Site icon Vistara News

Bike wheeling : ಕದ್ದ Rx ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ಖತರ್ನಾಕ್‌ಗಳು ಅರೆಸ್ಟ್‌

Bike wheeling theft arrested

ಬೆಂಗಳೂರು: ರಾಜ್ಯದಲ್ಲಿ ಬೈಕ್ ವೀಲಿಂಗ್‌ (Bike wheeling) ಹುಚ್ಚಾಟವು ಮಿತಿಮೀರಿದೆ. ಅದರಲ್ಲೂ ಇನ್‌ಸ್ಟಾದಲ್ಲಿ (instagram reels) ಹೆಚ್ಚು ಲೈಕ್‌ ಪಡೆಯಬೇಕು ಎಂದು ವೀಲಿಂಗ್‌ ಗೀಳಿಗೆ ಬಿದ್ದ ಕಳ್ಳರು ಕದ್ದ ಬೈಕ್‌ನಲ್ಲಿ (Bike theft case) ವೀಲಿಂಗ್‌ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಆರೋಪಿಗಳ ಬಂಧನ

ರಿತಿಕ್ ಮತ್ತು ಪವನ್ ಬಂಧಿತ ಅರೋಪಿಗಳಾಗಿದ್ದಾರೆ. ಯಮಹ ಆರ್‌ಎಕ್ಸ್ ಬೈಕ್‌ಗಳ ಹಿಂದೆ ಬಿದ್ದ ಇವರಿಬ್ಬರು, ಕಳ್ಳತನ ಮಾಡಿ ವೀಲಿಂಗ್ ಮಾಡುತ್ತಿದ್ದರು. ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಆರ್‌ಎಕ್ಸ್ ಬೈಕ್‌ಗಳ ಹ್ಯಾಂಡ್‌ ಲಾಕ್‌ ಮುರಿದು, ನಂತರ ಕದ್ದ ಬೈಕ್‌ನಲ್ಲಿ ಸ್ಟಂಟ್‌ಗಳನ್ನು ಮಾಡುತ್ತಿದ್ದರು.

ಕದ್ದ ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ಕಿಡಿಗೇಡಿಗಳು

ಇದೆಲ್ಲವನ್ನು ವಿಡಿಯೊ ಮಾಡಿಕೊಂಡು ಇನ್‌ಸ್ಟಾದಲ್ಲಿ ಹಾಕಿ ಲೈಕ್ ಪಡೆದು ಬಳಿಕ ಫೇಮಸ್ ಆಗುವ ಖಯಾಲಿ ಹೊಂದಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆಯನ್ನು ಹೈಗ್ರೌಂಡ್ಸ್ ಪೊಲೀಸರು ನಡೆಸುತ್ತಿದ್ದಾರೆ.

ದೇವರ ಚಿನ್ನಾಭರಣ ಎಗರಿಸಿದ ಖರೀಮರು

ಕೊಡಗು ಜಿಲ್ಲೆಯ ಕುಶಾಲನಗರದ ದೇವಾಲಯದಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಕುಶಾಲನಗರದ ಬ್ಲೂಮೂನ್ ಪೆಟ್ರೋಲ್ ಬಂಕ್ ಮುಂಭಾಗದ ಆದಿಶಕ್ತಿ ಅಂತರಘಟ್ಟಮ್ಮ ದೇವಾಲಯದ ಕಾಣಿಕೆ ಹುಂಡಿ, ಚಿನ್ನಾಭರಣವನ್ನು ಎಗರಿಸಿದ್ದಾರೆ.

ಗರ್ಭ ಗುಡಿ ಒಳಗಿದ್ದ 4 ಚಿನ್ನದ ತಾಳಿ, ಅಂದಾಜು 300 ಗ್ರಾಂನ ಬೆಳ್ಳಿ ಮುಖವಾಡ ಕಳವು ಮಾಡಿದ್ದಾರೆ. ಕಳ್ಳತನ ಮಾಡಿ ಸಿಕ್ಕಿಹಾಕಿಕೊಳ್ಳಬಾರದೆಂದು ಸಿಸಿ ಕ್ಯಾಮೆರಾದ ಡಿವಿಆರ್ ಕೂಡ ಹೊತ್ತೊಯ್ಯದಿದ್ದಾರೆ. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version