Site icon Vistara News

Housing scheme | ವಸತಿ ಯೋಜನೆ ಕಂತಿನ ಹಣ ಬಿಡುಗಡೆ ಆಗುವವರೆಗೂ ನಿರಂತರ ಹೋರಾಟ: ಶಾಸಕ ಈಶ್ವರ್‌ ಖಂಡ್ರೆ

Housing scheme

ಭಾಲ್ಕಿ (ಬೀದರ್): ಮನೆ ಹಂಚಿಕೆಯಲ್ಲಿ ಬೋಗಸ್ ಫಲಾನುಭವಿಗಳು ಇಲ್ಲ, ಎಲ್ಲವೂ ನಿಯಮಾನುಸಾರ ನಡೆದಿವೆ. ಏಳು ಸಾವಿರ ಫಲಾನುಭವಿಗಳು ಶ್ರೀಮಂತರಿದ್ದಾರೆ ಎಂದು ಕಂತಿನ ಹಣ ನಿಲ್ಲಿಸಲಾಗಿದೆ. ಭಾಲ್ಕಿ ಕ್ಷೇತ್ರದಲ್ಲಿ ತಡೆ ಹಿಡಿದಿರುವ ವಸತಿ ಯೋಜನೆ (Housing scheme) ಹಣವು ಫಲಾನುಭವಿಗಳ ಖಾತೆಗೆ ಜಮೆ ಮಾಡುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.

ಬಾಲ್ಕಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಮನೆ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ತಡೆ ಹಿಡಿದಿರುವ ವಸತಿ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮೆ ಮಾಡಿಸಲು ವಿಧಾನಸಭೆಯೊಳಗೆ ಹೋರಾಟ ಮಾಡಿದ್ದೇನೆ. ಬಡ ಜನರ ಕೈಗೆ ತಮ್ಮ ಪಾಲಿನ ಹಣ ಸಿಗುವವರೆಗೂ ವಿಶ್ರಾಂತಿ ಮಾತೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ | ನಾವು ಅನರ್ಹರಾದಾಗ ಅನೇಕರು ಹಾಲು ಕುಡಿದಿದ್ದರು: ಯು.ಬಿ. ಬಣಕಾರ್‌ ಕುರಿತು ಬಿ.ಸಿ. ಪಾಟೀಲ್‌ ಹೇಳಿಕೆ

ಕ್ಷೇತ್ರದ ಎಲ್ಲ ವಸತಿ ರಹಿತರಿಗೆ ಶಾಶ್ವತ ಸೂರು ಒದಗಿಸುವ ಉದ್ದೇಶದಿಂದ ನಾನು ಶಾಸಕನಾಗಿ ಆಯ್ಕೆ ಆದಾಗಿನಿಂದ ಇದುವರೆಗೂ ೨೬ ಸಾವಿರ ಮನೆ ಮಂಜೂರು ಮಾಡಿಸಿದ್ದೇನೆ. ೨೦೧೩-೧೮ರ ವರೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೧೪ ಸಾವಿರ ಮನೆ ಮಂಜೂರು ಮಾಡಿಸಿ, ಸುಮಾರು ೨೦೦ ಕೋಟಿ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.

೧೨ ಸಾವಿರ ವಸತಿ ಮನೆಗಳು ನಿರ್ಮಾಣ ಹಂತದಲ್ಲಿದ್ದವು. ಬಳಿಕ ಚುನಾವಣೆ ಎದುರಾಯಿತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಚುನಾವಣೆಯಲ್ಲಿ ನನ್ನ ವಿರುದ್ಧ ಸೋಲು ಕಂಡ ಡಿ.ಕೆ.ಸಿದ್ರಾಮ ಮತ್ತು ಈಗಿನ ಕೇಂದ್ರ ಮಂತ್ರಿ ಭಗವಂತ ಖೂಬಾ ಸೇರಿ ದುರುದ್ದೇಶದಿಂದ ಸುಳ್ಳು ದೂರು ನೀಡಿ ಬಡ ಜನರ ಸೇರಬೇಕಾಗಿದ್ದ ಕಂತಿನ ಹಣ ತಡೆ ಹಿಡಿದಿದ್ದಾರೆ ಎಂದು ದೂರಿದರು.

ಸುಳ್ಳು, ಮೋಸ, ವಂಚನೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಖೂಬಾ ಮತ್ತು ಡಿ.ಕೆ. ಸಿದ್ರಾಮ ಅವರು ರಾಜಕೀಯದಲ್ಲಿ ಇರಲು ನಾಲಾಯಕ್‌. ಇಂತಹವರಿಂದ ಏನು ನೀರಿಕ್ಷೆ ಮಾಡಲು ಸಾಧ್ಯ? ಹಂಚಿಕೆ ಮಾಡಿರುವ ಮನೆಯಲ್ಲಿ ಬೋಗಸ್ ಸಾಬೀತಾದರೇ ರಾಜೀನಾಮೆ ಕೊಡಲು ಸಿದ್ಧ ಎಂದು ಸವಾಲು ಎಸೆದರು.

ಇದನ್ನೂ ಓದಿ | Voter Data | ಮತಪಟ್ಟಿ, ಜಾತಿಗಣತಿ ಕುರಿತು ಕ್ರಮ ತಗೊಳ್ಳಿ; ಮಾನನಷ್ಟ ಕೇಸನ್ನೂ ಹಾಕಿ ಎಂದ ಡಿ.ಕೆ. ಶಿವಕುಮಾರ್‌

Exit mobile version