Independence Day | ಬೀದರ್‌ನಲ್ಲಿ ಜಿಟಿಜಿಟಿ ಮಳೆಯಲ್ಲೂ ಮಕ್ಕಳ ಆರ್ಕಷಕ ನೃತ್ಯ! - Vistara News

ಬೀದರ್‌

Independence Day | ಬೀದರ್‌ನಲ್ಲಿ ಜಿಟಿಜಿಟಿ ಮಳೆಯಲ್ಲೂ ಮಕ್ಕಳ ಆರ್ಕಷಕ ನೃತ್ಯ!

ಬೀದರ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ಶಾಲೆಯ 700 ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ಇದನ್ನು ಡ್ರೋನ್‌ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Independence Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೀದರ್: ಗಡಿ ಜಿಲ್ಲೆಯಲ್ಲಿ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು (Independence Day) ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.

ಮೊರಾರ್ಜಿ ದೇಸಾಯಿ ಶಾಲೆಯ 700 ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ತಿರಂಗಾದ ದೃಶ್ಯರೂಪವನ್ನು ಕಟ್ಟಿಕೊಟ್ಟರು. ವಿದ್ಯಾರ್ಥಿಗಳ ಈ ನೃತ್ಯವು ಆರ್ಕಷಕವಾಗಿದ್ದಲ್ಲದೆ, ಈ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಮಳೆ ನಡುವೆಯೂ ಮಕ್ಕಳು ವಿಚಲಿತರಾಗದೇ ಅಚ್ಚುಕಟ್ಟಾಗಿ ನೃತ್ಯ ಮಾಡುವ ಮೂಲಕ ಎಲ್ಲರ ಮನ ಗೆದ್ದರು.

ಇದನ್ನೂ ಓದಿ | Independence day | ಸೊಂಡಿಲಲ್ಲಿ ತಿರಂಗಾ ಹಿಡಿದು ಪ್ರಾರ್ಥನೆ ಮಾಡಿದ ಲಕ್ಷ್ಮಿ, ಮೈಗೂ ತ್ರಿವರ್ಣ!

100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ
ಬೀದರ್ ಜಿಲ್ಲಾ ಕ್ರೀಡಾಂಗಣದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭವನ್ನು ನಿರ್ಮಾಣ ಮಾಡಿದ್ದು, ಇದು ಜಿಲ್ಲೆಯಲ್ಲೇ ಅತಿ ಎತ್ತರದ ಧ್ವಜಸ್ತಂಭವಾಗಿದೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಧ್ವಜಾರೋಹಣ ನೆರವೇರಿಸಿದರು. 20×30 ಅಡಿ ಗಾತ್ರದ ಬೃಹತ್ ರಾಷ್ಟ್ರ ಧ್ವಜವೀಗ ಬೀದರ್‌ ನಗರದಲ್ಲಿ ಹಾರಾಡುತ್ತಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ. 22 ಲಕ್ಷ ರೂ. ವೆಚ್ಚದಲ್ಲಿ ಈ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರಾದ ರಹೀಂಖಾನ್, ಬಂಡೆಪ್ಪ ಖಾಶಂಪೂರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ | Independence Day | ಬಿಎಂಟಿಸಿ ರಜತ ಮಹೋತ್ಸವ; ಚಾಲನಾ ಕೌಶಲಕ್ಕಾಗಿ 100 ಚಾಲಕರಿಗೆ ಬೆಳ್ಳಿ ಪದಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

Karnataka Weather Forecast : ಹಗಲು ಹೊತ್ತು ಬಿಸಿ ಗಾಳಿ ಬೀಸಿದರೆ, ಮಧ್ಯಾಹ್ನದಂದು ಉರಿ ಬಿಸಿಲು ನೆತ್ತಿ ಸುಡುಲಿದೆ. ರಾತ್ರಿಯಾದರೆ ವಾತಾವರಣವು ಬೆಚ್ಚಗೆ ಇರಲಿದೆ. ಈ ಮಧ್ಯೆ ಕೆಲವೆಡೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Dry Weather) ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಇದ್ದರೂ, ಕೆಲವೆಡೆ ಮಳೆಯ (Rain News) ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಏ.2ರಂದು ಮಲೆನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರಿನ ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಮುಖ್ಯವಾಗಿ ಶುಭ್ರ ಆಕಾಶವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರೆಡ್ ಅಲರ್ಟ್

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಮೇ 5ರವರೆಗೆ ಈ ಜಿಲ್ಲೆಗಳಲ್ಲಿ ತಾಪಮಾನ ವಿಪರೀತವಾಗಿ ಇರಲಿದೆ. ಉರಿ ಸೆಕೆಯ ವಾತಾವರಣ ಇರಲಿದೆ.

ಆರೆಂಜ್ ಅಲರ್ಟ್

ಇನ್ನೂ ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ 5 ದಿನಗಳ ಕಾಲ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೇ 5 ರವರೆಗೆ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ‌Prajwal Revanna Case: ಪ್ರಜ್ವಲ್ ಕಾಂಗ್ರೆಸ್‌ ಬೆಂಬಲಿತ ಸಂಸದ; ನಿಮಗಾಗದಿದ್ದರೆ ನಮಗೆ ಅಧಿಕಾರ ಕೊಡಿ, 24 ಗಂಟೆಯಲ್ಲಿ ಹಿಡಿಯುತ್ತೇವೆ: ಅಶೋಕ್

Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದಲ್ಲ, ಇನ್ನೂ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಈ ಘೋರ ಬಿಸಿಲಿನಲ್ಲಿ ಸ್ಮೃತಿ ತಪ್ಪಿದವರ ಸುದ್ದಿಗಳು ಅಲ್ಲಲ್ಲಿ ಕೇಳುತ್ತಿವೆ. ಬಿಸಿಲಾಘಾತಕ್ಕೆ ಜೀವ ತೆತ್ತವರ ವಿಷಯಗಳೂ ಕೇಳಿಬರುತ್ತಿವೆ. ಛತ್ರಿ ಹಿಡಿದೇ ಹೋಗುತ್ತೇವೆ ಹೊರಗೆ, ಚೆನ್ನಾಗಿ ನೀರು ಕುಡಿಯುತ್ತೇವೆ ನಾವು. ನಮಗೇನು ಬಿಸಿಲಿನ ಭಯವಿಲ್ಲ ಎನ್ನುವವರಿದ್ದಾರೆ. ವಿಷಯ ಹಾಗಲ್ಲ, ಬಿಸಿಲ ದಿನಗಳಲ್ಲಿ ಆರೋಗ್ಯದ ಕಾಳಜಿಯನ್ನು ಎಷ್ಟು ಮಾಡಿದರೂ ಸಾಲದು. ಒಮ್ಮೆ ಶಾಖದ ಆಘಾತಕ್ಕೆ ಅಥವಾ ನಿರ್ಜಲೀಕರಣಕ್ಕೆ ತುತ್ತಾದರೆ, ಚೇತರಿಸಿಕೊಳ್ಳಲು ನಾಲ್ಕಾರು ದಿನಗಳಾದರೂ ಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಇವುಗಳಿಂದ (Summer Tips) ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ?

Dry weather Summer Heat

ಏಕೆ ಹೀಗಾಗುತ್ತದೆ?

ಮೊದಲಿಗೆ, ಬಿಸಿಲಿಗೆ ಎಚ್ಚರ ತಪ್ಪುವುದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಹೊರಗಿನ ವಾತಾವರಣದ ಉಷ್ಣತೆಯನ್ನು ಆಧರಿಸಿ, ನಮ್ಮ ದೇಹ ತನ್ನ ಉಷ್ಣತೆಯನ್ನು ಮಾರ್ಪಾಡು ಮಾಡಿಕೊಳ್ಳುತ್ತದೆ. ಹೊರಗಿನ ತಾಪಮಾನ ತೀವ್ರವಾಗಿ ಏರಿಕೆಯಾದಾಗ, ದೇಹದೊಳಗಿನ ಉಷ್ಣತೆಯನ್ನು ತಗ್ಗಿಸುವುದಕ್ಕೆ ಶರೀರ ಬೆವರಲು ಪ್ರಾರಂಭಿಸುತ್ತದೆ. ಇದರಿಂದಲೇ ದೇಹ ತಣ್ಣಗಾಗಬೇಕು, ಆಂತರಿಕ ಉಷ್ಣತೆ ನಿಯಂತ್ರಣದಲ್ಲಿ ಇರಬೇಕು. ಆದರೆ ಈ ಎಲ್ಲ ತಂತ್ರಗಳು ಕೈಕೊಟ್ಟಾಗ, ಸಾಕಾಗದೆ ಇದ್ದಾಗ ಅಥವಾ ಅತಿಯಾಗಿ ಬೆವರಿ ದೇಹದಲ್ಲಿ ನೀರಿನಂಶ ಕಡಿಮೆ ಆದಾಗ, ಎಚ್ಚರ ತಪ್ಪುತ್ತದೆ. ಇದರಿಂದ ಮೆದುಳಿಗೆ ಅಗತ್ಯವಾದಷ್ಟು ರಕ್ತಸಂಚಾರ ಆಗದಿದ್ದರೆ, ಪಾರ್ಶ್ವವಾಯು ಸಂಭವಿಸಿ ಜೀವಹಾನಿಯೂ ಆಗಬಹುದು.

ಮಾನವ ಶರೀರ ತನ್ನಷ್ಟಕ್ಕೆ ತಡೆದುಕೊಳ್ಳಲು ಸಾಧ್ಯವಾಗುವ ಗರಿಷ್ಟ ಉಷ್ಣತೆಯೆಂದರೆ ೪೨.೩ ಡಿಗ್ರಿ ಸೆ. ಇದಿಷ್ಟು ತಡೆಯುವುದೂ ಸುಲಭವಿಲ್ಲ. ಇನ್ನು ಇದಕ್ಕಿಂತಲೂ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಲು ಏನೆಲ್ಲ ಉಪಚಾರ ಸಾಧ್ಯವೋ ಅದನ್ನು ನಮಗೆ ನಾವೇ ಮಾಡಿಕೊಳ್ಳಬೇಕು. ಸಿಕ್ಕಾಪಟ್ಟೆ ನೀರು ಕುಡಿಯುವುದು, ಎಲೆಕ್ಟ್ರೋಲೈಟ್‌ ಮರುಪೂರಣ ಮಾಡುವುದು, ಚೆನ್ನಾಗಿ ಗಾಳಿಯಾಡುವ ವಾತಾವರಣದಲ್ಲಿರುವುದು- ಇಂಥವೆಲ್ಲ ನಾವು ಅಗತ್ಯವಾಗಿ ಮಾಡಬೇಕಾದ ಕೆಲಸಗಳು.

ಉಷ್ಣತೆಗೆ ಮಾತ್ರವಲ್ಲ

ತೀವ್ರ ತಾಪಮಾನಗಳಿಗೆ ಎಚ್ಚರ ತಪ್ಪುವುದು ಬಿಸಿ ಹೆಚ್ಚಾದಾಗ ಮಾತ್ರವಲ್ಲ, ತೀವ್ರ ಚಳಿಯಲ್ಲೂ ಆಗುತ್ತದೆ. ಈ ಎರಡೂ ಅತಿರೇಕದ ತಾಪಮಾನಗಳಲ್ಲಿ ದೇಹದ ಉಷ್ಣತಾ-ನಿಯಂತ್ರಕ ವ್ಯವಸ್ಥೆ ಕೈಕೊಡಬಹುದು. ಬಿಸಿ ಹೆಚ್ಚಾದಾಗ ಮೆದುಳಿಗೆ ರಕ್ತಸಂಚಾರ ಸರಾಗ ಆಗದಿರುವ ಸಂಭವ ಇರುವದಂತೆಯೇ, ಚಳಿ ಹೆಚ್ಚಾದಾಗಲೂ ಆಗುತ್ತದೆ. ಹೊರಗಿನ ಚಳಿ ತೀವ್ರವಾಗಿ ಹೆಚ್ಚಾದರೆ, ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೆ ರಕ್ತ ನಾಳಗಳು ಸಂಕೋಚಗೊಳ್ಳುತ್ತವೆ. ಹೀಗೆ ಸಂಕೋಚಗೊಳ್ಳುವುದು ಅತಿಯಾದರೆ ಆಗಲೂ ಮೆದುಳಿಗೆ ಬೇಕಾದಷ್ಟು ರಕ್ತಸಂಚಾರ ಆಗದೆ ಜ್ಞಾನ ತಪ್ಪಬಹುದು.

Summer Fashion

ತಪ್ಪಿಸಿಕೊಳ್ಳಲಾಗದೆ?

ಖಂಡಿತ ಸಾಧ್ಯವಿದೆ. ಮೊದಲಿಗೆ, 40 ಡಿ.ಸೆ. ಉಷ್ಣತೆಯನ್ನು ತಲುಪಿದಾಗ ಮನೆಯಿಂದ ಹೊರಗೆ ಹೋಗಬೇಡಿ. ಹೋಗುವುದು ಅನಿವಾರ್ಯವಾದರೆ, ಸಡಿಲವಾದ ಬಿಳಿ ಅಥವಾ ತಿಳಿ ಬಣ್ಣದ ಹತ್ತಿಯ ಬಟ್ಟೆಗಳನ್ನೇ ಧರಿಸಿ. ತಲೆಗೆ ಟೋಪಿ, ಛತ್ರಿಗಳಂಥವು ಇದ್ದರೆ ಒಳ್ಳೆಯದು. ನಿಲ್ಲಿಸಿದ ಕಾರಿನೊಳಗೆ ಯಾರನ್ನೂ ಬಿಡಬೇಡಿ. ಈ ಸೆಕೆಯಲ್ಲಿ ದಿನಕ್ಕೆ ಐದು ಲೀಟರ್‌ ನೀರು ಅಥವಾ ಪೇಯಗಳನ್ನು ಕುಡಿಯುವ ಗುರಿ ಇರಿಸಿಕೊಳ್ಳಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆಯ ಮೇಲೆ ಕಡಿವಾಣ ಅಗತ್ಯ. ಇಲ್ಲದಿದ್ದರೆ ದೇಹ ಬೇಗನೇ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಜೊತೆಗೆ, ಸೆಕೆಯಲ್ಲಿ ದೇಹವನ್ನು ತಂಪಾಗಿಸುವ ಶಾರೀರಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ತಲೆನೋವು, ಅತಿಯಾಗಿ ಬೆವರುವುದು, ಬಾಯಿ ಒಣಗುವುದು, ತೀರದ ದಾಹ, ಮೈಯೆಲ್ಲ ಬಿಸಿಯಾದ ಅನುಭವಗಳು ಆದರೆ ಜಾಗ್ರತೆ ಮಾಡಿ. ತಕ್ಷಣವೇ ದೇಹವನ್ನು ತಂಪಾಗಿಸುವ ಬಗ್ಗೆ ಕ್ರಮ ಕೈಗೊಳ್ಳಿ. ತಂಪಾದ ಬಟ್ಟೆಯಿಂದ ಇಡೀ ದೇಹವನ್ನು ಒರೆಸಬಹುದು. ಒಆರೆಸ್‌, ಎಳನೀರು ಮುಂತಾದ ಎಲೆಕ್ಟ್ರೋಲೈಟಿಕ್‌ ಪೇಯಗಳು ಬೇಕಾಗುತ್ತವೆ. ಕೂಲರ್‌, ಎಸಿಯಂಥ ಉಪಕರಣಗಳ ಮೂಲಕ ಮನೆಯ ವಾತಾವರಣವನ್ನು ತಂಪಾಗಿಸಲು ಪ್ರಯತ್ನಿಸಿ. ಈ ಹೊತ್ತಿನಲ್ಲಿ ಮನೆಯಿಂದ ಹೊರಗಿದ್ದರೆ, ತಂಪಾದ ನೆರಳಿನಂಥ ಜಾಗಕ್ಕೆ ಹೋಗಿ. ಬಿಸಿಲಿನ ಆಘಾತ ತಾಗಿದಾಗ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಜೀವಕ್ಕೇ ಎರವಾಗುತ್ತದೆ, ನೆನಪಿರಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka weather Forecast : ಮಳೆಗಾಗಿ (Rain News) ಕಸರತ್ತು ಶುರುವಾಗಿದ್ದು ಮೈಸೂರಲ್ಲಿ ಕಪ್ಪೆಗಳಿಗೆ ಮದುವೆ ಮಾಡಲಾಗಿದೆ. ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ಗ್ರಾಮಸ್ಥರು ತಾಳಿ ಕಟ್ಟಿಸಿದ್ದಾರೆ. ಇತ್ತ 6 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಪ್ಪಳಿಸಲಿದ್ದು, ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ.

VISTARANEWS.COM


on

By

karnataka weather Forecast
Koo

ಮೈಸೂರು/ಬೆಂಗಳೂರು: ಮಳೆ ಆಗದೆ ನೀರಿಗಾಗಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದ್ದು, ಜನರು ಮಳೆಗಾಗಿ ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಈಗ ಮೈಸೂರಿನ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ. ಮಳೆ ಬಾರದಿರುವ ಸಂಕಟದ (Karnataka Weather Forecast) ಮಧ್ಯೆ ಮಳೆ ಬರಲಿ (Rain News), ವರುಣ ದೇವ ಸಂತುಷ್ಟಗೊಳ್ಳಲಿ, ದಿನವೂ ಮೈ ತೊಪ್ಪೆಯಾಗುವಷ್ಟು ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಬಿಸಿಲಿನ ಬೇಗೆಗೆ ತತ್ತರಿಸಿದ ಜನರು ಮಳೆ ಸುರಿಯುವಂತೆ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದರು. ಗ್ರಾಮದ ಬೀದಿ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಿ ತಮಟೆ ಬಾರಿಸಿದ್ದಾರೆ. ಹುಯ್ಯೋ ಹುಯ್ಯೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

ಮುಂದುವರಿಯಲಿದೆ ಒಣಹವೆ

ರಾಜ್ಯಾದ್ಯಂತ ಇನ್ನೆರಡು ದಿನಗಳು ಒಣಹವೆ ಇರುವ ಸಾಧ್ಯತೆ ಇದೆ. ಏ.2-3ರಂದು ಶುಷ್ಕ ವಾತಾವರಣ ಇದ್ದರೆ, ಏಪ್ರಿಲ್‌ 4ರಂದು ಚಾಮರಾಜನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ.

ರಾತ್ರಿ ಬೆಚ್ಚನೆಯ ವಾತಾವರಣ

ಮುಂದಿನ 5 ದಿನಗಳವರೆಗೆ ಕರ್ನಾಟಕದ ಉತ್ತರ ಒಳಭಾಗದಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮೇ 5ರಂದು ಉತ್ತರ ಕನ್ನಡ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Karnataka Weather: ಇಂದು ಬೀದರ್, ಕಲಬುರಗಿ ಸೇರಿ ಹಲವೆಡೆ ಶಾಖದ ಅಲೆ ಎಚ್ಚರಿಕೆ; ಇನ್ನೂ ಎಲ್ಲಿಯವರೆಗೆ ಈ ರಣ ಬಿಸಿಲು?

Karnataka Weather: ರಾಜ್ಯದ ಬಹುತೇಕ ಕಡೆ ಮೇ 5ರವರೆಗೆ ರಣ ಬಿಸಿಲು ಕಾಡಲಿದೆ. ಇನ್ನು ಮೇ 2 ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ಏಪ್ರಿಲ್ 29ರಂದು ಸೋಮವಾರ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಪರಿಸ್ಥಿತಿ ಮೇ 5ರವರೆಗೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿದ್ದ ಮಳೆಯು, ಕಳೆದ ನಾಲ್ಕೈದು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಭಾನುವಾರ ಸಹ 38.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ (Karnataka Weather) ವರದಿಯಾಗಿದೆ. ಇನ್ನು ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, 8 ವರ್ಷಗಳ ಬಳಿಕ ಗರಿಷ್ಠ ತಾಪಮಾನಕ್ಕೆ ನಗರ ಸಾಕ್ಷಿಯಾಗುತ್ತಿದೆ.

ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ 2 ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಭಾನುವಾರ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ 3.5ರಿಂದ 5 ಡಿ. ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆಯಾಗಿದೆ. ಇನ್ನು ಮೇ 2 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಏಪ್ರಿಲ್ 29ರಂದು ಬೀದರ್, ಕಲಬುರಗಿ, ಬಿಜಾಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಪರಿಸ್ಥಿತಿ ಮೇ 5ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ | Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 38°C ಮತ್ತು 23°C ಇರುವ ಸಾಧ್ಯತೆ ಇದೆ.

Continue Reading

ಮಳೆ

Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Karnataka Weather Forecast : ರಾಜ್ಯಾದ್ಯಂತ ತಾಪಮಾನ ಏರಿಕೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜನ-ಸಾಮಾನ್ಯರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

VISTARANEWS.COM


on

By

karnataka weather forecast
Koo

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಏಪ್ರಿಲ್‌ 30ರವರೆಗೆ ಹೀಟ್‌ ವೇವ್‌ (heat Wave) ಪ್ರಭಾವ ಇರಲಿದೆ.

ಪ್ರಮುಖವಾಗಿ ಉತ್ತರ ಒಳನಾಡಿ ಬೀದರ್, ಕಲಬುರಗಿ, ವಿಯಜಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಬಳ್ಳಾರಿ, ವಿಜಯನಗರ ಹಾಗೂ ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಜತೆಗೆ ಹೀಟ್‌ ವೇವ್‌ ಹೆಚ್ಚಾಗುವ ಸಾಧ್ಯತೆ ಇದೆ.

ಬಿಸಿ ಗಾಳಿ ಎಚ್ಚರಿಕೆ

ಏಪ್ರಿಲ್ 27 ರಿಂದ ಮೇ 1ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 23 ಡಿ.ಸೆ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ: Murder Case : ದೊಡ್ಡವರ ಹಣಕಾಸು ವಿಷ್ಯಕ್ಕೆ 3 ವರ್ಷದ ಮಗು ಬಲಿ; ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

ಸೂರ್ಯನ ತಾಪವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೇವರಿಸುವ ಸೂರ್ಯನ ಶಾಖವು ಜನರು ಆರೋಗ್ಯದ ಮೇಲೂ ಪರಿಣಾಮ (Health Tips) ಬೀರುತ್ತಿದೆ. ಸಾರ್ವಜನಿಕರು ಏನು ಮಾಡಬೇಕು ಏನು ಮಾಡಬಾರದು ಎಂಬ ಮಾಹಿತಿ ಇಲ್ಲದೆ.

ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು?

ಸಾಮಾನ್ಯವಾಗಿ ದೇಹದ ಉಷ್ಣತೆಯು 36.4 ಡಿ.ಸೆ ನಿಂದ 37.2 ಡಿ.ಸೆ ಇರಲಿದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು (prickly heat), ಊತಗಳು ( ಕೈ-ಕಾಲುಗಳು ಹಾಗೂ ಮೊಣಕಾಲು), ಉಷ್ಣತೆಯಿಂದ ಸೆಳೆತ (ಸ್ನಾಯುಗಳ ಸೆಳೆತ), ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಹಾಗೂ ಪಾಶ್ವವಾಯು ಉಂಟಾಗಲಿದೆ. ಕೆಲವೊಮ್ಮೆ ಅತಿಯಾದ ಉಷ್ಣತೆಯಿಂದಾಗಿ ಹೃದ್ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತದೆ. ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ತಲೆನೋವು ಹಾಗೂ ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚಾಗಲಿದೆ.

ಏನು ಮಾಡಬೇಕು?
-ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ. ನೀರಿನ ಸೇವನೆ ಅತ್ಯುತ್ತಮ.
-ಹೆಚ್ಚು ನೀರು ಕುಡಿಯುವುದು. ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಸೇವಿಸಿ. ಜತೆಗೆ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ ಹಾಗು ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
-ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟೂಸ್, ಎಳನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
-ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
-ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಿರಿ.
-ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
-ಸಾಧ್ಯವಾದಷ್ಟು ಒಳಾಂಗಣದಲ್ಲಿದ್ದು, ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿ.

ಈ ಕೆಲಸವನ್ನು ಮಾಡಬಾರದು

-ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಿ.
-ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ.
-ಮಧ್ಯಾಹ್ನ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
-ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.
-ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
-ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನಾಪಮಾನವು ಅಪಾಯಕಾರಿಯಾಗಬಹುದು.
-ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್‌ ಅಥವಾ ಅದಕ್ಕಿಂತ ಹೆಚ್ಚಿನ ನೀರು ಕುಡಿಬೇಕು

Heat wave

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal Revanna Case HD DeveGowda and HD Kumaraswamy slams HD Revanna
ಕ್ರೈಂ19 mins ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್23 mins ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ24 mins ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Viral News
ವೈರಲ್ ನ್ಯೂಸ್38 mins ago

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Uber Cup 2024 Quarterfinal
ಕ್ರೀಡೆ47 mins ago

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Ambedkar statue
ಕಲಬುರಗಿ53 mins ago

Ambedkar Statue: ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣ ಸಿಐಡಿಗೆ ಹಸ್ತಾಂತರ! ಡಾ. ಜಿ. ಪರಮೇಶ್ವರ್‌

Prajwal Revanna Case These are the questions SIT will ask Prajwal
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

Narendra Modi
ದೇಶ1 hour ago

Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

gold rate today
ಚಿನ್ನದ ದರ1 hour ago

Gold Rate Today: ನಿನ್ನೆ ಇಳಿದ ಚಿನ್ನದ ಬೆಲೆ ಇಂದು ತೀವ್ರ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ದರಗಳು ಹೀಗಿವೆ

Self Harming
ಕಲಬುರಗಿ1 hour ago

Self Harming : ಕಲಬುರಗಿಯಲ್ಲಿ ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌