Site icon Vistara News

Independence Day | ಬೀದರ್‌ನಲ್ಲಿ ಜಿಟಿಜಿಟಿ ಮಳೆಯಲ್ಲೂ ಮಕ್ಕಳ ಆರ್ಕಷಕ ನೃತ್ಯ!

Independence Day

ಬೀದರ್: ಗಡಿ ಜಿಲ್ಲೆಯಲ್ಲಿ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು (Independence Day) ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.

ಮೊರಾರ್ಜಿ ದೇಸಾಯಿ ಶಾಲೆಯ 700 ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ತಿರಂಗಾದ ದೃಶ್ಯರೂಪವನ್ನು ಕಟ್ಟಿಕೊಟ್ಟರು. ವಿದ್ಯಾರ್ಥಿಗಳ ಈ ನೃತ್ಯವು ಆರ್ಕಷಕವಾಗಿದ್ದಲ್ಲದೆ, ಈ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಮಳೆ ನಡುವೆಯೂ ಮಕ್ಕಳು ವಿಚಲಿತರಾಗದೇ ಅಚ್ಚುಕಟ್ಟಾಗಿ ನೃತ್ಯ ಮಾಡುವ ಮೂಲಕ ಎಲ್ಲರ ಮನ ಗೆದ್ದರು.

ಇದನ್ನೂ ಓದಿ | Independence day | ಸೊಂಡಿಲಲ್ಲಿ ತಿರಂಗಾ ಹಿಡಿದು ಪ್ರಾರ್ಥನೆ ಮಾಡಿದ ಲಕ್ಷ್ಮಿ, ಮೈಗೂ ತ್ರಿವರ್ಣ!

100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ
ಬೀದರ್ ಜಿಲ್ಲಾ ಕ್ರೀಡಾಂಗಣದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭವನ್ನು ನಿರ್ಮಾಣ ಮಾಡಿದ್ದು, ಇದು ಜಿಲ್ಲೆಯಲ್ಲೇ ಅತಿ ಎತ್ತರದ ಧ್ವಜಸ್ತಂಭವಾಗಿದೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಧ್ವಜಾರೋಹಣ ನೆರವೇರಿಸಿದರು. 20×30 ಅಡಿ ಗಾತ್ರದ ಬೃಹತ್ ರಾಷ್ಟ್ರ ಧ್ವಜವೀಗ ಬೀದರ್‌ ನಗರದಲ್ಲಿ ಹಾರಾಡುತ್ತಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ. 22 ಲಕ್ಷ ರೂ. ವೆಚ್ಚದಲ್ಲಿ ಈ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರಾದ ರಹೀಂಖಾನ್, ಬಂಡೆಪ್ಪ ಖಾಶಂಪೂರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ | Independence Day | ಬಿಎಂಟಿಸಿ ರಜತ ಮಹೋತ್ಸವ; ಚಾಲನಾ ಕೌಶಲಕ್ಕಾಗಿ 100 ಚಾಲಕರಿಗೆ ಬೆಳ್ಳಿ ಪದಕ

Exit mobile version