Site icon Vistara News

Road accident | ಕೆಎಸ್ಸಾರ್ಟಿಸಿ ಬಸ್‌ಗೆ ಹಿಂಭಾಗದಿಂದ ಡಿಕ್ಕಿ ಹೊಡೆದ ಬೈಕ್‌: ಸವಾರನಿಗೆ ಗಂಭೀರ ಗಾಯ

Srinivaspura accident

ಕೋಲಾರ: ಕೆ.ಎಸ್.ಅರ್.ಟಿ.ಸಿ ಬಸ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು (Road accident) ಸವಾರ ಗಂಭೀರ ಗಾಯಗೊಂಡ ಘಟನೆ ಶ್ರೀನಿವಾಸಪುರ ಪಟ್ಟಣದ ಬಾಲಕಿಯರ ಕಾಲೇಜಿನ ಮುಂಭಾಗ ನಡೆದಿದೆ. ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಡಿಚೇರುವು ಗ್ರಾಮದ ಚೌಡಪ್ಪ (೨೬) ಅವರೇ ಗಾಯಾಳು ಸವಾರ. ಅವರು ಶ್ರೀನಿವಾಸಪುರದಿಂದ ಮದನಪಲ್ಲಿ ರಸ್ತೆಯಲ್ಲಿ ಬಸ್ ಹೋಗುತಿದ್ದ ವೇಳೆ ಹಿಂಬದಿಯಿಂದ ಬೈಕ್ ಬಸ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನನ್ನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಲೆಗೆ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿ ನೀರುಪಾಲು
ಮೈಸೂರು: ಈಜಲು ಹೋದ ಕಾಲೇಜು ವಿದ್ಯಾರ್ಥಿಯೊಬ್ಬ ನೀರುಪಾಲಾಗಿದ್ದಾನೆ (Youth drowned). ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟ ಯುವಕನನ್ನು ಸುದೀಪ್(20) ಎಂದು ಗುರುತಿಸಲಾಗಿದೆ.

ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಸುದೀಪ್‌ ಸ್ನೇಹಿತರೊಂದಿಗೆ ಚುಂಚನಕಟ್ಟೆ ದೇವಸ್ಥಾನಕ್ಕೆ ಬಂದಿದ್ದ. ಅಲ್ಲಿ ಸ್ನೇಹಿತರೊಂದಿಗೆ ಕಾವೇರಿ ನದಿಯ ಸೀತಾಮಡುವಿನಲ್ಲಿ ಈಜಲು ಹೋಗಿದ್ದಾಗ ದುರಂತ ಸಂಭವಿಸಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder case | ಆಸ್ತಿ ಜಗಳ ತಾರಕಕ್ಕೇರಿ ಮಾವನನ್ನೇ ಕೊಂದ ಅಳಿಯಂದಿರು

Exit mobile version