Site icon Vistara News

DK Shivakumar: ಡಿಕೆಶಿಗೆ ಬಿಗ್ ರಿಲೀಫ್; ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾಗಿದ್ದ ಕೇಸ್ ರದ್ದು

DK Shivakumar in mekedatu padayatra

#image_title

ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ (DK Shivakumar) ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದಾಗಿದೆ. ಪಾದಯಾತ್ರೆ ವೇಳೆ ಕೋವಿಡ್‌-19 ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ಡಿಕೆಶಿ ವಿರುದ್ಧ ದಾಖಲಾಗಿದ್ದವು. ಅವುಗಳಲ್ಲಿ ಒಂದು ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿದ್ದು, ಮತ್ತೆರಡು ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಡಿಕೆಶಿ ತುಸು ನಿರಾಳರಾಗುವಂತಾಗಿದೆ.

2022ರ ಜನವರಿ 9ರಿಂದ ಹತ್ತು ದಿನಗಳ ನಡೆದಿದ್ದ ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್‌-19 ನಿಯಮಾವಳಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ (ಎನ್ಡಿಎಂಎ ಕಾಯ್ದೆ) ಅಡಿ ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದಾಗಿದೆ. ಇನ್ನು ಹಲಸೂರ್ ಗೇಟ್, ಶಿವಾಜಿನಗರ ಠಾಣೆ ಕೇಸ್ ತನಿಖೆಗೆ ತಡೆಯಾಜ್ಞೆ ನೀಡಲಾಗಿದೆ.

ಇದನ್ನೂ ಓದಿ | RSS: ʼಆರ್‌ಎಸ್‌ಎಸ್‌ʼಗೆ ನೀಡಿದ್ದ ಭೂಮಿ ಹಿಂಪಡೆಯಲಿದೆಯೇ ಸರ್ಕಾರ?: ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ

ಎನ್ಡಿಎಂಎ ಕಾಯ್ದೆ ಅಡಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನೂ ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್‌ ಪರ ವಕೀಲ ಅರ್ನವ್ ಬಾಗಲವಾಡಿ ಹೈಕೋರ್ಟ್‌ ಅರ್ಜಿ ಸಲ್ಲಿಸಿ ವಾದ ಮಂಡಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಒಂದು ಪ್ರಕರಣ ರದ್ದು ಮಾಡಿ, ಎರಡು ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದೆ.

Exit mobile version