ಕಡಬ: ಭೂತಕೋಲ (Bhoota kola) ನಡೆಸುವ ವೇಳೆ ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು (Daiva Narthaka) ಇಹಲೋಕ ತ್ಯಜಿಸಿದ ಘಟನೆ ಮಾ.30 ರಂದು ಕಡಬ ಸಮೀಪದ ಎಡಮಂಗಲ ಗ್ರಾಮದಿಂದ ವರದಿಯಾಗಿದೆ.
ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ ಮೃತಪಟ್ಟವರು. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ ಗ್ರಾಮ ದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಾ.30 ರಂದು ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು. ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರೂ ಫಲ ನೀಡಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೃದಯಾಘಾತಕ್ಕೆ ಒಳಗಾಗಿರಬಹುದೆಂದು ವೈದ್ಯರು ಹೇಳಿದ್ದು, ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Karnataka BJP: ಮುಸ್ಲಿಂ ಬಾಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
Murder Case: ದೈವದ ಮುಂದೆ ಪಾಂಗಾಳ ಉದ್ಯಮಿ ಶರತ್ ಶೆಟ್ಟಿ ಕೊಲೆ ಕೇಸ್; ಪಾತಾಳದಲ್ಲಿ ಅಡಗಿದ್ದರೂ ಬಿಡಲ್ಲವೆಂದು ಅಭಯ
ಉಡುಪಿ: ಇಲ್ಲಿನ ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕುಟುಂಬಸ್ಥರು ಈಚೆಗೆ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ವರ್ತೆ ಪಂಜುರ್ಲಿ ನೇಮೋತ್ಸವದಲ್ಲಿ ದೈವದ ಮೊರೆ ಹೋದಾಗ ಕುಟುಂಬಿಕರ ನೋವಿಗೆ ಉತ್ತರಿಸಿದ ದೈವ, ಕೊಲೆಗಡುಕರು ಪಾತಾಳದಲ್ಲಿ ಅಡಗಿದ್ದರೂ ಹುಡುಕುವುದಾಗಿ ಅಭಯ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಕಳೆದ ಫೆ.5ರ ಭಾನುವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಶರತ್ ಶೆಟ್ಟಿ ಅವರ ಹತ್ಯೆ ಮಾಡಲಾಗಿತ್ತು. ಪಾಂಗಾಳದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ಶರತ್ ಮೊಬೈಲ್ ಕರೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಬಂದಿದ್ದರು. ಬಳಿಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಮೊದಲು ಅಪಘಾತವಾಗಿರಬಹುದು ಎಂದು ತಿಳಿದಿದ್ದ ಸ್ಥಳೀಯರಿಗೆ, ಜಾಗದಲ್ಲಿ ಪತ್ತೆಯಾದ ಚೂರಿ ನೋಡಿ ಕೊಲೆ ಶಂಕೆ ವ್ಯಕ್ತವಾಗಿತ್ತು. ಎದೆಯ ಭಾಗಕ್ಕೆ ದುಷ್ಕರ್ಮಿಗಳು ಬಲವಾಗಿ ಚೂರಿ ಹಾಕಿದ್ದ ಹಿನ್ನೆಲೆಯಲ್ಲಿ ಶರತ್ ಶೆಟ್ಟಿ ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಈಗಾಗಲೇ ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದ್ದು, ಒಂದು ತಂಡ ಮಂಗಳೂರಿಗೆ ತೆರಳಿ ತನಿಖೆ ಆರಂಭಿಸಿದೆ. ಇನ್ನೊಂದು ತಂಡ ಶರತ್ ಶೆಟ್ಟಿಯ ಮೊಬೈಲ್ ಮತ್ತು ಹಲವು ಕಡೆ ಸಿಸಿ ಪೂಟೇಜ್ ಆಧರಿಸಿ ಮಾಹಿತಿ ಕಲೆಹಾಕುತ್ತಿದೆ. ಹಲವು ಜನರ ವಿಚಾರಣೆ ನಡೆಸಲಾಗಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸುತ್ತಿದ್ದ ಕಾರಣ ಹಾಗೂ ವ್ಯವಹಾರದ ತಗಾದೆ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದೇ ಎನ್ನುವ ಅನುಮಾನವಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: Karnataka Election 2023: ಅಥಣಿಯಿಂದ ಸ್ಪರ್ಧೆ ಮಾಡುವೆನೆಂದ ಲಕ್ಷ್ಮಣ ಸವದಿ; ಜಾರಕಿಹೊಳಿಗೆ ಸೆಡ್ಡು
ಸದ್ಯ ಪ್ರಕರಣ ಸಂಬಂಧ ಹಲವು ಆರೋಪಿಗಳ ಬಂಧನವಾಗಿದ್ದರೂ, ಪ್ರಮುಖ ಆರೋಪಿ ಪತ್ತೆ ಆಗಿಲ್ಲ. ಹೀಗಾಗಿ ಕುಟುಂಬಸ್ಥರು ಪಂಜುರ್ಲಿ ದೈವದ ಮೊರೆ ಹೋಗಿದ್ದರು. ಈ ವೇಳೆ ದೈವ ಅಭಯ ನೀಡಿದ್ದು ಪೊಲೀಸರ ತನಿಖೆಗೆ ಬಲ ನೀಡುವುದಾಗಿ ಹೇಳಿದೆ. ಮಾತ್ರವಲ್ಲದೆ ಪಾತಾಳದಲ್ಲೇ ಅಡಗಿದ್ದರೂ ಹುಡುಕುವುದಾಗಿ ಹೇಳಿದೆ.