Site icon Vistara News

Bidar News: ಖೂಬಾ ರಾವಣ ಇದ್ದಂತೆ, ಮೋದಿ ಮುಖ ನೋಡಿ ಜನ ಆಯ್ಕೆ ಮಾಡಿದ್ದಾರೆ: ಪ್ರಭು ಚವ್ಹಾಣ್

Bhagwanth Khuba and Prabhu Chauhan

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಲಕ್ಕಿ ಮ್ಯಾನ್‌, ಮೋದಿ ಮುಖ ನೋಡಿ ಜನ ಆಯ್ಕೆ ಮಾಡಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ (Bidar News) ಭಗವಂತ ಖೂಬಾ ವಿರೋಧಿ ಅಲೆ ಆರಂಭವಾಗಿದೆ. ಈ ಬಾರಿ ಖೂಬಾ ಹಠಾವೋ, ಬೀದರ್ ಬಚಾವೋ ನಮ್ಮ ಘೋಷಣೆಯಾಗಿದೆ ಎಂದು ಔರಾದ್‌ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಕಿಡಿಕಾರಿದ್ದಾರೆ.

ಔರಾದ್‌ನಲ್ಲಿ ಮಂಗಳವಾರ ಮಾತನಾಡಿದ ಅವರು, ಭಗವಂತ ಖೂಬಾ ಓರ್ವ ರಾವಣನು ಇದ್ದಂತೆ, ಪರದೆ ಕೀ ಪೀಚೆ ಕ್ಯಾ ಹೈ ಎಂದು ಹುಡುಕಾಡುತ್ತಾರೆ. ಲೋಕಸಭಾ ಕ್ಷೇತ್ರದ ಔರಾದ್‌, ಬಸವಕಲ್ಯಾಣ, ಆಳಂದ ಸೇರಿ ವಿವಿಧೆಡೆ ಖೂಬಾ ವಿರೋಧಿ ಅಲೆ ಇದೆ. ಹೀಗಾಗಿ ಈ ಬಾರಿ ಲೋಕಸಭಾ ಟಿಕೆಟ್ ಬೇರೋಬ್ಬರಿಗೆ ನೀಡಬೇಕು ಎಂದು ಕೇಂದ್ರದ ನಾಯಕರಿಗೆ ಮನವಿ ಮಾಡಿದರು.

ಇದನ್ನೂ HD Kumaraswamy : 2 ದಿನ ಕಾಯಿರಿ, ಬಿಬಿಎಂಪಿ ಕರ್ಮಕಾಂಡ ಮುಂದಿಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ

ಖೂಬಾಗೆ ಟಿಕೆಟ್ ನೀಡದಂತೆ ಪಕ್ಷದೊಳಗೆ ಹೋರಾಟ ಮಾಡುತ್ತೇನೆ. ಕೇಂದ್ರ ಸಚಿವ ಭಗವಂತ ಖೂಬಾ ಸುತ್ತಮುತ್ತ ರೌಡಿ ಜನ ಇದ್ದಾರೆ. ಜೀವ ಭಯದಿಂದ ಎಸ್‌ಪಿ ಮತ್ತು ಐಜಿಗೆ ಮುಚ್ಚಳಿಕೆ ಪತ್ರ ನೀಡಿದ್ದೇನೆ ಎಂದು ತಿಳಿಸಿದರು.

ಭಗವಂತ ಖೂಬಾ ವಿರುದ್ಧ ಹತ್ಯೆಗೆ ಸಂಚು ಆರೋಪ ಮಾಡಿದ್ದ ಶಾಸಕ

ಬೀದರ್ ಜಿಲ್ಲೆಯ ಔರಾದ್‌ನಲ್ಲಿ ಆಗಸ್ಟ್ 9 ರಂದು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ್‌ ಅವರು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಿರುದ್ಧ ಹತ್ಯೆಗೆ ಸಂಚು ಆರೋಪ ಮಾಡಿದ್ದರು. ಭಗವಂತ ಖೂಬಾಗೆ ನನ್ನ ಮೇಲೆ ಕೋಪವಿದ್ದರೆ ಗುಂಡಿಕ್ಕಿ ಹತ್ಯೆ ಮಾಡಲಿ. ಆದರೆ ನಮ್ಮ ಪಕ್ಷ, ಕಾರ್ಯಕರ್ತರಿಗೆ ದ್ರೋಹ ಮಾಡದಿರಲಿ. ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಅದು ವಿಫಲವಾಗಿ ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ. ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ | Karnataka Politics : ಬಿಜೆಪಿ ವರ್ಸಸ್‌ ಕಾಂಗ್ರೆಸ್‌; ಕರ್ನಾಟಕದಲ್ಲಿ ಆಪರೇಷನ್ ಪಾಲಿಟಿಕ್ಸ್!

ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರು, ಸುಳ್ಳು ಆರೋಪ ಮಾಡಿರುವ ಪ್ರಭು ಚವ್ಹಾಣ್‌ ವಿರುದ್ಧ 100 ಕೋಟಿ ರೂ.ಮಾನನಷ್ಟ ಪ್ರಕರಣ ದಾಖಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. ಇದೀಗ ಕೇಂದ್ರ ಸಚಿವರ ವಿರುದ್ಧ ಪ್ರಭು ಚವ್ಹಾಣ್‌ ಮತ್ತೆ ವಾಕ್ಸಮರ ಮುಂದುವರಿಸಿದ್ದಾರೆ.

Exit mobile version