Site icon Vistara News

ಭೂತಾರಾಧನೆ ಹಿಂದು ಸಂಸ್ಕೃತಿಯ ಒಂದು ಭಾಗ, ಚೇತನ್‌ಗೆ ಸರಿಯಾಗಿ ಗೊತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ

kantara

ಬೆಂಗಳೂರು: ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಬಗ್ಗೆ ಎಲ್ಲ ಕಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, “ಭೂತಕೋಲ ಹಿಂದು ಧರ್ಮದ ಆಚರಣೆಯೇ ಅಲ್ಲ” ಎಂದು ನಟ, ಅಹಿಂಸಾ ಚೇತನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದು, ಭೂತಾರಾಧನೆ ಹಿಂದು ಸಂಸ್ಕೃತಿಯ ಒಂದು ಭಾಗ ಎಂದು ಹೇಳಿದ್ದಾರೆ.

ಕೋಲ ಭೂತ ದೈವದ ಬಗ್ಗೆ ಗೊತ್ತಿಲ್ಲದವರು ಏನೇನೋ ಮಾತನಾಡುತ್ತಿದ್ದಾರೆ. ಅಂಥವರಿಗೆ ನಾನು ಏನನ್ನೂ ಹೇಳುವುದಕ್ಕೆ ಆಗದು. ನಟ ಚೇತನ್‌ಗೆ ಈ ಸಂಸ್ಕೃತಿ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಗೊಂದಲ ಮಾಡುವವರು ನಮ್ಮ ಪರಿಮಿತಿಗೆ ಬರುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಾವು ಹಿಂದುಗಳು, ಭೂತಾರಾಧನೆ ಹಿಂದು ಸಂಸ್ಕೃತಿಯ ಒಂದು ಭಾಗವಾಗಿದೆ. ಅಲ್ಲದೆ, ನಮ್ಮ ಕರಾವಳಿ ಸಂಸ್ಕೃತಿಯ ಭಾಗವೂ ಇದಾಗಿದೆ. ಅಲ್ಲದೆ, ನಮ್ಮ ಬದುಕಿನ ಒಂದು ಭಾಗವಾಗಿ ನಾವು ಪರಿಗಣಿಸಿದ್ದೇವೆ ಎಂದು ಕೋಟ ಹೇಳಿದರು.

ಇದನ್ನೂ ಓದಿ | ಕೊರಗರನ್ನು ಶೋಷಿಸಿದ ಬಂಟ ಸಮುದಾಯ: ಕಾಂತಾರ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿದ ಚೇತನ್‌

Exit mobile version