Site icon Vistara News

Bike theft : ಉಳ್ಳಾಲದಲ್ಲಿ ಸರಣಿ ಬೈಕ್‌ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರಿಗಾಗಿ ಪೊಲೀಸರ ಹುಡುಕಾಟ!

bike theft

#image_title

ಉಳ್ಳಾಲ: ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ (Bike theft) ನಡೆದಿದ್ದು ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನು ನಸುಕಿನ ವೇಳೆ ಇಬ್ಬರು ಕಳ್ಳರು ಕಳವು ನಡೆಸಿರುವ ಘಟನೆ ನಡೆದಿದೆ. ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.66 ರ ಉದ್ದಕ್ಕೂ ಹಲವು ಸಮಯದಿಂದ ಸರಣಿಯಾಗಿ ಬೈಕ್ ಕಳವಾಗುತ್ತಿದ್ದರೂ ಕಳ್ಳರ ಪತ್ತೆಯಾಗುತ್ತಿಲ್ಲ.

ಕೋಟೆಕಾರು ವಿನಾಯಕ ಇಲೆಕ್ಟ್ರಿಕಲ್ಸ್ ನ ಡಿಜೆ ಪ್ಲೇಯರ್ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಕಳವು ಮಾಡಲಾಗಿದೆ.ಮಂಗಳವಾರ ಮುಂಜಾನೆ ನಸುಕಿನ 1.42ರ ವೇಳೆ ಇಬ್ಬರು ಕಳ್ಳರು ಬೈಕನ್ನು ಕಳವು ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ತೊಕ್ಕೊಟ್ಟಿನ ಹಳೆಯ ಬೈಕ್ ಮಾರಾಟದ ಶೋರೂಮಲ್ಲೂ ಬೈಕ್ ಕಳವಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ಕಳೆದ ಶನಿವಾರ ನರಿಂಗಾನದಲ್ಲಿ ನಡೆಯುತ್ತಿದ್ದ ಕಂಬಳ ಉತ್ಸವದಲ್ಲೂ ವ್ಯಕ್ತಿಯೊಬ್ಬರ ಬೈಕ್ ಕಳವಾಗಿದೆ. ಕಂಬಳ ಉತ್ಸವದಲ್ಲಿ ಸಾವಿರಾರು ವಾಹನ ಜಮಾಯಿಸಿದ್ದರಿಂದ ಎಲ್ಲೊ ಬೈಕ್ ಮಿಸ್ ಆಗಿರಬಹುದೆಂದು ಕೊಣಾಜೆ ಪೆÇಲೀಸರು ಇನ್ನೂ ದೂರು ದಾಖಲಿಸಿಲ್ಲ. ತಿಂಗಳುಗಳ ಹಿಂದೆ ಕೊಲ್ಯ ಗಂಗೂಸ್ ಕಿಚನ್ ಬಳಿ ನಿಲ್ಲಿಸಲಾಗಿದ್ದ ಗಂಗಾಧರ್ ಎಂಬವರಿಗೆ ಸೇರಿದ ಬೈಕ್ ಕಳವು ನಡೆದಿದೆ.

ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿಯ ಉದ್ಯಮಿಯೊಬ್ಬರ ಮನೆಯಿಂದ ಐದು ವರುಷದ ಹಿಂದೆಯೇ ಬುಲೆಟ್ ಒಂದನ್ನು ಕಳ್ಳರು ಎಗರಿಸಿದ್ದರು.ನಂತರ ಮಡಿಕೇರಿಯಲ್ಲಿ ನಂಬರ್ ಪ್ಲೇಟ್ ಬದಲಿಸಿ ತಿರುಗುತ್ತಿದ್ದ ಅದೇ ಬುಲೆಟ್ ಪತ್ತೆಯಾಗಿತ್ತು. ಎರಡು ವರುಷದ ಹಿಂದೆ ಮತ್ತೆ ಅವರದೇ ಮನೆಯಿಂದ ಬೈಕನ್ನು ಕಳವು ನಡೆಸಿ ರಸ್ತೆಯಲ್ಲಿ ಇರಿಸಲಾಗಿತ್ತು, ಇದೇ ಸಂದರ್ಭ ಸಮೀಪದ ಕೊಲ್ಯದ ಮನೆಯೊಂದರಿಂದಲೂ ಬುಲೆಟ್ ಒಂದನ್ನು ಕದ್ದು ರಸ್ತೆಯಲ್ಲಿರಿಸಿದ ಕಳ್ಳರು ಒಯ್ಯಲು ಪ್ಲ್ಯಾನ್‌ ಹಾಕಿದ್ದಾಗ ಅವರ ಪಿಕ್ ಅಪ್ ವಾಹನವೇ ಕೆಟ್ಟು ಕೈಕೊಟ್ಟಿತ್ತಂತೆ.

ಓಮಿನಿಯಲ್ಲಿ ತಲವಾರು ಹಿಡಿದ ಗ್ಯಾಂಗ್ ಮನೆ ಕಂಪೌಂಡಿನೊಳಗೆ, ಬಾರ್, ವಾಣಿಜ್ಯ ಮಳಿಗೆಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕಳವು ನಡೆಸಿ ರಸ್ತೆ ಬದಿ ತಂದು ನಿಲ್ಲಿಸುತ್ತದೆ .ಹಿಂದಿನಿಂದ ಪಿಕ್ ಅಪ್ ವಾಹನದಲ್ಲಿ ಬರುವ ಕಳ್ಳರು ವ್ಯವಸ್ಥಿತವಾಗಿ ಕೇರಳಕ್ಕೆ ಸಾಗಿಸುವ ಜಾಲವನ್ನ ಸ್ಥಳೀಯ ಉದ್ಯಮಿ ಈ ಹಿಂದೆಯೇ ಸಿಸಿಟಿವಿ ದಾಖಲೆಗಳಿಂದ ಕಂಡು ಹಿಡಿದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Theft Case: ಶೋಕಿಗಾಗಿ ದರೋಡೆ ಮಾಡುತ್ತಿದ್ದವರು ಸೆರೆ; ಲೋನ್‌ ವಂಚಕರು ಜೈಲುಪಾಲು

Exit mobile version