ್ಷಣೆ!

#image_title

ಭಟ್ಕಳ: ಸ್ನೇಹಿತನೊಂದಿಗೆ ಬೀಚ್‌ನಲ್ಲಿ ಆಟವಾಡಿ, ಸಮಯ ಕಳೆಯಲು ಹೋದವನು ಅಲ್ಲಿ ಬಂಡೆಯೊಳಗೆ ಸಿಲುಕಿಕೊಂಡು ಒಂದು ದಿನ ಪರದಾಡಿರುವ ಘಟನೆ ಭಟ್ಕಳದಲ್ಲಿ (Bhatkala News) ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ರಕ್ಷಿಸಿದ್ದಾರೆ.

ಭಟ್ಕಳದ ಹಳೆ ಬಸ್‌ ನಿಲ್ದಾಣದ ಬಳಿಯ ನಿವಾಸಿಯಾಗಿರುವ ಸಮೀರ್‌ ಸುಲೇಮಾನ್‌ ಅಬು ಶುಕ್ರವಾರದಂದು ತನ್ನ ಸ್ನೇಹಿತನೊಂದಿಗೆ ಭಟ್ಕಳದ ಹಡೀನ್‌ನಲ್ಲಿರುವ ಹುಯ್ಲಮೂಡಿ ಇಕೋ ಪಾರ್ಕ್‌ಗೆ ತೆರಳಿದ್ದಾನೆ. ಇಬ್ಬರು ಸ್ನೇಹಿತರು ಆಟೋದಲ್ಲಿ ಅಲ್ಲಿಗೆ ತೆರಳಿದ್ದು, ಅಲ್ಲಿ ಕೆಲ ಕಾಲ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಆಗ ಸಮೀರ್‌ ಅಲ್ಲೇ ಇದ್ದ ಗುಡ್ಡದ ರೀತಿಯ ಕಲ್ಲು ಬಂಡೆಗಳ ಮಧ್ಯೆ ತೆರಳಿದ್ದಾನೆ. ಅಲ್ಲಿಗೆ ಹೋದ ಆತ ಎಷ್ಟು ಸಮಯವಾದರೂ ವಾಪಸು ಮರಳಲೇ ಇಲ್ಲ.

ಇದನ್ನೂ ಓದಿ: Karnataka Elections : ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಮಂಕಾಳು ವೈದ್ಯ ತೇಜೋವಧೆಗೆ ಯತ್ನ: ಇಬ್ಬರ ಮೇಲೆ ಕೇಸು
ಎಷ್ಟು ಹೊತ್ತಾದರೂ ಸ್ನೇಹಿತ ಮರಳಿಲ್ಲ ಎನ್ನುವ ಭಯದಿಂದ ಸಮೀರ್‌ನೊಂದಿಗೆ ಬಂದಿದ್ದ ಸ್ನೇಹಿತ ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸಂಜೆಯ ಸಮಯದಲ್ಲಿ ಪಾರ್ಕ್‌ನಲ್ಲಿ ಮುಚ್ಚಲಾಗಿದೆ. ಮನೆಯಿಂದ ಹೊರಹೋದ ಸಮೀರ್‌ ಎಷ್ಟು ಹೊತ್ತಾದರೂ ಮನೆಗೆ ಬಾರದ್ದನ್ನು ಕಂಡು ಕುಟುಂಬಸ್ಥರು ಆತನ ಹುಡುಕಾಟ ಮಾಡಲಾರಂಭಿಸಿದ್ದಾರೆ. ಶನಿವಾರ ಬೆಳಗ್ಗೆ ಇಕೋ ಪಾರ್ಕ್‌ಗೆ ತೆರಳಿ ನೋಡಿದಾಗ ಅಲ್ಲಿ ಆತ ಬಂಡೆಗಳ ಮಧ್ಯೆ ಸಿಲುಕಿಕೊಂಡಿರುವುದು ಗೊತ್ತಾಗಿದೆ.


ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಸಿಬ್ಬಂದಿ ಹಗ್ಗದ ಸಹಾಯದಿಂದ ಸಮೀರ್‌ನನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಈ ವೇಳೆ ಆತನ ಕುಟುಂಬಸ್ಥರು ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು.

Exit mobile version