Site icon Vistara News

ಟ್ರಕ್-‌ ಆಟೋ ಡಿಕ್ಕಿಯಲ್ಲಿ ಸಾವಿನ ಸಂಖ್ಯೆ 7ಕ್ಕೆ

accident davanagere jagaluru Prof Vasudevan passes away

ಬೀದರ್:‌ ಐಚರ್ ಟ್ರಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಪ್ರಕರಣದಲ್ಲಿ ಸತ್ತವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಗಾಯಾಳುಗಳಾಗಿದ್ದ ಆರು ಜನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಭಾವತಿ (36), ಯಾದಮ್ಮ (40), ಗುಂಡಮ್ಮ (52), ಜಕ್ಕಮ್ಮ (32), ರುಕ್ಮಿಣಿ (60), ಈಶ್ವರಮ್ಮ (45) ಸಾವೀಗೀಡಾದ ದುರ್ದೈವಿಗಳು. ಆರು ಜನ‌ ಗಾಯಾಳುಗಳಿಗೆ ಬೀದರ್ ಹಾಗೂ ಮನ್ನಾಖೇಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದರ್ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಶುಕ್ರವಾರ ಡಿಕ್ಕಿ ಸಂಭವಿಸಿತ್ತು. ಮೃತಪಟ್ಟ 7 ಮಹಿಳೆಯರು ಹಾಗೂ 6 ಜನ‌ ಗಾಯಾಳುಗಳು ಉಡಮನಳ್ಳಿ ಗ್ರಾಮಸ್ಥರಾಗಿದ್ದಾರೆ.

ಇದನ್ನೂ ಓದಿ | Accident | ಟ್ರಕ್‌- ಆಟೋ ಮುಖಾಮುಖಿ ಡಿಕ್ಕಿಯಾಗಿ ಐವರ ಸಾವು; ಆರು ಮಂದಿಗೆ ಗಂಭೀರ ಗಾಯ

Exit mobile version