ಬೆಂಗಳೂರು: ಸಂಚಾರಿ ನಿಯಮದ ಕುರಿತು ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಕೆಲ ವಾಹನ ಸವಾರರು ನಿರ್ಲಕ್ಷ್ಯವಹಿಸುತ್ತಾ ಮೃತ್ಯುವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಹೀಗೆ ಬಿಬಿಎಂಪಿ ಹೆಲ್ತ್ ಇನ್ಸ್‌ಪೆಕ್ಟರ್‌ವೊಬ್ಬರು ಅತಿ ವೇಗದ ಚಾಲನೆ ಜತೆಗೆ ಸಿಗರೇಟ್ ಸೇದುತ್ತಾ ಬೈಕ್ ಚಾಲನೆ ಮಾಡಲು ಹೋಗಿ ಅಪಘಾತದಲ್ಲಿ (Bike Accident) ಮೃತಪಟ್ಟಿರುವ ಘಟನೆ ನಡೆದಿದೆ.
ಬಿಬಿಎಂಪಿ ಹೆಲ್ತ್ ಇನ್ಸ್‌ಪೆಕ್ಟರ್ ಪ್ರಶಾಂತ್ ನಾಯ್ಕ್ (27) ಸ್ವಯಂ ಅಪಘಾತದಿಂದ ಮೃತಪಟ್ಟವರು. ಸೋಮವಾರ ತಡರಾತ್ರಿ ಸುಮಾರು 12.40 ಗಂಟೆಗೆ ಬೈಕ್ ಚಾಲನೆ ಮಾಡಿಕೊಂಡು ಬಂದ ಪ್ರಶಾಂತ್ ಬಾಷ್ಯಂ ವೃತ್ತದ ಮಾರ್ಗವಾಗಿ ಮಾರಮ್ಮ ವೃತ್ತದ ಕಡೆಗೆ ಗೋಕಾಕ್ ಪಾರ್ಕ್ ಬಳಿ ಬರುತ್ತಿದ್ದರು. ಅತಿ ವೇಗವಾಗಿ ಬರುತ್ತಿರುವುದರ ಜತೆಗೆ ಸಿಗರೇಟ್ ಸೇದಿಕೊಂಡು ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ, ನಿಯಂತ್ರಣ ತಪ್ಪಿದೆ.
ನಿಯಂತ್ರಣ ತಪ್ಪಿದ ಬೈಕ್ ಫುಟ್‌ಪಾತ್‌ಗೆ ಉಜ್ಜಿಕೊಂಡು ಹೋಗಿದೆ. ಈ ವೇಳೆ ರಸ್ತೆಗೆ ಬಿದ್ದ ಪ್ರಶಾಂತ್ ನಾಯ್ಕ್ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಈ ವೇಳೆ ಪರೀಕ್ಷಿಸಿದಾಗ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಅದೇ ಆಂಬ್ಯುಲೆನ್ಸ್ ಮೂಲಕ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಶವವನ್ನು ಸಾಗಿಸಲಾಗಿದೆ.
ಇದನ್ನೂ ಓದಿ | Found Dead | ಮೇಕೆ ಮೇಯಿಸಲು ತೆರಳಿದಾಗ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆ; ನೇಣು ಬಿಗಿದುಕೊಂಡು ಅಪರಿಚಿತ ವೃದ್ಧ ಸಾವು